ದಿಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ಮೈಸೂರು ಮೂಲದ ಯೋಧ ಸಾವು
ಮೈಸೂರು,ಜ.6: ದಿಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯೋಧ ನಿಂಗಯ್ಯ (40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೆ ಬಿ ಕಾಲೋನಿ ನಿವಾಸಿಯಾಗಿರುವ ನಿಂಗಯ್ಯ(40), ದಿಲ್ಲಿಯಲ್ಲಿ ಸಿಆರ್‍ಪಿಎಫ್ ಕರ್ತವ್ಯ ನಿರ್ವಹಿಸುತ್ತಿದ್ದರು. ನಿಂಗಯ್ಯ ಅವರು ಹಾಲಿ ದಿಲ್ಲಿ ರೈತರ ಪ್ರತಿಭಟನೆಯ ಭದ್ರತೆಯಲ್ಲಿದ್ದರು. ಈ ನಡುವೆ ಹೃದಯಾಘಾತದಿಂದ ಯೋಧ ನಿಂಗಯ್ಯ ಸಾವನ್ನಪ್ಪಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೇ ನೆರವೇರಲಿದೆ.
ಅಂತ್ಯಕ್ರಿಯೇಗೂ ಮುನ್ನ ಹುಣಸೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
Next Story





