"ತುಂಬಾ ವಿಕಾಸವಾಗಿದೆ" ಎಂದು ಮೋದಿ ಸರಕಾರವನ್ನು ವ್ಯಂಗ್ಯವಾಡಿದ ರಾಹುಲ್ ಗಾಂಧಿ

ಹೊಸದಿಲ್ಲಿ,ಜ.09: ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.7ರಷ್ಟು ಕುಗ್ಗಬಹುದು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‍ಎಸ್‍ಒ) ಮಾಹಿತಿ ಬಿಡುಗಡೆಗೊಳಿಸಿದ ಬೆನ್ನಲ್ಲೇ "ಟೂ ಮಚ್ ವಿಕಾಸ್" (ಬಹಳಷ್ಟು ವಿಕಾಸ್) ಎಂದು ಪ್ರತಿಕ್ರಿಯಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಮೋದಿ ಸರಕಾರವನ್ನು ವ್ಯಂಗ್ಯವಾಡಿದ್ದಾರೆ.
ಎನ್‍ಎಸ್‍ಒ ಬಿಡುಗಡೆಗೊಳಿಸಿದ ಅಂಕಿಅಂಶವು ಆರ್.ಬಿ.ಐ ಆರ್ಥಿಕ ನೀತಿ ಸಮಿತಿ ಅಂದಾಜು ಮಾಡಿದ್ದ ಶೇ 7.5ರಿಗಿಂತ 20 ಬೇಸಿಸ್ ಅಂಕಗಳಷ್ಟು ಹೆಚ್ಚಾಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಎನ್‍ಎಸ್‍ಒ ನೀಡಿದ ಅಂಕಿಅಂಶಗಳು ನಿಜವಾಗಿದ್ದೇ ಆದಲ್ಲಿ ಕಳೆದ ಆರು ದಶಕಗಳಲ್ಲಿಯೇ ಇದು ಭಾರತದ ಆರ್ಥಿಕತೆಯ ಅತ್ಯಂತ ಕಳಪೆ ನಿರ್ವಹಣೆಯಾಗಲಿದೆ.
मोदी सरकार का ऐतिहासिक ‘विकास’-
— Rahul Gandhi (@RahulGandhi) January 9, 2021
GDP -7.7%
प्रति व्यक्ति आय -5.4%
बेरोज़गारी दर 9.1%
Too Much Vikas!
Next Story







