ಉಚ್ಚಿಲ: ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶುಭಾರಂಭ

ಪಡುಬಿದ್ರೆ, ಜ.10: ಹೆಸರಾಂತ ಗೃಹ ಪೀಠೋಪಕರಣಗಳ ಮಳಿಗೆ ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ನ ಐದನೇ ಮಳಿಗೆಯು ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದ ಡೊಮಿನಿಕ್ ಪ್ಲಾಝಾದಲ್ಲಿ ರವಿವಾರ ಶುಭಾರಂಭಗೊಂಡಿತು.
ನೂತನ ಶೋರೂಂನ್ನು ಉದ್ಘಾಟಿಸಿದ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಪರಿವರ್ತನೆಗೆ ಹೊಂದಿಕೊಂಡು ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಕಳೆದ 25 ವರ್ಷಗಳಿಂದ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಗಳಿಸಿರುವ ಬಾವಾ ಮೆಟ್ರೋ ಫರ್ನಿಚರ್ ವರ್ಲ್ಡ್ ಅತೀ ದೊಡ್ಡ ಗೃಹ ಪೀಠೋಪಕರಣಗಳ ಮಳಿಗೆಯಾಗಿದೆ. ಉಚ್ಚಿಲದ ಮೆಟ್ರೋ ವರ್ಲ್ಡ್ ಕೂಡಾ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿ ಬೆಳೆಯಲಿ ಹಾರೈಸಿದರು.
ಮೊದಲ ಮಹಡಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ ಶುಭ ಹಾರೈಸಿದರು.
ಎರ್ಮಾಳು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶಬೀರ್ ಫೈಝಿ ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಎರ್ಮಾಳಿನ ಸೇಕ್ರೆಡ್ ಹಾರ್ಟ್ ಚರ್ಚ್‌ನ ವಂದನೀಯ ಧರ್ಮಗುರು ರೆ. ಫಾ.ರೊನಾಲ್ಡ್ ಮಿರಾಂಡ, ಅನಿವಾಸಿ ಉದ್ಯಮಿ ನಾಸಿರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ ಮುಂಬಯಿ ಕಸ್ಟಮ್ಸ್ ಅಧಿಕಾರಿ ರೋಹಿತ್ ಹೆಗ್ಡೆ ಎರ್ಮಾಳು, ಬಾವಾ ಎಜ್ಯುಕೇಶನ್ ಟ್ರಸ್ಟ್‌ನ ಸಂಚಾಲಕ ಕೆ.ಅಬ್ದುಲ್ಲಾ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೆಟ್ರೋ ಫರ್ನಿಚರ್‌ನ ಆಡಳಿತ ನಿರ್ದೇಶಕ ಫಾರೂಕ್, ಮನ್ಸೂರ್, ಕಾಪು ತಾಪಂ ಉಪಾಧ್ಯಕ್ಷ ಯು.ಸಿ.ಶೇಕಬ್ಬ, ಉದ್ಯಮಿ ಉಮೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ಆದಿಲ್ ಸ್ವಾಗತಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಈಗಾಗಲೇ ತಲಪಾಡಿ, ಪಯ್ಯನ್ನೂರು, ಕಾಞಂಗಾಡ್‌ನಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಇಂದು ಶುಭಾರಂಭಗೊಂಡ ಉಚ್ಚಿಲ ಶೋರೂಂ ಐದನೇ ಶಾಖೆಯಾಗಿದೆ. ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶೋರೂಂನಲ್ಲಿ ಎಲ್ಲ ಸಾಮಗ್ರಿಗಳು ಹೋಲ್‌ಸೇಲ್ ದರದಲ್ಲಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶೋರೂಂನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.






.gif)
.gif)
.gif)
.gif)
.gif)
.gif)
.gif)
.gif)
.gif)
.gif)

