ಪಾಣಿಮಂಗಳೂರು : ಜ.8ರಂದು ಖಾಝಿ ಕೋಟ, ಸಿಎಂ ಉಸ್ತಾದ್ ಕೃತಿ ಬಿಡುಗಡೆ, ಅನುಸ್ಮರಣೆ

ಬಂಟ್ವಾಳ : ಧಾರ್ಮಿಕ ಸಾಮಾಜಿಕ ರಂಗದಲ್ಲಿ ನಾನಾ ರೀತಿಯ ಕೊಡುಗೆಯನ್ನು ನೀಡಿದ ಜಿಲ್ಲೆಯ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್, ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅವರ ಜೀವನ ಚರಿತ್ರೆ ಕೃತಿ ಬಿಡುಗಡೆ, ಸೆಮಿನಾರ್ ಅನುಸ್ಮರಣೆ ಕಾರ್ಯಕ್ರಮ ಜ.8ರಂದು ಸಂಜೆ ಪಾಣೆಮಂಗಳೂರು ಸಮೀಪ ನೆಹರುನಗರ ಮಸೀದಿ ವಠಾರದಲ್ಲಿ ಜರಗಲಿದೆ.
ಕೋಟ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆ ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅರ್ಶದಿ ರೈಟಿಂಗ್ ಹಬ್ ವತಿಯಿಂದ ಈ ಕೃತಿ ಬಿಡುಗಡೆಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅಧ್ಯಕ್ಷತೆಯಲ್ಲಿ ಸಮಸ್ತ ಉಪಾಧ್ಯಕ್ಷರಾದ ಶೈಖುನಾ ಯು.ಯಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ ಯು ರಹ್ಮಾನ್ ಅರ್ಶದಿ ಕೋಲ್ಪೆ , ಸಮಸ್ತ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಹಸ್ಸನ್ ಅರ್ಶದಿ ಬೆಳ್ಳಾರೆ , ಸಲೀಂ ಅರ್ಶದಿ ದೆಮ್ಮಲೆ , ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ , ಶೈಖುನಾ ಮಹಮ್ಮದ್ ಫೈಝಿ, ಕೊಡವಳ್ಳಿ ಉಸ್ತಾದ್ "ಶೈಖಾನಿ" ನೆಹರು ನಗರ ಜಮಾತ್ ಅಧ್ಯಕ್ಷರಾದ ಪಿ ಎಸ್ ಅಬ್ದುಲ್ ಹಮೀದ್, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸಯ್ಯಿದ್ ಅಕ್ರಮ್ ಅಲೀ ರಹ್ಮಾನಿ, ಸಯ್ಯಿದ್ ಬುರ್ಹಾನ್ ತಂಙಳ್ ಅಲ್ ಬುಖಾರಿ ಕಾಸರಗೋಡು, ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಶಾಸಕ ಯು ಟಿ ಖಾದರ್, ಮೌಲಾನ ಅಬ್ದುರ್ರಝಾಕ್ ಹಾಜಿ ಕಬಕ, ದಾರುನ್ನೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ , ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅರ್ಶದೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ಅಧ್ಯಕ್ಷ ಕೆಯು ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ತಿಳಿಸಿದ್ದಾರೆ.







