ಮೂರನೇ ಟೆಸ್ಟ್: ಆಸ್ಟ್ರೇಲಿಯ ಆಲೌಟ್, ಭಾರತ 96/2
ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್ ನಲ್ಲಿ 338 ರನ್‍ಗೆ ನಿಯಂತ್ರಿಸಿರುವ ಭಾರತವು ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಆಸೀಸ್ ನ ಮೊದಲ ಇನಿಂಗ್ಸ್ ಗಿಂತ 242 ರನ್ ಹಿನ್ನಡೆಯಲ್ಲಿದೆ.
ಮೊದಲ ವಿಕೆಟ್‍ಗೆ 70 ರನ್ ಜೊತೆಯಾಟ ನಡೆಸಿದ ರೋಹಿತ್ ಶರ್ಮಾ(26) ಹಾಗೂ ಶುಭಮನ್ ಗಿಲ್ (50) ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಗಿಲ್ ಚೊಚ್ಚಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಈ ಇಬ್ಬರು ಬೆನ್ನುಬೆನ್ನಿಗೆ ಔಟಾದಾಗ ಕ್ರೀಸಿಗಿಳಿದ ಚೇತೇಶ್ವರ ಪೂಜಾರ(9) ಹಾಗೂ ನಾಯಕ ಅಜಿಂಕ್ಯ ರಹಾನೆ(5)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯ ತಂಡವು ಸ್ಟೀವನ್ ಸ್ಮಿತ್ 131 ರನ್, ವಿಲ್ ಪುಕೋವ್ಸ್ಕಿ(62) ಹಾಗೂ ಮಾರ್ನಸ್ ಲ್ಯಾಬುಶೇನ್(91)ಅರ್ಧಶತಕದ ಕೊಡುಗೆ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 338 ರನ್ ಗಳಿಸಿತು.
ಮಳೆಬಾಧಿತ ಮೊದಲ ದಿನದಾಟದಂತ್ಯಕ್ಕೆ ಆಸೀಸ್ 2 ವಿಕೆಟ್ ನಷ್ಟಕ್ಕೆ 166 ರನ ಗಳಿಸಿತ್ತು. 9ನೇ ಟೆಸ್ಟ್ ಅರ್ಧಶತಕ ಸಿಡಸಿದ್ದ ಲ್ಯಾಬುಶೇನ್ ಔಟಾಗದೆ 67 ಹಾಗೂ ಸ್ಮಿತ್ ಔಟಾಗದೆ 31 ರನ್ ಗಳಿಸಿದ್ದರು.





