ಕೋವಿಡ್ ಪರೀಕ್ಷೆಯಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡ ಉತ್ತೀರ್ಣ
ಬ್ಯಾಂಕಾಕ್, ಜ.6: ಥಾಯ್ಲೆಂಡ್‌ಗೆ ತೆರಳಿರುವ ಭಾರತದ ಬ್ಯಾಡ್ಮಿಂಟನ್ ತಂಡವು ಬುಧವಾರ ಕೋವಿಡ್ -19 ಪರೀಕ್ಷೆಯನ್ನು ಎದುರಿಸಿದ್ದು, ಎಲ್ಲರ ಪರೀಕ್ಷಾ ಫಲಿತಾಂಶ ನೆಗಟಿವ್ ಆಗಿದೆ.
ಪರೀಕ್ಷೆಯ ಬಳಿಕ ಮುಂದಿನ ವಾರದಿಂದ ನಡೆಯಲಿರುವ ಯೋನೆಕ್ಸ್ ಥಾಯ್ಲೆಂಡ್ ಓಪನ್ ಪಂದ್ಯಾವಳಿಗೆ ತರಬೇತಿಯನ್ನು ಪ್ರಾರಂಭಿಸಲು ಭಾರತದ ಆಟಗಾರರು ಸಜ್ಜಾಗಿದ್ದಾರೆ.
ಭಾರತದ ತಂಡದ ಆಟಗಾರರು ಮತ್ತು ಅಂಪೈರ್‌ಗಳು, ಲೈನ್ ಜಡ್ಜ್ ಬಿಡಬ್ಲುಎಫ್, ಥಾಯ್ಲೆಂಡ್ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಮತ್ತಿತರು ಬ್ಯಾಂಕಾಕ್‌ಗೆ ಬಂದ ನಂತರ ಪರೀಕ್ಷಿಸಲಾಯಿತು.
ಬ್ಯಾಂಕಾಕ್‌ನಲ್ಲಿನ ಎರಡು ಸೂಪರ್ 1, 000 ಟೂರ್ನಮೆಂಟ್ - ಯೋನೆಕ್ಸ್ ಥಾಯ್ಲೆಂಡ್ ಓಪನ್ ಜನವರಿ 12ರಿಂದ 17, ಟೊಯೋಟಾ ಥಾಯ್ಲೆಂಡ್ ಓಪನ್ ಜನವರಿ 19ರಿಂದ 24 ಮತ್ತು ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಜನವರಿ 27ರಿಂದ 31ರ ತನಕ ನಡೆಯಲಿದೆ. ಕಟ್ಟುನಿಟ್ಟಾದ ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ತರಬೇತಿಗಾಗಿ ಆಟಗಾರರನ್ನು ಈಗ ತೆರವುಗೊಳಿಸಲಾಗಿದೆ.
ಭಾರತದ ಪಿ.ವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಬಿ.ಸಾಯಿ ಪ್ರಣೀತ್ ಅವರನ್ನೊಳಗೊಂಡ ಭಾರತದ ತಂಡಕ್ಕೆ ತರಬೇತಿಗೆ ಸಮಯವನ್ನು ನಿಗದಿಪಡಿಸಲಾಗಿದೆ.