ಮುಲ್ಕಿ : 'ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆ' ಪೂಸ್ಟರ್ ಬಿಡುಗಡೆ

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮೀತಿ ಅಧ್ಯಕ್ಷ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರ ನೇತೃತ್ವದಲ್ಲಿ "ಅಸ್ತಿತ್ವ, ಹಕ್ಕು, ಯುವ ಜನಾಂಗ ಮರಳಿ ಪಡೆಯುತ್ತಿದೆ" ಎಂಬ ಘೋಷ ವಾಕ್ಯದೊಂದಿಗೆ ಎಸ್ಕೆಎಸ್ಸೆಸ್ಸೆಫ್ ನಡೆಸುತ್ತಿರುವ ಮುನ್ನಡೆ ಯಾತ್ರೆ ಇದರ ಸಮಾರೋಪ ಕಾರ್ಯಕ್ರಮವು ಜ.11 ರಂದು ಪುತ್ತೂರಿನಲ್ಲಿ ಸಮಾಪ್ತಿಗೊಳ್ಳಲಿದೆ.
ಇದರ ಪ್ರಚಾರರ್ಥ ಎಸ್ಕೆಎಸ್ಸೆಸ್ಸೆಫ್ ಮುಲ್ಕಿ ಕ್ಲಸ್ಟರ್ ವತಿಯಿಂದ ಪೂಸ್ಟರ್ ಬಿಡುಗಡೆ ಕಾರ್ಯಕ್ರಮವು ಕೊಲ್ನಾಡ್ ಕೆ.ಎಸ್ ರಾವ್ ನಗರದ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ಕೊಲ್ನಾಡ್ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಉದ್ಘಾಟಿಸಿದರು.
ಬಿ.ಎಮ್ ಇಬ್ರಾಹಿಮ್ ಬೊಳ್ಳೂರು ಪ್ರಾಸ್ತವಿಕವಾಗಿ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಕಾರ್ಯದರ್ಶಿ ಜಿ.ಎಂ ಹನೀಫ್ ದಾರಿಮಿ ಸ್ವಾಗತಿಸಿ, ಮುಲ್ಕಿ ಕ್ಲಸ್ಷರ್ ಕಾರ್ಯದರ್ಶಿ ಯಾಸರ್ ಅರಾಫತ್ ವಂದಿಸಿದರು. ಈ ಸಂದರ್ಭ ಮದ್ರಸ ಮ್ಯಾನೇಜ್ ಮೆಂಟ್ ಸುರತ್ಕಲ್ ಇದರ ಕಾರ್ಯದರ್ಶಿ ಹನೀಫ್ ಇಡ್ಯಾ ದ.ಕ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಸರ್ಗಾಲಯ ಉಸ್ತುವಾರಿ ಇಮ್ತಿಯಾಝ್ ಇಡ್ಯಾ, ಕೊಲ್ನಾಡ್ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಕೊಲ್ನಾಡ್, ಕಾರ್ಯದರ್ಶಿ ನೌಫಾಲ್, ಹೈದರ್ ಮುಸ್ಲಿಯಾರ್ ಚೊಕ್ಕಬೆಟ್ಟು, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಕಾರ್ಯದರ್ಶಿ ಝೈನುದ್ದೀನ್, ಮುಲ್ಕಿ ಕ್ಲಸ್ಟರ್ ಕೋಶಾಧಿಕಾರಿ ಉಸ್ಮಾನ್ ಸಾಗ್ ಸೇರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.









