ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ
ಮಂಗಳೂರು, ಜ.7: ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೈಕಾಡಿ ಪ್ರತಿಷ್ಠಾನದ ಉದ್ಘಾಟನೆ ಮತ್ತು ಬೈಕಾಡಿ ಜನಾರ್ದನ ಆಚಾರ್‌ರ ಉರ್ವದಲ್ಲಿರುವ ಸ್ವಗೃಹದಲ್ಲಿ ನಡೆಯಿತು.
ಪ್ರತಿಷ್ಠಾನದ ಉದ್ಘಾಟಿಸಿ ಮಾತನಾಡಿದ ಕ್ಯಾ.ಗಣೇಶ್ ಕಾರ್ಣಿಕ್, ಬೈಕಾಡಿ ಜನಾರ್ದನ ಆಚಾರ್‌ರ ಸಾಮಾಜಿಕ ಕಳಕಳಿ, ಅಗಾಧ ಜ್ಞಾನ ಭಂಡಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಯ ಬಗ್ಗೆ ವಿವರಿಸಿದರು.
ಈ ಸಂದರ್ಭ 2020-21ನೇ ಸಾಲಿನ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಯನ್ನು ಚಿತ್ರಕಲಾ ಕ್ಷೇತ್ರದಲ್ಲಿಗೈದ ಅಗಾಧ ಸೇವೆ, ಸಾಧನೆಗಾಗಿ ಕಲಾದ ಪಿ.ಎನ್. ಆಚಾರ್ಯರಿಗೆ ನೀಡಲಾಯಿತು. ಕಲಾವಿದ ಗಣೇಶ್ ಸೋಮಯಾಜಿ ಮಾತನಾಡಿದರು.
ಡಾ. ಪ್ರತಿಭಾ ರೈ ಅವರ ಭಾವಗೀತೆ ಹಾಡಿದರು.ರವೀಂದ್ರನಾಥ ಶೆಟ್ಟಿ ಹಾಗೂ ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ರತ್ನಾವತಿ ಜೆ ಬೈಕಾಡಿ, ಅಕ್ಷತಾ ಬೈಕಾಡಿ, ಭರತ್ ರಾಜ್ ಬೈಕಾಡಿ, ರೇಖಾ ಬಿ. ಬೈಕಾಡಿ ಉಪಸ್ಥಿತರಿದ್ದರು.
Next Story





