Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ‘ಬದಲಾದ ದೇಶ’ದಲ್ಲಿ ಪ್ರೇಮಕ್ಕೆ ನಿಷೇಧ...

‘ಬದಲಾದ ದೇಶ’ದಲ್ಲಿ ಪ್ರೇಮಕ್ಕೆ ನಿಷೇಧ ಅತ್ಯಾಚಾರಗಳಿಗೆ ಮಾನ್ಯತೆ?

ವಾರ್ತಾಭಾರತಿವಾರ್ತಾಭಾರತಿ9 Jan 2021 12:10 AM IST
share
‘ಬದಲಾದ ದೇಶ’ದಲ್ಲಿ ಪ್ರೇಮಕ್ಕೆ ನಿಷೇಧ ಅತ್ಯಾಚಾರಗಳಿಗೆ ಮಾನ್ಯತೆ?

ಉತ್ತರ ಪ್ರದೇಶದಲ್ಲಿ ಪ್ರೇಮವನ್ನು ನಿಷೇಧಿಸಿ, ಅತ್ಯಾಚಾರಗಳಿಗೆ ಮಾನ್ಯತೆಯನ್ನು ನೀಡಲಾಗುತ್ತಿದೆಯೇ? ಎನ್ನುವ ಶಂಕೆಯೊಂದು ದೇಶದ ಜನರಲ್ಲಿ ಎದ್ದಿದೆ. ಬೀದಿಯಲ್ಲಿ ಜೊತೆಯಾಗಿ ಹೋಗುವ ತರುಣ-ತರುಣಿಯರನ್ನು ತಡೆದು ಅವರ ಜಾತಿ, ಧರ್ಮಗಳನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಪೊಲೀಸರು ಅವರನ್ನು ಬಂಧಿಸುತ್ತಿದ್ದಾರೆ. ಬೇರೆ ಬೇರೆ ಧರ್ಮಗಳಿಗೆ ಸೇರಿದ ವಧುವರರು ಕುಟುಂಬಗಳ ಅನುಮತಿಯೊಂದಿಗೆ ಮದುವೆಯಾದರೂ ಅಲ್ಲಿಗೆ ಸಂಘಪರಿವಾರದ ಕಾರ್ಯಕರ್ತರು, ಪೊಲೀಸರು ವಕ್ಕರಿಸಿ ದೌರ್ಜನ್ಯ ಎಸಗುವ ಪ್ರಕರಣಗಳು ದಿನನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಯಾವುದೇ ದಾಖಲೆಗಳಿಲ್ಲದಿದ್ದರೂ, ‘ಲವ್ ಜಿಹಾದ್’ ಆರೋಪ ಹೊರಿಸಿ ನಿರ್ದಿಷ್ಟ ಸಮುದಾಯದ ಜನರನ್ನು ಸರಕಾರ ಬಂಧಿಸುತ್ತಿದೆ. ಸಂಘಪರಿವಾರದ ಪಡೆಗಳು ಬೀದಿಯಲ್ಲಿ ಹುಡುಗ ಹುಡುಗಿಯರು ಜೊತೆಗಿದ್ದರೆ ಸಾಕು ಅವರ ಮೇಲೆ ಹದ್ದುಗಳಂತೆ ಎರಗಿ ಹಲ್ಲೆ ನಡೆಸುತ್ತಿದ್ದಾರೆ ಹಾಗೂ ಅಲ್ಲಿನ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಆ ಹಲ್ಲೆಗಳಿಗೆ ಪರೋಕ್ಷವಾಗಿ ಮಾನ್ಯತೆಯನ್ನು ನೀಡುತ್ತಿವೆ. ಇದೇ ಸಂದರ್ಭದಲ್ಲಿ ದಲಿತರು ಸೇರಿದಂತೆ ದುರ್ಬಲ ಜಾತಿಯ ಹೆಣ್ಣು ಮಕ್ಕಳ ಮೃತದೇಹಗಳು ಅತ್ಯಾಚಾರಗೈದ ಸ್ಥಿತಿಯಲ್ಲಿ ಗದ್ದೆಗಳಲ್ಲಿ, ರಸ್ತೆಗಳಲ್ಲಿ, ದೇವಸ್ಥಾನಗಳಲ್ಲಿ ಪತ್ತೆಯಾಗುತ್ತಿವೆ. ವಿಪರ್ಯಾಸವೆಂದರೆ, ಸಂಘಪರಿವಾರವಾಗಲಿ, ಪೊಲೀಸರಾಗಲಿ ಈ ಬಗ್ಗೆ ಕಣ್ಣಿದ್ದೂ ಕುರುಡರಾಗಿದ್ದಾರೆ.

ಹಾಥರಸ್ ಅತ್ಯಾಚಾರವನ್ನು ಮುಚ್ಚಿ ಹಾಕಲು ಇಡೀ ವ್ಯವಸ್ಥೆ ಸರ್ವ ರೀತಿಯಲ್ಲಿ ಪ್ರಯತ್ನಿಸಿತು. ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಕೊಲೆಯಾದ ಹೆಣ್ಣುಮಗಳ ಕುಟುಂಬವನ್ನು ಬೆದರಿಸಲಾಯಿತು. ಆರೋಪಿಗಳನ್ನು ಬಹಿರಂಗವಾಗಿ ಸಮರ್ಥಿಸಲಾಯಿತು. ಆ ಘಟನೆಯನ್ನು ವರದಿ ಮಾಡಲು ತೆರಳಿದ ಪತ್ರಕರ್ತರು ಜೈಲು ಸೇರಿದರು ಮಾತ್ರವಲ್ಲ, ಇನ್ನೂ ಜಾಮೀನು ಸಿಗದೆ ಜೈಲಲ್ಲೇ ಕೊಳೆಯುತ್ತಿದ್ದಾರೆ. ಹಾಥರಸ್ ಸಂತ್ರಸ್ತೆಯನ್ನೇ ಆರೋಪಿಯನ್ನಾಗಿಸುವ ಪ್ರಯತ್ನವೂ ನಡೆಯಿತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ್ತ ಉತ್ತರ ಪ್ರದೇಶ ಮತ್ತೆ ಬೆಚ್ಚಿ ಬಿದ್ದಿದೆ. 50 ವರ್ಷ ಪ್ರಾಯದ ಅಂಗನವಾಡಿ ಕಾರ್ಯಕರ್ತೆಯೊಬ್ಬಳನ್ನು ದೇವಸ್ಥಾನದೊಳಗೆ ಓರ್ವ ಅರ್ಚಕ ಮತ್ತು ಆತನ ಅನುಚರರು ಸಾಮೂಹಿಕವಾಗಿ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಹಿಳೆಯ ಮರ್ಮಾಂಗದೊಳಗೆ ಸರಳುಗಳನ್ನು ತೂರಿಸಲಾಗಿದೆ. ಆಕೆಯ ಕುತ್ತಿಗೆ ಮತ್ತು ಕಾಲುಗಳನ್ನು ಮುರಿಯಲಾಗಿದೆ. ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನೇ ಇದು ಹೋಲುತ್ತದೆ. ಆದರೆ ನಿರ್ಭಯಾ ಪ್ರಕರಣಕ್ಕೆ ಸ್ಪಂದಿಸಿದ ದೇಶ, ದೇವಸ್ಥಾನದೊಳಗೇ ನಡೆದ ಈ ಭೀಕರ ಘಟನೆಯ ಬಗ್ಗೆ ವೌನವಾಗಿದೆ.

ಈ ದೇಶದಲ್ಲಿ ನಾಲ್ಕು ಅತ್ಯಾಚಾರಗಳು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾದವು. ಒಂದು ನಿರ್ಭಯಾ ಪ್ರಕರಣ. ಇದರ ಆರೋಪಿಗಳು ಬಸ್ ಕಂಡಕ್ಟರ್ ಮತ್ತು ಕ್ಲೀನರ್‌ಗಳು. ಅನಕ್ಷರಸ್ಥ ಮತ್ತು ದುರ್ಬಲ ಸಮುದಾಯದಿಂದ ಬಂದವರು. ಪಾನಮತ್ತರೂ ಆಗಿದ್ದರು. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ವಿದ್ಯಾವಂತೆ. ಘಟನೆ ನಡೆದುದು ನಗರದಲ್ಲಿ. ಈ ದೇಶದಲ್ಲಿ ಇದೇ ಮೊದಲ ಬಾರಿ ಅತ್ಯಾಚಾರ ನಡೆಯಿತೋ ಎನ್ನುವಂತೆ ಮೊಂಬತ್ತಿಗಳು ಬೀದಿಯಲ್ಲಿ ಉರಿದವು. ಮಾಧ್ಯಮಗಳು ದೊಡ್ಡ ಧ್ವನಿಯಲ್ಲಿ ಇದರ ವಿರುದ್ಧ ಮಾತನಾಡಿದವು. ಪರಿಣಾಮವಾಗಿ, ವಿಚಾರಣೆ ನಡೆದು, ನಾಲ್ಕೈದು ವರ್ಷಗಳ ಒಳಗೆ ಅಪರಾಧಿಗಳನ್ನು ಗಲ್ಲಿಗೇರಿಸಿಯೂ ಆಯಿತು. ಇನ್ನು ದೇಶದಲ್ಲಿ ಅತ್ಯಾಚಾರಗಳೇ ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ದೇಶ ಸಂಭ್ರಮಿಸಿತು. ಇದಾದ ಬಳಿಕ ಸುದ್ದಿಯಾದ ಅತ್ಯಂತ ಭೀಕರವಾದ ಅತ್ಯಾಚಾರ ಪ್ರಕರಣ ಜಮ್ಮುವಿನಲ್ಲಿ ನಡೆಯಿತು. ಗುಡ್ಡಗಾಡು ಸಮುದಾಯಕ್ಕೆ ಸೇರಿದ ಆಸೀಫಾ ಎನ್ನುವ ಎಳೆ ಬಾಲಕಿಯನ್ನು ಓರ್ವ ಪೊಲೀಸ್ ಅಧಿಕಾರಿ, ಇನ್ನೋರ್ವ ಕಂದಾಯ ಅಧಿಕಾರಿಗಳ ಜೊತೆಗೆ ಸುಮಾರು ನಾಲ್ಕೈದು ಮಂದಿ ದೇವಸ್ಥಾನದೊಳಗೇ ಭೀಕರವಾಗಿ ಅತ್ಯಾಚಾರಗೈದು, ಬರ್ಬರವಾಗಿ ಕೊಂದು ಹಾಕಿದರು. ಆ ಹೆಣ್ಣು ಮಗುವಿಗೆ ಅಮಲು ಪದಾರ್ಥವನ್ನು ನೀಡಿ ಎರಡು ದಿನಗಳ ಕಾಲ ಸತತ ಅತ್ಯಾಚಾರ ಗೈದುದು ಮಾತ್ರವಲ್ಲ, ಆಕೆಯ ಸೊಂಟವನ್ನು ಮುರಿದು ಕೊಂದು ಹಾಕಲಾಗಿತ್ತು. ವಿಪರ್ಯಾಸವೆಂದರೆ, ಈ ಬಗ್ಗೆ ಪ್ರಕರಣ ದಾಖಲಿಸುವುದಕ್ಕೇ ಪೊಲೀಸರು ಮೀನಾಮೇಷ ಎಣಿಸಿದರು. ಭಾರೀ ಒತ್ತಡದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದರು. ಆದರೆ ಅವರನ್ನು ಬಿಡುಗಡೆಗೊಳಿಸಲು ಬಿಜೆಪಿಯ ಸಚಿವರು, ಶಾಸಕರು, ವಕೀಲರು ಬೀದಿಗಿಳಿದು ಹೋರಾಟ ನಡೆಸಿದರು.

ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಕೆಲವು ಆರೋಪಿಗಳ ದೋಷ ಸಾಬೀತಾಯಿತಾದರೂ, ನಿರ್ಭಯಾ ಪ್ರಕರಣದ ಆರೋಪಿಗಳಿಗೆ ವಿಧಿಸಿದಂತೆ ಯಾರಿಗೂ ಗಲ್ಲು ಶಿಕ್ಷೆಯಾಗಲಿಲ್ಲ. ಜೈಲು ಶಿಕ್ಷೆಗೇ ದೇಶ ಸಮಾಧಾನ ಪಟ್ಟಿತು. ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿ ನಡೆಯಿತು. ರೆಡ್ಡಿ ಸಮುದಾಯಕ್ಕೆ ಸೇರಿದ ತರುಣಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದಳು. ಅತ್ಯಾಚಾರ ಗೈದ ಆರೋಪಿಗಳು ಚಾಲಕ ಮತ್ತು ಕ್ಲೀನರ್‌ಗಳು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದು ಸಂತ್ರಸ್ತೆಗೆ ನ್ಯಾಯ ನೀಡಿದರು. ಮಾಧ್ಯಮಗಳು ಅತ್ಯಾಚಾರಗೈದ ಆರೋಪಿಗಳಿಗೆ ಶಿಕ್ಷೆಯಾದ ಸಂಭ್ರಮವನ್ನು ಭರ್ಜರಿಯಾಗಿಯೇ ಹಂಚಿಕೊಂಡವು.

 ಅತ್ಯಾಚಾರಗಳ ರಾಜಧಾನಿಯಾಗಿರುವ ಉತ್ತರ ಪ್ರದೇಶದ ಉನಾದಲ್ಲಿ ನಡೆದ ಸೆಂಗಾರ್ ಪ್ರಕರಣವೂ ಸಾಕಷ್ಟು ಸುದ್ದಿಯಾಗಿವೆ. ಇಲ್ಲಿ ಆರೋಪಿ ಬಿಜೆಪಿ ಮುಖಂಡ. ಅತ್ಯಾಚಾರಕ್ಕೊಳಗಾದ ಮಹಿಳೆ ದುರ್ಬಲ ಸಮುದಾಯಕ್ಕೆ ಸೇರಿದಾಕೆ. ತನ್ನ ನ್ಯಾಯವನ್ನು ಪಡೆಯುವುದಕ್ಕಾಗಿ ಈಕೆ ಒಂಟಿ ಹೋರಾಟವನ್ನು ಮಾಡಬೇಕಾಯಿತು. ಆರೋಪಿಯ ಮನೆಯ ಮುಂದೆ ಆತ್ಮಾಹುತಿಗೆ ಸಿದ್ಧಳಾದಾಗಷ್ಟೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಲಾರಂಭಿಸಿದರು. ಈ ವಿಚಾರಣೆಯ ಹಾದಿಯಲ್ಲಿ ಆಕೆಯ ತಂದೆ ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿದರು. ಸಂತ್ರಸ್ತಳನ್ನು, ಆಕೆಯ ಕುಟುಂಬವನ್ನು ಅಪಘಾತವೊಂದರ ಮೂಲಕ ಸಾಮೂಹಿಕವಾಗಿ ಕೊಲೆ ಮಾಡುವ ಪ್ರಯತ್ನ ನಡೆಯಿತು. ಸಂತ್ರಸ್ತೆ ಗಂಭೀರ ಗಾಯಗಳೊಂದಿಗೆ ಪಾರಾದಳು. ಕುಟುಂಬದ ಸದಸ್ಯರೊಬ್ಬರು ಅಪಘಾತದಲ್ಲಿ ಮೃತಪಟ್ಟರು. ಕೊನೆಗೂ ಬಿಜೆಪಿ ಮುಖಂಡ ಸೆಂಗಾರ್‌ಗೆ ಸಾಮಾನ್ಯ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತು. ಹಾಥರಸ್‌ನ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬ ಇನ್ನೂ ಪೊಲೀಸರ ಗೃಹ ಬಂಧನದಲ್ಲಿದೆ. ಈಗ ನೋಡಿದರೆ ಬದೌನ್‌ನಲ್ಲಿ ಒಬ್ಬ ಅರ್ಚಕ ದೇವಸ್ಥಾನದಲ್ಲಿ ತನ್ನ ಶಿಷ್ಯರ ಜೊತೆಗೆ ಮಹಿಳೆಯನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಂದು ಹಾಕಿದ್ದಾನೆ. ಆದರೆ ಈ ಬಗ್ಗೆ ಉತ್ತರ ಪ್ರದೇಶದ ಸ್ವಯಂಘೋಷಿತ ಯೋಗಿ, ಮುಖ್ಯಮಂತ್ರಿ ಆದಿತ್ಯನಾಥ್ ಇನ್ನೂ ತುಟಿ ಬಿಚ್ಚಿಲ್ಲ. ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರವಾಗಿ ಮಾತನಾಡಬೇಕಾದರೆ, ವ್ಯವಸ್ಥೆ ಕ್ರಮ ತೆಗೆದುಕೊಳ್ಳಬೇಕಾದರೆ ಸಂತ್ರಸ್ತೆ ಮೇಲ್‌ಜಾತಿಗೆ ಅಥವಾ ಮೇಲ್‌ವರ್ಗಕ್ಕೆ ಸೇರಿರಬೇಕು. ನಗರವಾಸಿಯಾದರೆ ಇನ್ನೂ ಉತ್ತಮ. ಹಾಗೆಯೇ ಆರೋಪಿಗಳು ತೀರಾ ಕೆಳಸ್ತರದ ಬಡವರ್ಗದಿಂದ ಬಂದಿರಬೇಕು. ಆಗ ಮಾತ್ರ ಅತ್ಯಾಚಾರ ದೇಶದಲ್ಲಿ ಸುದ್ದಿಯಾಗುತ್ತದೆ. ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಇಲ್ಲವಾದರೆ ಆರೋಪಿಗಳನ್ನು ಸರಕಾರದ ನೇತೃತ್ವದಲ್ಲೇ ರಕ್ಷಿಸಲಾಗುತ್ತದೆ.

ಆದಿತ್ಯನಾಥ್ ಮುಖ್ಯಮಂತ್ರಿಯಾದ ದಿನದಿಂದ, ಅತ್ಯಾಚಾರಗಳನ್ನ್ನು ಒಂದು ‘ಸಂಸ್ಕೃತಿ’ ರೂಪದಲ್ಲಿ ಉತ್ತರ ಪ್ರದೇಶ ಆಚರಿಸುತ್ತಿದೆ. ಉತ್ತರ ಪ್ರದೇಶದ ಈ ಬದಲಾವಣೆ ಅನಿರೀಕ್ಷಿತವೇನೂ ಅಲ್ಲ. ಇದೇ ಆದಿತ್ಯನಾಥ್ ಈ ಹಿಂದೆ ಉತ್ತರ ಪ್ರದೇಶದ ಸಾರ್ವಜನಿಕ ಸಭೆಗಳಲ್ಲಿ ‘ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು’ ತನ್ನ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಆ ವೀಡಿಯೊಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂದು ಅದೇ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ ಮತ್ತು ಬೆಂಬಲಿಗರು ತಮ್ಮ ನಾಯಕನನ್ನು ಅನುಸರಿಸುತ್ತಿದ್ದಾರೆ. ಅಧಿಕಾರಕ್ಕೇರುವ ಮೊದಲು ಆದಿತ್ಯನಾಥ್ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿದ್ದವು. ಅವರ ಹಿಂದೂ ವಾಹಿನಿಯ ಕಾರ್ಯಕರ್ತರಲ್ಲಿ ಬಹುತೇಕರು ಕ್ರಿಮಿನಲ್ ಹಿನ್ನೆಲೆಗೆಸೇರಿದವರಾಗಿದ್ದಾರೆ. ಉತ್ತರ ಪ್ರದೇಶದ ಸಂಸ್ಕೃತಿಯ ರಕ್ಷಣೆಯ ಹೊಣೆಯನ್ನು ಇದೀಗ ಆ ಕಾರ್ಯಕರ್ತರ ಕೈಗೇ ಒಪ್ಪಿಸಲಾಗಿರುವಾಗ ಆ ರಾಜ್ಯದಲ್ಲಿ ಅತ್ಯಾಚಾರ, ಕೊಲೆಗಳು ಹೆಚ್ಚಳವಾಗುವುದರಲ್ಲಿ ಅಚ್ಚರಿಯೇನಿದೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X