ಅಮೆರಿಕದಿಂದ ಇರಾನ್ ಮೇಲೆ ಮತ್ತೆ ದಿಗ್ಬಂಧನ
ವಾಶಿಂಗ್ಟನ್, ಜ. 6: ಅಮೆರಿಕವು ಮಂಗಳವಾರ ಇರಾನ್ ವಿರುದ್ಧ ಹೊಸ ದಿಗ್ಬಂಧನಗಳನ್ನು ವಿಧಿಸಿದೆ ಎಂದು ಹಣಕಾಸು ಇಲಾಖೆಯ ವೆಬ್ಸೈಟ್ ತಿಳಿಸಿದೆ. ತನ್ನ ಅಧ್ಯಕ್ಷಗಿರಿಯ ಕೊನೆಯ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಒತ್ತಡ ಹೆಚ್ಚಳವನ್ನು ಮುಂದುವರಿಸಿದ್ದಾರೆ.
ಇರಾನ್ನ ಉಕ್ಕು ಕ್ಷೇತ್ರವನ್ನು ಗುರಿಯಾಗಿಸಿ 10ಕ್ಕೂ ಅಧಿಕ ಕಂಪೆನಿಗಳು ಮತ್ತು ಓರ್ವ ವ್ಯಕ್ತಿಯನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ.
Next Story