Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಉಸಿರಾಡುವ ಗಾಳಿ ವಿಷವಾದರೆ?

ಉಸಿರಾಡುವ ಗಾಳಿ ವಿಷವಾದರೆ?

ವಾರ್ತಾಭಾರತಿವಾರ್ತಾಭಾರತಿ8 Jan 2021 12:10 AM IST
share
ಉಸಿರಾಡುವ ಗಾಳಿ ವಿಷವಾದರೆ?

ದಿಲ್ಲಿಯಲ್ಲಿ ಕಳೆದ ಬಾರಿ ವಾಯುಮಾಲಿನ್ಯ ತೀವ್ರವಾದಾಗ, ಅದಕ್ಕಾಗಿ ಪಂಜಾಬ್ ಮತ್ತು ದಿಲ್ಲಿ ಗಡಿಭಾಗದ ರೈತರನ್ನು ಹೊಣೆ ಮಾಡಲಾಯಿತು. ತಮ್ಮ ಗದ್ದೆಗಳನ್ನು ಸುಟ್ಟ ಕಾರಣದಿಂದಾಗಿ ಅದರ ಹೊಗೆ ವಾಯುವನ್ನು ಮಾಲಿನ್ಯ ಗೊಳಿಸಿದೆ ಎಂದು ಆರೋಪಿಸಲಾಯಿತು ಮತ್ತು ಹಲವು ರೈತರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಲಾಯಿತು. ಆದರೆ ಇದೇ ಸಂದರ್ಭದಲ್ಲಿ ಈ ದೇಶದಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳು, ಅಣುಸ್ಥಾವರಗಳು ಮಾಡುತ್ತಿರುವ ಹಾನಿಯಿಂದಾಗಿ ಉಂಟಾಗುವ ಮಾಲಿನ್ಯದ ಕುರಿತಂತೆ ಸರಕಾರ ಜಾಣ ವೌನವನ್ನು ತಾಳುತ್ತಾ ಬಂದಿದೆ. ಒಂದು ಕುಟುಂಬಕ್ಕೆ ಮನೆಯನ್ನು ಬಾಡಿಗೆ ಕೊಡುವಾಗ ‘ಮನೆಗಾಗಲಿ, ಪರಿಸರಕ್ಕಾಗಲಿ ಯಾವುದೇ ಹಾನಿಯನ್ನು ಮಾಡಬಾರದು’ ಎಂಬ ಎಚ್ಚರಿಕೆಯನ್ನು ಕೊಟ್ಟೇ ಕೀಲಿಕೈಯನ್ನು ಅವರಿಗೆ ಒಪ್ಪಿಸುತ್ತೇವೆ. ಪರಿಸರದ ಮೇಲೆ ಈ ದೇಶದ ಸರ್ವರಿಗೂ ಹಕ್ಕಿದೆ. ಅದನ್ನು ಮಾಲಿನ್ಯಗೊಳಿಸಿದರೆ ಪ್ರಶ್ನಿಸುವ ಅಧಿಕಾರ ಸರ್ವರಿಗೂ ಇದೆ. ಆದರೆ ಕಾರ್ಖಾನೆಗಳು ಮಾತ್ರ ತಮ್ಮ ಮಾಲಿನ್ಯ ನಮ್ಮ ಹಕ್ಕು ಎಂದು ವರ್ತಿಸುತ್ತಾ ಬಂದಿವೆ. ಈ ಮೂಲಕ ಕಾರ್ಖಾನೆಗಳು ದೇಶಕ್ಕೆ ಲಾಭಕ್ಕಿಂತ ಹಲವು ಪಟ್ಟು ನಷ್ಟವನ್ನು ಮಾಡಿರುತ್ತವೆ. ಇದು ತಿಳಿಯುವಾಗ ತೀರಾ ತಡವಾಗಿರುತ್ತದೆ. 2019 ರಲ್ಲಿ ಸುಮಾರು 16.7 ಲಕ್ಷ ಮಂದಿ ವಾಯುಮಾಲಿನ್ಯದಿಂದಾಗಿ ಸಾವನ್ನಪ್ಪಿದ್ದಾರೆ. ದೇಶದ ಶೇ.17ರಿಂದ ಶೇ.18ರಷ್ಟು ಸಾವುಗಳು ವಾಯುಮಾಲಿನ್ಯದಿಂದಾಗಿಯೇ ಸಂಭವಿಸಿವೆ. ಜಾಗತಿಕವಾಗಿ ಅವಧಿಪೂರ್ವ ಸಾವಿಗೆ ವಾಯುಮಾಲಿನ್ಯವು 4ನೇ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಜಾಗತಿಕವಾಗಿ ಸಂಭವಿಸುವ ಅಕಾಲಿಕ ಸಾವುಗಳಿಗೆ ವಾಯುಮಾಲಿನ್ಯವು ನಾಲ್ಕನೇ ಪ್ರಮಖ ಕಾರಣವಾಗಿದ್ದು, ಇದು ಒಟ್ಟು ಸಾವುಗಳ ಪೈಕಿ ಶೇ.12ರಷ್ಟಾಗಿದೆ ಎನ್ನುವುದನ್ನು ‘ಜಾಗತಿಕ ವಾಯು ಸ್ಥಿತಿಗತಿ ವರದಿ -2020’ ಬಹಿರಂಗಪಡಿಸಿದೆ. ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದಲ್ಲಿ ಈ ಎಲ್ಲಾ ಸಾವುಗಳನ್ನು ತಡೆಗಟ್ಟಬಹುದಾಗಿತ್ತು ಹಾಗೂ ವಾಯು ಮಾಲಿನ್ಯದಿಂದಾಗಿ ಉಂಟಾಗುವ ಪ್ರತಿಯೊಂದು ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ವರದಿ ಹೇಳಿದೆ.

   ವಾಯುಮಾಲಿನ್ಯವು ನಾವು ಎದುರಿಸುತ್ತಿರುವ ಅತಿ ದೊಡ್ಡ ಆರೋಗ್ಯ ಬಿಕ್ಕಟ್ಟಾಗಿದೆ. ವಾಯುಮಾಲಿನ್ಯವು ಅಗೋಚರ ಹಂತಕನೆಂದು ವಿಶ್ವ ಆರೋಗ್ಯ ಸಂಸ್ಥೆಯು ಪದೇ ಪದೇ ಎಚ್ಚರಿಸುತ್ತಲೇ ಬಂದಿದೆ. ಪ್ರತಿ 10 ಲಕ್ಷ ಜನರಲ್ಲಿ 86 ಮಂದಿ ವಾಯುಮಾಲಿನ್ಯದಿಂದಾಗಿಯೇ ಸಾವನ್ನಪ್ಪುತ್ತಿದ್ದಾರೆ. ಜಗತ್ತಿನ ಜನಸಂಖ್ಯೆಯ ಶೇ.92ರಷ್ಟು ಮಂದಿ, ವಾಯುಮಾಲಿನ್ಯವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳು ನಿಗದಿಪಡಿಸಿರುವ ಮಟ್ಟಕ್ಕಿಂತ ಅಧಿಕವಾಗಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಜಗತ್ತಿನಲ್ಲಿ ಸಂಭವಿಸುವ ಸಾವುಗಳ ಪೈಕಿ ಶೇ.20ರಷ್ಟು ಮರಣಗಳಿಗೆ ವಾಯುಮಾಲಿನ್ಯದಿಂದಾಗಿ ಉಂಟಾಗುವ ಇಶೆಮಿಕ್ ಹೃದ್ರೋಗವೇ ಕಾರಣವಾಗಿದೆ. ಶ್ವಾಸಕೋಶದ ಕಾನ್ಸರ್‌ನಿಂದಾಗಿ ಸಂಭವಿಸುವ ಸಾವುಗಳ ಪೈಕಿ ಶೇ.19ರಷ್ಟು ಸಾವುಗಳು ವಾಯುಮಾಲಿನ್ಯದಿಂದಾಗಿ ಉಂಟಾಗುತ್ತವೆ. ಶೇ.40ರಷ್ಟು ದೀರ್ಘಕಾಲದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುವವರ ಪೈಕಿ ಶೇ.40ರಷ್ಟು ಮಂದಿ ವಾಯುಮಾಲಿನ್ಯದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಯುಮಾಲಿನ್ಯದಿಂದಾಗಿ ಜನರು ಗಂಭೀರವಾಗಿ ಬಾಧಿತವಾಗುವ ಇನ್ನೊಂದು ಕಾಯಿಲೆಯೆಂದರೆ ಅಸ್ತಮಾ ಆಗಿದೆ.ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ನಿಯತಕಾಲಿಕವು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿದ ವರದಿಯೊಂದು, 2019ರಲ್ಲಿ ವಾಯುಮಾಲಿನ್ಯದಿಂದಾಗಿ ಉಂಟಾದ ಅಕಾಲಿಕ ಸಾವುಗಳು ಹಾಗೂ ಅಸ್ವಸ್ಥತೆಯಿಂದಾಗಿ ಭಾರತಕ್ಕೆ 2,13,451 ಕೋಟಿ ರೂ. ನಷ್ಟವುಂಟಾಗಿರುವುದಾಗಿ ತಿಳಿಸಿದೆ.ಉತ್ತರಪ್ರದೇಶ ಹಾಗೂ ಬಿಹಾರ ಭಾರತದ ರಾಜ್ಯಗಳ ಪೈಕಿ ಅತ್ಯಂತ ಕನಿಷ್ಠವಾದ ತಲಾ ವಾರು ಆದಾಯವನ್ನು ಹೊಂದಿವೆ. ಈ ಬಡ ರಾಜ್ಯಗಳು ವಾಯುಮಾಲಿನ್ಯದಿಂದ ಉಂಟಾಗುವ ಪ್ರತಿಕೂಲಕರ ಆರ್ಥಿಕ ಪರಿಣಾಮಗಳಿಗೆ ಅತ್ಯಂತ ಸುಲಭವಾಗಿ ತುತ್ತಾಗುತ್ತಿವೆ ಎಂದು ‘ದಿ ಲ್ಯಾನ್ಸೆಟ್’ ವರದಿ ತಿಳಿಸಿದೆ.

 ರಾಷ್ಟ್ರಪತಿಯವರು ಇತ್ತೀಚೆಗೆ ‘ರಾಷ್ಟ್ರದ ರಾಜಧಾನಿ ಪ್ರದೇಶ ಹಾಗೂ ಆಸುಪಾಸಿನ ಪ್ರದೇಶಗಳ ವಾಯುಮಾಲಿನ್ಯ ನಿರ್ವಹಣೆಗಾಗಿನ ಆಯೋಗ 2020’ರ ಸ್ಥಾಪನೆ ಕುರಿತ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಈ ಅಧ್ಯಾದೇಶದ ಪ್ರಕಾರ ವಾಯುಮಾಲಿನ್ಯ ಕುರಿತ ನಿಯಮಗಳನ್ನು ಉಲ್ಲಂಘಿಸುವವರಿಗೆ 1 ಕೋಟಿ ರೂ.ವರೆಗೆ ಅಥವಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವಿಪರ್ಯಾಸವೆಂದರೆ, ರೈತರು ತಾವು ಕೊಯ್ಲು ಮಾಡಿದ ಪೈರಿನ ಕೂಳೆಗಳನ್ನು ಸುಡುವುದರಿಂದ ವಾಯು ಮಾಲಿನ್ಯವುಂಟಾಗುವುದೆಂಬ ಕಾರಣದಿಂದ ಈ ಸುಗ್ರೀವಾಜ್ಞೆಯನ್ನು ಜಾರಿ ಮಾಡಲಾಗಿತ್ತು. ಆದರೆ ಕೈಗಾರಿಕ ಹಾಗೂ ವಾಹನಗಳಿಂದಾಗಿ ಮಹಾನಗರದ ವಾಯುವಿನ ಗುಣಮಟ್ಟವು ಹದಗೆಡುವುದನ್ನು ತಡೆಯಲು ಸರಕಾರವು ಈವರೆಗೆ ಯಾವುದೇ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿಲ್ಲ. ರಾಜಧಾನಿ ದಿಲ್ಲಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿನ ವಾಯುಮಾಲಿನ್ಯಕ್ಕೆ ಪೈರಿನ ಕೂಳೆಗಳನ್ನು ಸುಡುವ ರೈತರನ್ನು ದೂಷಿಸುವುದು ಸೂಕ್ತವಾಗಲಾರದು. ಕೈಗಾರಿಕ ಹಾಗೂ ವಾಹನಗಳ ಮಾಲಿನ್ಯವು, ಮಹಾನಗರ ಪ್ರದೇಶಗಳ ವಾಯುವಿನ ಗುಣಮಟ್ಟವನ್ನು ಕೆಡಿಸಿದೆಯೆಂಬುದನ್ನು ನಮ್ಮ ಆಳುವ ಮಂದಿ ಮರೆತಂತಿದೆ.

ಬೃಹತ್ ಉದ್ಯಮಿಗಳು ತಮ್ಮ ಹಣದ ಮೂಲಕವೇ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಕೊಂಡುಕೊಳ್ಳುತ್ತಿರುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಸಣ್ಣ ಉದ್ದಿಮೆಗಳಿಗೆ ಸಾವಿರ ಕಿರುಕುಳಗಳನ್ನು ನೀಡುವ ಮಾಲಿನ್ಯ ಮಂಡಳಿ, ಬೃಹತ್ ಉದ್ದಿಮೆಗಳ ಮುಂದೆ ಸಾಷ್ಟಾಂಗ ಬೀಳುತ್ತದೆ. ಬೃಹತ್ ಕೈಗಾರಿಕೆಗಳು ಹಾಗೂ ಬೃಹನ್ನಗರಗಳ ಸಮೀಪದಲ್ಲಿರುವ ಜಲ ಸಂಪನ್ಮೂಲಗಳಲ್ಲಿ ಮಾಲಿನ್ಯದ ಮಟ್ಟವು ಅಗಾಧ ಪ್ರಮಾಣದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ವಾಯುಮಾಲಿನ್ಯದಿಂದ ಉಂಟಾಗುವ ಭಾರೀ ಪ್ರಮಾಣದ ಆರೋಗ್ಯ ಹಾಗೂ ಆರ್ಥಿಕ ನಷ್ಟಗಳನ್ನು ಯಾರು ತುಂಬಬೇಕಾಗಿದೆ ಎನ್ನುವುದಕ್ಕೆ ಸರಕಾರ ಉತ್ತರ ಕಂಡುಕೊಳ್ಳಬೇಕು. ಈಗಾಗಲೇ ಸರಕಾರಗಳು ಕಾರ್ಪೊರೇಟ್ ಕಂಪೆನಿಗಳ ಹಿತವನ್ನು ಕಾಪಾಡುವುದಕ್ಕಾಗಿ ಪರಿಸರ ಸುರಕ್ಷತಾ ನಿಯಮಗಳನ್ನು ದುರ್ಬಲಗೊಳಿಸಿವೆ ಅಥವಾ ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಉದ್ಯಮದ ನಿರ್ವಹಣೆಯನ್ನು ಸುಲಲಿತಗೊಳಿಸಲು ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುವ ತುರ್ತು ಅವಶ್ಯಕತೆಯ ಸೋಗಿನಲ್ಲಿ ಕೇಂದ್ರ ಸರಕಾರವು ಕಾರ್ಪೊರೇಟ್ ಕಂಪೆನಿಗಳು, ವಾಯುಮಾಲಿನ್ಯ ನಿಯಂತ್ರಣದ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸುವುದನ್ನು ನೋಡಿಯೂ ನೋಡದಂತೆ ಸುಮ್ಮನೆ ಕುಳಿತಿದೆ.

ವಾಯು ಶುದ್ಧೀಕರಣ ಸ್ಥಾವರಗಳ ಸ್ಥಾಪನೆಯ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸುವುದು ಸಮಸ್ಯೆಗೆ ಪರಿಹಾರವಾಗಲಾರದು. ಇದು ಕಾರ್ಪೊರೇಟ್ ಕಂಪೆನಿಗಳಿಗೆ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳಲು ಇನ್ನೊಂದು ದಾರಿಯಾಗಲಿದೆ. ಶುದ್ಧ ಗಾಳಿ ನಮ್ಮ ಹಕ್ಕು. ಅದನ್ನು ಯಾರು ಕೆಡಿಸುತ್ತಾರೆಯೋ ಅವರೇ ಅದರ ನಷ್ಟವನ್ನು ತುಂಬಬೇಕು. ಆದುದರಿಂದ ನಮ್ಮ ಗಾಳಿ, ನೀರು, ಪರಿಸರದ ಉಳಿವಿಗಾಗಿ ಬೃಹತ್ ಉದ್ದಿಮೆಗಳು ವಿಶೇಷ ತೆರಿಗೆಯನ್ನು ನೀಡುವಂತಾಗಬೇಕು. ಕಾರ್ಪೊರೇಟ್ ಕಂಪೆನಿಗಳು ನಮ್ಮ ಈ ಭೂಮಿಯನ್ನು ಹಾಗೂ ಅದರ ಆರೋಗ್ಯವನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಸರಕಾರ ಖಚಿತಪಡಿಸಿಕೊಳ್ಳಬೇಕಾಗಿದೆ. ವಾಯುಮಾಲಿನ್ಯದ ಮೂಲಕ ಭೂಮಿಯ ಆರೋಗ್ಯವನ್ನು ಕೆಡಿಸುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಸರಕಾರವು ಅತ್ಯಂತ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕಿರುವುದು ಅತ್ಯಗತ್ಯವಾಗಿದೆ.ಮಾಲಿನ್ಯದ ಮೂಲಗಳನ್ನು ನಿಯಂತ್ರಿಸುವುದು ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ನಮ್ಮ ಈ ಸುಂದರ ಭೂಗ್ರಹವು ಮಾಲಿನ್ಯದಿಂದ ವಿರೂಪಗೊಳ್ಳುವುದನ್ನು ತಡೆಯಲು ಸರಕಾರಗಳು ಕಂಕಣಬದ್ಧವಾಗಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X