Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಾನು ಇಸ್ಲಾಮ್‌ ಧರ್ಮವನ್ನು...

ನಾನು ಇಸ್ಲಾಮ್‌ ಧರ್ಮವನ್ನು ಪಾಲಿಸುತ್ತಿದ್ದೇನೆ, ಇನ್ನೊಬ್ಬರ ಮೇಲೆ ಹೇರುವುದಿಲ್ಲ: ಎ.ಆರ್.‌ ರಹ್ಮಾನ್‌

"ಮನೆಕೆಲಸದವಳ ಸಂಬಂಧಿ ಮರಣ ಹೊಂದಿದರೂ ನನ್ನ ಮಗಳು ಅಲ್ಲಿಗೆ ತೆರಳುತ್ತಾಳೆ"

ವಾರ್ತಾಭಾರತಿವಾರ್ತಾಭಾರತಿ6 Jan 2021 11:22 PM IST
share
ನಾನು ಇಸ್ಲಾಮ್‌ ಧರ್ಮವನ್ನು ಪಾಲಿಸುತ್ತಿದ್ದೇನೆ, ಇನ್ನೊಬ್ಬರ ಮೇಲೆ ಹೇರುವುದಿಲ್ಲ: ಎ.ಆರ್.‌ ರಹ್ಮಾನ್‌

ಹೊಸದಿಲ್ಲಿ,ಜ.6: ಸಂಗೀತ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಖ್ಯಾತಿಯು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್‌ ಗೆ ಸಲ್ಲುತ್ತದೆ. ಸಣ್ಣ ಒಂದು ಜಾಹೀರಾತಿನ ಮ್ಯೂಸಿಕ್‌ ನಿಂದ ಆಸ್ಕರ್‌ ಪ್ರಶಸ್ತಿಯ ವೇದಿಕೆಗೇರುವ ಮಧ್ಯೆ ಅವರು ಸಾಕಷ್ಟು ಕಷ್ಟ,ನಷ್ಟಗಳನ್ನು ಅನುಭವಿಸಿರುವುದು ತಿಳಿದಿರುವ ವಿಚಾರ. ದಿಲೀಪ್‌ ಕುಮಾರ್‌ ಆಗಿದ್ದ ರಹ್ಮಾನ್‌ ತನ್ನ ಕುಟುಂಬ ಸಮೇತ ಇಸ್ಲಾಮ್‌ ಸ್ವೀಕರಿಸಿದ ಕುರಿತು ಅವರು ಮಾತನಾಡಿರುವುದನ್ನು  hindustantimes.com ವರದಿ ಮಾಡಿದೆ.

ಸಂಗೀತ ಸಂಯೋಜಕರಾಗಿದ್ದ ತಂದೆ ಆರ್.ಕೆ ಶೇಖರ್‌ ರವರ ನಿಧನದ ಬಳಿಕ ಇತ್ತೀಚೆಗೆ ನಿಧನರಾದ ತಾಯಿ ಕರೀಮಾ ಬೇಗಮ್‌ ಜೊತೆಗೆ ರಹ್ಮಾನ್‌ ಕುಟುಂಬ ಸಮೇತ ಇಸ್ಲಾಮ್‌ ಧರ್ಮವನ್ನು ಸ್ವೀಕರಿಸಿದರು. ರೋಜಾ ಚಿತ್ರ ಬಿಡುಗಡೆಯಾಗುವುದಕ್ಕಿಂತ ಕೆಲವೇ ಕೆಲವು ಸಮಯದಲ್ಲಿ ಈ ಘಟನೆ ನಡೆದಿತ್ತು. ಈ ಕುರಿತಾದಂತೆ ರಹ್ಮಾನ್‌ ಸ್ನೇಹಿತ ತ್ರಿಲೋಕನಾಥ್‌ ನಾಯರ್‌ ರವರು ತಮ್ಮ ಅಧಿಕೃತ ಆತ್ಮಕಥೆ ಕೃಷ್ಣ ತ್ರಿಲೋಕ್‌ ನಲ್ಲಿ "ರೋಜಾ ಬಿಡುಗಡೆ ಮಾಡುವ ಸಂದರ್ಭದಲ್ಲಿ ರಹ್ಮಾನ್‌ ರ ಹಳೆಯ ಹೆಸರು ಹಾಕದೇ ಹೊಸ ಹೆಸರು ಸೇರಿಸಬೇಕೆಂದು ತಾಯಿ ರಹೀಮಾ ಬೇಗಮ್‌ ಪಟ್ಟು ಹಿಡಿದ್ದರು. ಒಂದು ವೇಳೆ ಹೊಸ ಹೆಸರು ಹಾಕಲು ಸಾಧ್ಯವಿಲ್ಲ ಎಂದಿದ್ದರೆ ಆ ಚಿತ್ರದಲ್ಲಿ ನನ್ನ ಮಗನ ಹೆಸರು ಹಾಕುವುದೇ ಬೇಡ ಎಂದು ಹೇಳಿದ್ದರು" ಎಂದು ಅವರು ಉಲ್ಲೇಖಿಸಿದ್ದಾರೆ.

hindustantimes.com  ಈ ಹಿಂದೆ ಹಲವಾರು ಬಾರಿ ರಹ್ಮಾನ್‌ ರನ್ನು ಸಂದರ್ಶನ ಮಾಡಿದ್ದ ವೇಳೆ ಅವರು ಹಲವು ಬಾರಿ " ನಾವು ಯಾರ ಮೇಲೂ ಯಾವುದನ್ನೂ ಹೇರಬಾರದು. ನಮ್ಮ ಮಕ್ಕಳೊಂದಿಗೆ ನೀವು ಇತಿಹಾಸವನ್ನೇ ಕಲಿಯಿರಿ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇತಿಹಾಸ ಬೋರಿಂಗ್‌ ವಿಷಯ. ಅದರ ಬದಲು ಅವರು ಎಕನಾಮಿಕ್ಸ್‌ ಅಥವಾ ವಿಜ್ಞಾನ ಸಬ್ಜೆಕ್ಟ್‌ ತೆಗೆದುಕೊಂಡರೆಂದರೆ ಅದು ಅವರಿಷ್ಟ. ಅದು ಅವರ ವೈಯಕ್ತಿಕ ಆಯ್ಕೆ" ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.

ಇಸ್ಲಾಮ್‌ ಸ್ವೀಕರಿಸಿದ ಬಳಿಕ ನೀವು ಅದು ಹೇಗೆ ಅಷ್ಟೊಂದು ಯಶಸ್ಸು ಗಳಿಸಿದಿರಿ ಎಂದು ಹಲವಾರು ಮಂದಿ ರಹ್ಮಾನ್‌ ರೊಂದಿಗೆ ಕೇಳುತ್ತಿದ್ದರು. ಆದರೆ ಅವರು ಉತ್ತರ ನೀಡದೇ ಮೌನವಾಗಿರುತ್ತಿದ್ದರು. "ಇಸ್ಲಾಮ್‌ ಸ್ವೀಕರಿಸಿದ್ದು ಅಂದರೆ, ನಮ್ಮ ಆತ್ಮದೊಳಗಿನ ಗುಂಡಿಯನ್ನು ಒತ್ತಬೇಕಾದರೆ ಅದಕ್ಕಿರುವ ಉತ್ತಮ ಜಾಗವನ್ನು ಆಯ್ದುಕೊಳ್ಳುವುದು. ನನ್ನ ಆಧ್ಯಾತ್ಮಕ ಗುರುಗಳು, ಸೂಫೀ ಗುರುಗಳು ನನಗೆ ಮತ್ತು ನನ್ನ ತಾಯಿಗೆ ಹಲವಾರು ವಿಶೇಷವಾಗಿರುವ ವಿಷಯಗಳನ್ನು ಕಲಿಸಿಕೊಟ್ಟಿದ್ದಾರೆ. ಎಲ್ಲಾ ಧರ್ಮಗಳಲ್ಲಿ ವಿಶೇಷ ವಿಚಾರಗಳಿವೆ. ನಾವು ಈ ಧರ್ಮವನ್ನು ಆಯ್ದುಕೊಂಡೆವು. ಹಾಗೂ ಅದೇ ಧರ್ಮದಲ್ಲಿ ನಾವು ನೆಲೆ ನಿಂತಿದ್ದೇವೆ"

"ಪ್ರಾರ್ಥನೆಯು ನಮಗೆ ತುಂಬಾ ಫಲಫ್ರದವಾದದ್ದು. ಹಲವಾರು ತೊಂದರೆಗಳಿಂದ ನನ್ನನ್ನು ಪ್ರಾರ್ಥನೆಯು ಕಾಪಾಡಿದೆ. ಪ್ರಾರ್ಥನೆಯ ಮಧ್ಯೆ, ʼನಾನು ಪ್ರಾರ್ಥಿಸುತ್ತಿದ್ದೇನೆ, ನಾನು ಯಾವತ್ತೂ ತಪ್ಪು ಕಾರ್ಯಗಳನ್ನು ಎಸಗಬಾರದುʼ ಎಂದು ನಾನು ಆಲೋಚಿಸುತ್ತೇನೆ. ಇತರ ಧರ್ಮಗಳಲ್ಲಿರುವ ಹಲವರು ಇದೇ ರೀತಿ ಮಾಡಿ ಶಾಂತಿಯುತವಾಗಿದ್ದಾರೆ. ನಾನು ಈ ಪ್ರಾರ್ಥನೆಯನ್ನು ನೆಚ್ಚಿಕೊಂಡಿದ್ದೇನೆ" ಎಂದು ರಹ್ಮಾನ್‌ ಹೇಳಿದ್ದಾರೆ.

ಎ.ಆರ್.‌ ರಹ್ಮಾನ್‌ ರವರ ಮಗಳು ಖದೀಜಾ ರಹ್ಮಾನ್‌ ತಂದೆಯ ಹೆಸರಿನಲ್ಲಿ ಮೇಲೇರದೇ ಸಮಾಜದಲ್ಲಿ ತಮ್ಮದೇ ಆದ ಆಸ್ತಿತ್ವವನ್ನು ಸೃಷ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಬುರ್ಖಾ ಹಾಕಿಕೊಂಡು ಖದೀಜಾ ಹಾಜರಾದಾಗ ಹಲವಾರು ಮಂದಿ ಅವರನ್ನು ಮತ್ತು ತಂದೆ ರಹ್ಮಾನ್‌ ರನ್ನು ಟೀಕಿಸಿದ್ದರು. 

ಈ ಕುರಿತು thequint.com  ನೊಂದಿಗೆ ಮಾತನಾಡಿದ್ದ ಎ.ಆರ್.‌ ರಹ್ಮಾನ್‌, "ಪುರುಷನಿಗೆ ಬುರ್ಖಾ ಹಾಕಬಾರದು ಎಂಬ ನಿಯಮವಿದೆ. ಇಲ್ಲದಿದ್ದಲ್ಲಿ ನಾನೂ ಬುರ್ಖಾ ಧರಿಸುತ್ತಿದ್ದೆ. ಸಾಮಗ್ರಿಗಳನ್ನು ಖರೀದಿಸುವಾಗ, ಹೊರ ಹೋಗುವಾದ ಮತ್ತು ಸ್ಥಿರವಾದ ಜೀವನವನ್ನು ಕಂಡುಕೊಳ್ಳಲು ಅದು ಸಹಕಾರಿಯಾಗುತ್ತದೆ. ನನ್ನ ಮಗಳು ಅವಳ ಸ್ವಾತಂತ್ರ್ಯವನ್ನು ಅವಳೇ ಆಯ್ಕೆ ಮಾಡಿಕೊಂಡು ಪಡೆದಿದ್ದಾಳೆ. ಅವಳು ಹೇಗೆಂದರೆ, ಮನೆಕೆಲಸದವಳ ಸಂಬಂಧಿ ಅಥವಾ ತಾಯಿ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಕಾರ್ಯಕ್ಕೆ ಅವಳು ಎದ್ದು ಹೊರಟು ಬಿಡುತ್ತಾಳೆ. ಅವಳಲ್ಲಿರುವ ಈ ಸರಳತೆಯನ್ನು ಕಂಡು ನಾನೇ ಕೆಲವೊಮ್ಮೆ ದಂಗಾಗುತ್ತೇನೆ" ಎಂದು ರಹ್ಮಾನ್‌ ಹೇಳಿದ್ದಾಗಿ ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X