ಅಮೆರಿಕ ಸಂಸತ್ ದಾಳಿ ಅಕ್ಷಮ್ಯ, ನಾನು ಟ್ರಂಪ್ ಗೆ ಕಾಲ್ ಮಾಡಿ ಮಾತನಾಡುತ್ತೇನೆ: ಕೇಂದ್ರ ಸಚಿವ ರಾಮದಾಸ್ ಅಠಾವಳೆ
ʼಗೊ ಕೊರೋನ ಗೊ ಖ್ಯಾತಿಯʼ ಕೇಂದ್ರ ಸಚಿವ

ಹೊಸದಿಲ್ಲಿ,ಜ.10: ಕೊರೋನ ಪ್ರಾರಂಭದ ಸಮಯದಲ್ಲಿ ಕೊರೋನ ರೋಗವನ್ನು ನಿರ್ಮೂಲನೆ ಮಾಡುತ್ತೇನೆಂದು ʼಗೊ ಕೊರೊನಾ ಗೊʼಘೋಷಣೆಯನ್ನು ಕೂಗಿ ಲಾಕ್ ಡೌನ್ ಮಧ್ಯೆಯೂ ನಗೆಪಾಟಲಿಗೀಡಾಗಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಇದೀಗ ಇನ್ನೊಂದು ಹೇಳಿಕೆ ನೀಡಿ ಸಾಮಾಜಿಕ ತಾಣದಾದ್ಯಂತ ಟ್ರೋಲ್ ಗೆ ಗುರಿಯಾಗಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಚಿವ ರಾಮದಾಸ್ ಅಠಾವಳೆ, "ಅಮೆರಿಕಾದ ಸಂಸತ್ ಭವನದಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತಿದ್ದೇನೆ. ಇದು ರಿಪಬ್ಲಿಕನ್ ಪಾರ್ಟಿಗೆ ಮಾತ್ರವಲ್ಲ, ಅಮೆರಿಕಾಗೂ, ಪ್ರಜಾಪ್ರಭುತ್ವಕ್ಕೂ ಮಾಡಿದ ಅವಮಾನವಾಗಿದೆ. ಈ ಕಾರಣದಿಂದಾಗಿ ನಾನು ನನ್ನ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಕುರಿತಾದಂತೆ ನಾನು ಟ್ರಂಪ್ ರೊಂದಿಗೆ ಫೋನ್ ಮಾಡಿ ಮಾತನಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸಾಮಾಜಿಕ ತಾಣದಾದ್ಯಂತ ಅವರ ಹೇಳಿಕೆ ವ್ಯಂಗ್ಯಕ್ಕೀಡಾಗಿದೆ.
Sir @RamdasAthawale, Trump toh phone nahi uthayenge, Joe Biden ka numbar try kijiye aur ye thread explain kijiye.. https://t.co/X0FgmlnlYf
— Mohammed Zubair (@zoo_bear) January 9, 2021
Again he forgot his medicine. Someone should attend him all the time.... pic.twitter.com/gROH4CM1hH
— sandeep tamta (@sandeeptamta) January 9, 2021
Bro RPI & Republican party are different.
— Mohammad Danish Shaikh(MDS) (@Danish_Shaikh7) January 9, 2021
It's good that you should have laughter sometimes, but this guy is a minister in the govt. Resources r being spent on him & he thinks this is funny.
I mean wtf, he gonna call Trump .
At this point, Trump won't accept even Modiji's call.







