ಆರ್ಥಿಕ ಮುಗ್ಗಟ್ಟು:ರೈತನ ಆತ್ಮಹತ್ಯೆ

ಲಕ್ನೋ,ಜ.6: ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದ್ದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಗೋಧನಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಮೃತ ರೈತ ಕಲ್ಲು (45) 38,000 ರೂ.ಗಳ ಬ್ಯಾಂಕ್ ಸಾಲವನ್ನು ಹೊಂದಿದ್ದು,ಯಾವುದೇ ಕೆಲಸವಿಲ್ಲದೆ ಚಿಂತೆಗೀಡಾಗಿದ್ದ ಎಂದು ಆತನ ಪತ್ನಿಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದರು.
ಕಲ್ಲು ಎಂಟು ಬಿಘಾ ಜಮೀನು ಹೊಂದಿದ್ದ,ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದರು.
Next Story





