ಉಡುಪಿ: ಸಿಐಟಿಯುನಿಂದ ಪ್ರತಿಭಟನೆ

ಉಡುಪಿ, ಜ.8: ರೈತ ಕಾರ್ಮಿಕ ವಿರೋಧಿ ಕೃಷಿ ಶಾಸನಗಳು, ಕಾರ್ಮಿಕ ಸಂಹಿತೆಗಳು, ವಿದ್ಯುತ್ ಮಸೂದೆ-2020ರ ವಾಪಸಾತಿಗಾಗಿ ಆಗ್ರಹಿಸಿ ಹಾಗೂ ತಮ್ಮ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಇಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ವತಿಯಿಂದಲೂ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ. ವಿಶ್ವನಾಥ ರೈ ಮಾತನಾಡಿದರು.
ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ಮಹಾಬಲ ವಡೆಯರಹೊಬಳಿ, ಶಶಿಧರ್ ಗೊಲ್ಲ, ಬಲ್ಕೀಸ್, ಶೇಖರ್ ಬಂಗೇರ, ವಾಮನ ಪೂಜಾರಿ, ನಳಿನಿ, ಕಮಲ, ಮೋಹನ್, ವಿದ್ಯಾರಾಜ್, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್ ಉಪಸ್ಥಿತರಿದ್ದರು.
Next Story





