‘ಶ್ರೀಚಮಕಾಭರಣಮ್’ ಕೃತಿ ಬಿಡುಗಡೆ

ಮಂಗಳೂರು : ಕದ್ರಿ ದೇಗುಲದ ಅರ್ಚಕ ವಿದ್ವಾನ್ ಪ್ರಭಾಕರ ಅಡಿಗರು ಬರೆದಿರುವ ಸಂಹಿತಾ-ಪದ- ಕ್ರಮ- ಜಟಾ- ಘನ ಪಾಠ ಸಹಿತವಾಗಿರುವ ಶ್ರೀಚಮಕಾಭರಣಮ್ ಕೃತಿಯನ್ನು ವಿದ್ವಾಂಸ ಕೆ. ಲಕ್ಷ್ಮಿನಾರಾಯಣ ಕುಂಡಂತಾಯ ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಸಾದದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಚಾರ್ವಾಕನಂತಹ ವೇದ ವಿರೋದಿಗಳಿದ್ದರು. ಈ ಕಾಲದಲ್ಲಿ ವೇದ ವಿರೋಧ ದೊಡ್ಡ ವಿಚಾರವಲ್ಲ. ಜಾನಪದ ಮತ್ತು ವೈದಿಕ ವಿರುದ್ಧ ದಿಕ್ಕಿನಲ್ಲಿದೆ ಎಂಬ ವಾದ ನಡೆಯುತ್ತಲೇ ಬಂದಿದೆ. ಆದರೆ ಅವರೆರಡು ಸುಗಮ ಸಮಾಗ ಮವಾಗಿದೆ. ಅವೆರಡೂ ಒಂದೇ ಎಂದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ಕುಂಜತ್ತೋಡಿ ವಾಸುದೇವ ಅಲೆವೂರಾಯ, ಡಾ.ಸುಧೀಂದ್ರ, ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಮಾತನಾಡಿದರು. ಪ್ರಕಾಶಕ ರಘುರಾಮಪ್ರಸಾದ್ ಪಿದಮಲೆ ಅವರನ್ನು ಅಭಿನಂದಿಸಲಾಯಿತು. ಅನುಪಮಾ ಅಡಿಗ ಉಪಸ್ಥಿತರಿದ್ದರು. ವಿದ್ವಾನ್ ಪ್ರಭಾಕರ ಅಡಿಗ ಕೃತಿ ಪರಿಚಯಿಸಿದರು. ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.
Next Story





