ಕಾರಿನಿಂದ ಇಳಿದು ರಸ್ತೆ ಮಧ್ಯೆಯೇ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಸಿದ್ದರಾಮಯ್ಯ

ಬೆಂಗಳೂರು, ಜ.8: ಕಾಂಗ್ರೆಸ್ ಸಮಾವೇಶಕ್ಕಾಗಿ ಆಗಮಿಸುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಷ್ಟ್ರಗೀತೆ ಕೇಳುತ್ತಿದ್ದಂತೆ ತಮ್ಮ ಕಾರಿನಿಂದ ಇಳಿದು ರಸ್ತೆ ಮಧ್ಯೆಯೇ ನಿಂತು ಗೌರವ ಸೂಚಿಸಿದರು.
ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆ ಸಮಾವೇಶ ನಡೆಯುತ್ತಿದ್ದ ಸ್ಥಳದ ಎದುರಿನ ರಸ್ತೆಗೆ ಬಂದ ವೇಳೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರಗೀತೆ ಕೇಳಿಸಿದೆ. ತಕ್ಷಣ ಕಾರಿನಿಂದಿಳಿದ ಸಿದ್ದರಾಮಯ್ಯ ರಸ್ತೆ ಮಧ್ಯೆಯೇ ಕಾರಿನ ಪಕ್ಕ ನಿಂತು ರಾಷ್ಟ್ರಗೀತೆಗೆ ಗೌರವ ತೋರಿಸಿದ್ದಾರೆ.
Next Story





