ಪುರುಷರ ಟೆಸ್ಟ್ ಪಂದ್ಯಕ್ಕೆ ಮೊದಲ ಬಾರಿ ಮಹಿಳಾ ಅಂಪೈರ್ ಪೊಲೊಸಾಕ್

ಸಿಡ್ನಿ, ಜ.6: ಗುರುವಾರದಿಂದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಇಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಕ್ಲೇರ್ ಪೊಲೊಸಾಕ್ ನಾಲ್ಕನೇ ಅಂಪೈರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಪುರುಷರ ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಮಹಿಳಾ ಅಂಪೈರತೊಬ್ಬರು ಕಣಕ್ಕಿಳಿಯಲಿದ್ದಾರೆ. ಕ್ಲೇರ್ ಪೊಲೊಸಾಕ್ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
2019ರಲ್ಲಿ ವಿಂಡ್‌ಹೋಕ್‌ನಲ್ಲಿ ನಮೀಬಿಯಾ ಮತ್ತು ಒಮಾನ್ ತಂಡಗಳ ನಡುವಿನ ಐಸಿಸಿಯ ಡಿವಿಷನ್ 2 ಲೀಗ್‌ನಲ್ಲಿ ಪುರುಷರ ಏಕದಿನ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್‌ನ 32 ಹರೆಯದ ಪೊಲೊಸಾಕ್ ಆನ್-ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಭಾರತ-ಆಸ್ಟ್ರೇಲಿಯ ಟೆಸ್ಟ್ ಪಂದ್ಯಕ್ಕೆ ಮಾಜಿ ವೇಗಿಗಳಾದ ಪಾಲ್ ರೀಫೆಲ್ ಮತ್ತು ಪಾಲ್ ವಿಲ್ಸನ್ ಆನ್-ಫೀಲ್ಡ್ ಅಂಪೈರ್‌ಗಳಾಗಿರುತ್ತಾರೆ. ಟಿವಿ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಆ. ಪಂದ್ಯದ ರೆಫರಿ ಆಗಿ ಆಸ್ಟ್ರೇಲಿಯದ ಡೇವಿಡ್ ಬೂನ್ ಕಾರ್ಯನಿರ್ವಹಿಸುತ್ತಾರೆ.
Next Story