ಮಂಜನಾಡಿಯಲ್ಲಿ ಸತ್ತುಬಿದ್ದ ಕಾಗೆಗಳು ಬೆಂಗಳೂರಿಗೆ ರವಾನೆ
ಮಂಗಳೂರು: ಇಲ್ಲಿನ ಮಂಜನಾಡಿ ಗ್ರಾಮದ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಕಾಗೆಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ. ಕಾಗೆಗಳ ವರದಿಯು ಶನಿವಾರ ಬರುವ ಸಾಧ್ಯತೆ ಇದೆ.
ಕಾಗೆಯ ಮೃತದೇಹದಲ್ಲಿ ವಿದ್ಯುತ್ ಆಘಾತದ ಕುರುಹುಗಳಿದ್ದು, ಹಕ್ಕಿಜ್ವರದ ಎಚ್ಚರಿಕೆ ಹಿನ್ನೆಲೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪಶು ರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ತಿಳಿಸಿದ್ದಾರೆ.
ಮಂಜನಾಡಿಯ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಒಂದೇ ಕಡೆ ಆರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದು ಮಂಗಳವಾರ ಪತ್ತೆಯಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೊಳಗಾಗಿತ್ತು.
Next Story





