ಸುರತ್ಕಲ್ ಪೂರ್ವ ವಾರ್ಡ್‌ನ ನೀರು ಶೇಖರಣಾ ಘಟಕಕ್ಕೆ ಶಂಕುಸ್ಥಾಪನೆ

ಮಂಗಳೂರು, ಜ.10: ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಾಲಿಕೆಯ ಸುರತ್ಕಲ್ ಪೂರ್ವ ವಾರ್ಡ್ ನಂಬ್ರ 2ರ ಪಡ್ರೆ ಧೂಮಾವತಿ ದೈವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ನೀರು ಶೇಖರಣಾ ಘಟಕಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಶಂಕುಸ್ಥಾಪನೆಗೊಳಿಸಿದರು.
ಉಪಮೇಯರ್ ವೇದಾವತಿ, ಕಾರ್ಪೊರೇಟರ್ ಶ್ವೇತಾ ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಮಂಡಲ ಉಪಾಧ್ಯಕ್ಷ ಮಹೇಶ್ ಮೂರ್ತಿ, ವಿಠಲ ಸಾಲ್ಯಾನ್, ಮಂಡಲ ಖಜಾಂಚಿ ಪುಪ್ಪರಾಜ್, ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ, ಯುವಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ಶಕ್ತಿ ಕೇಂದ್ರದ ಪ್ರಮುಖ ಸುರೇಂದ್ರ ಸುವರ್ಣ, ರವಿ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಹಾಬಲ ರೈ, ದಿನಕರ್ ಶೆಟ್ಟಿ, ಯಾದವ ಪೂಜಾರಿ, ಗೋಪಾಲ ಶೆಟ್ಟಿ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
Next Story





