Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೃಷಿ ಉತ್ಪನ್ನಗಳ ಸಂಸ್ಕರಣೆ ಸಾಧ್ಯವಾದರೆ...

ಕೃಷಿ ಉತ್ಪನ್ನಗಳ ಸಂಸ್ಕರಣೆ ಸಾಧ್ಯವಾದರೆ ಕೃಷಿಕರ ಆದಾಯದಲ್ಲಿ ಹೆಚ್ಚಳ : ಆರ್‌ಬಿಐ ನಿರ್ದೇಶಕ ಸತೀಶ್ ಮರಾಠೆ

ವಾರ್ತಾಭಾರತಿವಾರ್ತಾಭಾರತಿ8 Jan 2021 9:23 PM IST
share
ಕೃಷಿ ಉತ್ಪನ್ನಗಳ ಸಂಸ್ಕರಣೆ ಸಾಧ್ಯವಾದರೆ ಕೃಷಿಕರ ಆದಾಯದಲ್ಲಿ ಹೆಚ್ಚಳ : ಆರ್‌ಬಿಐ ನಿರ್ದೇಶಕ ಸತೀಶ್ ಮರಾಠೆ

ಉಡುಪಿ, ಜ.8: ದೇಶದಲ್ಲಿ ಆಹಾರ ಉತ್ಪಾದನೆಯ ಪ್ರಮಾಣ ನಿರೀಕ್ಷೆಗಿಂತಲೂ ಅಧಿಕವಿದೆ. ಇದರಲ್ಲಿ ಬಹುಪಾಲು ಉತ್ಪನ್ನಗಳು ಸದುಪಯೋಗ ಗೊಳ್ಳದೇ ಹಾಳಾಗಿ ನಷ್ಟಕ್ಕೆ ಕಾರಣವಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡುವ ಮೂಲಕ ದೀರ್ಘಾವಧಿಗೆ ಉಳಿಸಲು ಸಾಧ್ಯವಾದರೆ ಕೃಷಿಕ ಆದಾಯವನ್ನು ದುಪ್ಪಟ್ಟು ಮಾಡಲು ಸಾಧ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕ ಸತೀಶ್ ಮರಾಠೆ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ನಗರದ ಡಯಾನ ಹೊಟೇಲ್ ಸಭಾಂಗಣದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಆಯೋಜಿ ಸಲಾದ ‘ಪ್ರಸಕ್ತ ಆರ್ಥಿಕತೆ ಮತ್ತು ಭಾರತದಲ್ಲಿ ಬ್ಯಾಂಕಿಂಗ್ ಚಿತ್ರಣ’ ವಿಷಯದ ಕುರಿತು ಉಪನ್ಯಾಸ ನೀಡಿ ಸಂವಾದದಲ್ಲಿ ಅವರು ಮಾತನಾಡುತಿದ್ದರು.

ಭಾರತದ ಬ್ಯಾಂಕುಗಳ ಮುಂದೆ ಸಾಕಷ್ಟು ಸವಾಲುಗಳಿದ್ದರೂ, ಬಂಡವಾಳ ಹೂಡಿಕೆದಾರರಿಗೂ ವಿಪುಲ ಅವಕಾಶಗಳು ಕಾದಿವೆ ಎಂದ ಅವರು, ಭಾರತ ದಲ್ಲಿ ಬ್ಯಾಂಕುಗಳ ಸಾಲದ ಬಡ್ಡಿದರ ಹೆಚ್ಚಿಗೆ ಇದೆ. ಸಾಲದ ಪ್ರಮಾಣ ಕಡಿಮೆ ಇದ್ದು, ಹಣದುಬ್ಬರ ಹೆಚ್ಚಿದೆ ಎಂದರು.

ಪ್ರಧಾನಿ ಅವರು ನಡೆಸಿದ ನೋಟುಗಳ ಅಮಾನ್ಯೀಕರಣ, ದೇಶಕ್ಕೆ ಒಂದು ತೆರಿಗೆಯ ಜಿಎಸ್‌ಟಿ, ರಿಯಲ್ ಎಸ್ಟೇಟ್‌ಗೆ ಸಂಬಂಧಿ ಸಿದ ರೇರಾ ಕಾಯಿದೆಗಳನ್ನು ದೇಶದ ಜನಸಾಮಾನ್ಯರನ್ನು ದೃಷ್ಟಿಯಲ್ಲಿರಿಸಿಕೊಂಡು ಜಾರಿಗೊಳಿಸಲಾಗಿತ್ತು. ಆದರೆ ಇದರಿಂದ ತಕ್ಷಣದಲ್ಲಿ ಉತ್ತಮ ಪರಿಣಾಮ ಬೀರದೆ ಇದ್ದರೂ, ದೀರ್ಘಕಾಲದಲ್ಲಿ ಇದು ಉತ್ತಮ ನಿರ್ಣಯವೆನಿಸಿಕೊಳ್ಳಲಿದೆ ಎಂದರು.

ಆರ್ಥಿಕ ಒಳಗೊಳ್ಳುವಿಕೆ: ಜನಸಾಮಾನ್ಯರ ಆರ್ಥಿಕ ಒಳಗೊಳ್ಳುವಿಕೆಯ ಕುರಿತು ಮಾತನಾಡಿದ ಸತೀಶ್ ಮರಾಠೆ, ಜನಧನ್ ಯೋಜನೆಯಡಿ ದೇಶದಲ್ಲಿ 35 ಕೋಟಿ ಖಾತೆಗಳು ತೆರೆಯಲ್ಪಟ್ಟವು. ಆದರೆ ಇನ್ನೂ 50 ಕೋಟಿ ಜನರು ಬ್ಯಾಂಕಿಂಗ್ ವ್ಯಾಪ್ತಿಗೆ ಬಂದೇ ಇಲ್ಲ ನಮ್ಮದು ಬಂಡವಾಳದ ದೇಶವಲ್ಲ. ಯುವಕ ರು ಉದ್ದಿಮೆಗಳನ್ನು ಆರಂಭಿಸಬೇಕಾದರೆ ಬಂಡವಾಳ ಅಗತ್ಯವಿದೆ ಎಂದವರು ಹೇಳಿದರು.

ಸಿ.ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಜಾರಿಗೆ ಬಂದ ಸಹಕಾರಿ ಬ್ಯಾಂಕುಗಳಿಗೆ ತೆರಿಗೆ ವಿಧಿಸುವ ಕಾನೂನಿನ ವಿರುದ್ಧ ಸಹಕಾರ ಭಾರತೀ ಸಂಘಟನೆ ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದೆ. ಇದರಿಂದ ರಿಯಾಯಿತಿ ಸಿಗುವ ನಿರೀಕ್ಷೆ ಇದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಕೆಲಸಕ್ಕೆ ತಕ್ಕ ಆದಾಯ: ಭವಿಷ್ಯದಲ್ಲಿ ಬ್ಯಾಂಕ್ ಅಧಿಕಾರಿಗಳ ಆದಾಯವು ಅವರ ಕೆಲಸ, ಸಾಧನೆಯನ್ನು ಆಧರಿಸಿ ಇರಲಿದೆ. ಈಗಾಗಲೇ ಸಿಇಒಗಳಿಗೆ ಇದು ಜಾರಿಗೆ ಬಂದಿದೆ. ಅಧಿಕಾರಿಗಳಿಗೆ ಶೀಘ್ರದಲ್ಲೇ ಇದು ಬರಬಹುದು. ಯೂನಿಯನ್‌ಗಳ ಒತ್ತಡ ದಿಂದಾಗಿ ಇದು ವಿಳಂಬವಾಗಬಹುದು ಎಂದರು.

ಡಿವಿಡೆಂಡ್ ಕಷ್ಟ: 2008ರವರೆಗೆ ಬ್ಯಾಂಕುಗಳು ಚೆನ್ನಾಗಿಯೇ ನಡೆದವು. 2015ರಲ್ಲಿ ಅನುತ್ಪಾದಕ ಆಸ್ತಿಯಲ್ಲಿ (ಎನ್‌ಪಿಎ) ಹೆಚ್ಚಳವಾಯಿತು. ಠೇವಣಿ ದಾರರ ಹಿತಾಸಕ್ತಿಗಾಗಿ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಹಣ ನೀಡಬೇಕಾಯಿತು. ಮುಂದಿನ ವರ್ಷ ಶೇರುದಾರರಿಗೆ ಮಾತ್ರವಲ್ಲ 70,000 ಕೋ.ರೂ. ಹೂಡಿಕೆ ಮಾಡಿದ ಸರಕಾರಕ್ಕೂ ಡಿವಿಡೆಂಡ್ ಸಿಗುವುದು ಕಷ್ಟ ಎಂದು ಮರಾಠೆ ಅಭಿಪ್ರಾಯಪಟ್ಟರು.

ಮಹಾಲಕ್ಷ್ಮೀ ಬ್ಯಾಂಕ್‌ನ ಅಧ್ಯಕ್ಷ ಯಶಪಾಲ್ ಸುವರ್ಣ ಸ್ವಾಗತಿಸಿ, ವೃತ್ತಿಪರ ನಿರ್ದೇಶಕ ಎಸ್.ಕೆ.ಮಂಜುನಾಥ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X