ಗಂಗಾ ನದಿಯಲ್ಲಿ ಡಾಲ್ಫಿನ್ ಮೀನನ್ನು ಹೊಡೆದು ಕೊಂದ ಯುವಕರ ತಂಡ: ವೀಡಿಯೊ ವೈರಲ್
ಮೂವರನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಲಕ್ನೊ: ಉತ್ತರಪ್ರದೇಶದ ಪ್ರತಾಪ್ ಗಢ ನಗರದ ಗಂಗಾ ನದಿಯಲ್ಲಿ ಮೂರ್ನಾಲ್ಕು ಮಂದಿ ಸೇರಿ ಡಾಲ್ಫಿನ್ ಮೀನನ್ನು ದೊಣ್ಣೆ ಹಾಗೂ ಕೊಡಲಿಯಿಂದ ಹೊಡೆದು ಸಾಯಿಸಿರುವ ಘಟನೆ ಡಿ.31ರಂದು ನಡೆದಿದೆ. ಡಾಲ್ಫಿನ್ ಮೀನಿಗೆ ಮೂರು ಜನ ದೊಣ್ಣೆ ಹಾಗೂ ಕೊಡಲಿಯಿಂದ ಅಮಾನವೀಯವಾಗಿ ಹೊಡೆದು ಸಾಯಿಸಿರುವ ವೀಡಿಯೊ ಈಗ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಎಲ್ಲರೂ ಜೈಲಿನಲ್ಲಿದ್ದಾರೆ ಎಂದು ಪೊಲೀಸರು ಟ್ವೀಟಿಸಿದರು..
ಬಡಿಗೆ ಹಾಗೂ ಕೊಡಲಿ ಏಟಿನಿಂದಾಗಿ ರಕ್ತಸ್ತಾವದಿಂದಾಗಿ ಮೀನು ನೀರಿನಲ್ಲಿಯೇ ಸಾವನ್ನಪ್ಪಿದೆ. ಈ ವೀಡಿಯೊದ ಆಧಾರದ ಮೇಲೆ ಡಿ.21ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಅಪರೂಪದ ಸಸ್ತನಿ ಜಾತಿಗಳಲ್ಲಿ ಡಾಲ್ಫಿನ್ ಗಳು ಒಂದಾಗಿವೆ. ಇವುಗಳ ಅತಿಯಾದ ಬೇಟೆಯಾಡುವಿಕೆಯಿಂದಾಗಿ ಭಾರತದಲ್ಲಿ ಈ ಸಂತತಿಗಳು ಅಳಿವಿನಂಚಿನಲ್ಲಿವೆ.
Next Story





