ಸರಪಳಿಯಲ್ಲಿ ಬಂಧಿತನಾಗಿದ್ದ ಕಿವುಡ-ಮೂಕ ವ್ಯಕ್ತಿಯ ರಕ್ಷಣೆ
ಔರಂಗಾಬಾದ್, ಜ.7: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ನಳದುರ್ಗ ಪಟ್ಟಣದ ಹೋಟೆಲ್‌ವೊಂದರಲ್ಲಿ ಕಳೆದ ಮೂರು ತಿಂಗಳುಗಳಿಂದಲೂ ಸರಪಳಿಯಲ್ಲಿ ಬಂಧಿತನಾಗಿದ್ದ 35ರ ಹರೆಯದ ಕಿವುಡ-ಮೂಕ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೋಟೆಲ್‌ನ ಮಾಲಿಕ ಮೋತಿಲಾಲ ತಾಂಬೋಲಿ ಎಂಬಾತನನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ಮೂರು ತಿಂಗಳುಗಳಿಂದಲೂ ಕಿವುಡ-ಮೂಕ ವ್ಯಕ್ತಿಯನ್ನು ಹೋಟೆಲ್ ಕೋಣೆಯಲ್ಲಿನ ಕಂಬಕ್ಕೆ ಸರಪಳಿಯಿಂದ ಕಟ್ಟಿಹಾಕಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ. ವ್ಯಕ್ತಿಯ ಗುರುತು ಮತ್ತು ಆತನನ್ನು ಸರಪಳಿಯಿಂದ ಕಟ್ಟಿ ಹಾಕಲು ಕಾರಣವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದರು.
Next Story





