ಹಕ್ಕಿ ಜ್ವರ: ಪಂಜಾಬ್‌ನಲ್ಲಿ ಹೊರ ರಾಜ್ಯಗಳ ಕೋಳಿ ಮಾಂಸಕ್ಕೆ ನಿಷೇಧ

ಚಂಡಿಗಢ (ಪಂಜಾಬ್), ಜ. 9: ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಪಂಜಾಬ್ ಅನ್ನು ‘ನಿಯಂತ್ರಿತ ಪ್ರದೇಶ’ ಎಂದು ಘೋಷಿಸಲಾಗಿದೆ.
ಕೋಳಿ ಮಾಂಸ ಹಾಗೂ ಅಸಂಸ್ಕರಿತ ಕೋಳಿ ಮಾಂಸ ಸೇರಿದಂತೆ ಕೋಳಿಗಳ ಆಮದಿಗೆ ಜನವರಿ 15ರ ವರೆಗೆ ರಾಜ್ಯದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಪಂಜಾಬ್ ಸರಕಾರದ ಹೇಳಿಕೆ ತಿಳಿಸಿದೆ.
ಹಕ್ಕಿಜ್ವರ ಹರಡವುದನ್ನು ತಡೆಯಲು ಪಶು ಸಂಗೋಪನೆ ಸಚಿವ ತ್ರಿಪಾಠಿ ರಾಜಿಂದರ್ ಸಿಂಗ್ ಬಾಜ್ವಾ ಅವರೊಂದಿಗೆ ಸಮಾಲೋಚನೆ ನಡೆಸಿ ಈ ಎರಡೂ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಕೆ. ಜನುಜಾ ಹೇಳಿದ್ದಾರೆ.
Next Story





