ಕೃಷ್ಣಾಪುರ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು, ಜ.7: ಕೃಷ್ಣಾಪುರದ ನಾಲ್ಕನೇ ವಾರ್ಡಿನಲ್ಲಿ 9.85 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಕಾಂಕ್ರಿಟೀಕರಣ ರಸ್ತೆ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುರುವಾರ ಚಾಲನೆ ನೀಡಿದರು. ಅಲ್ಲದೆ ಈ ಸಂದರ್ಭ 7ನೇ ಬ್ಲಾಕ್‌ನಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕರಗೊಂಡ ರಸ್ತೆಯನ್ನು ಉದ್ಘಾಟಿಸಿದರು.
ಬಳಿಕ ಕರಾವಳಿ ಶಾಸಕರ ಜತೆ ಮುಖ್ಯಮಂತ್ರಿ ಪ್ರತ್ಯೇಕ ಸಭೆ ನಡೆಸಿ ಆಗಬೇಕಾದ ಅಗತ್ಯ ಮೂಲಸೌಕರ್ಯದ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ಅನುದಾನ ಬಿಡುಗಡೆ, ಪ್ರತ್ಯೇಕ ಮರಳು ನೀತಿ, ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಗೆ ಅನುದಾನ ಬಿಡುಗಡೆಯ ಭರವಸೆ ದೊರಕಿದೆ ಎಂದು ಹೇಳಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಕಾರ್ಪೊರೇಟರ್ ಲಕ್ಷ್ಮಿಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ, ಶೇಖರ್ ದೇವಾಡಿಗ, ಬಾಬು ಪೂಜಾರಿ, ಪ್ರಶಾಂತ್ ಆಚಾರ್ಯ,ಚಂದ್ರಯ್ಯ ಆಚಾರಿ, ಹೇಮನಾಥ್, ಲಕ್ಷ್ಮೀಶ ದೇವಾಡಿಗ, ಪ್ರವೀಣ್, ಜಗದೀಶ್, ಸುಮತಿ, ಹೇಮಾವತಿ ಡಿ.ಕೋಟ್ಯಾನ್, ಪ್ರೇಮಾನಂದ್, ಪ್ರವೀಣ್, ಪಾಲಿಕೆ ಇಂಜಿನಿಯರ್ ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.





