Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಂವಿಧಾನ ಉಳಿಸಬಹುದಾದ ಶಕ್ತಿ ಇರುವುದು...

ಸಂವಿಧಾನ ಉಳಿಸಬಹುದಾದ ಶಕ್ತಿ ಇರುವುದು ದಲಿತ, ದಮನಿತ ಸಮುದಾಯಗಳಿಗೆ ಮಾತ್ರ: ಚಿಂತಕ ಶಿವಸುಂದರ್

ವಾರ್ತಾಭಾರತಿವಾರ್ತಾಭಾರತಿ10 Jan 2021 11:21 PM IST
share
ಸಂವಿಧಾನ ಉಳಿಸಬಹುದಾದ ಶಕ್ತಿ ಇರುವುದು ದಲಿತ, ದಮನಿತ ಸಮುದಾಯಗಳಿಗೆ ಮಾತ್ರ: ಚಿಂತಕ ಶಿವಸುಂದರ್

ಮೈಸೂರು: ಭೀಮಾ ಕೋರೆಗಾಂವ್ ಪ್ರಕರಣ ನೆನಸಿಕೊಳ್ಳಬೇಕು ಎಂದರೆ ದಲಿತರ ಸ್ವಾಭಿಮಾನವನ್ನು ಮತ್ತು ದಮನಿತ ಸಮುದಾಯದ ಪರಾಕ್ರಮ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.

ನಂಜನಗೂಡಿನ ಖಾಸಿ ಬಸ್ ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ರವಿವಾರ ನಂಜನಗೂಡು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ 203ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ದಲಿತರ ಸ್ವಾಭಿಮಾನ ಜಾಗೃತಿ ದಿನ “ಬೃಹತ್ ಸಮಾವೇಶ”ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. 

ಸಂವಿಧಾನ ಉಳಿಸಿಕೊಡಬಹುದಾದ ಶಕ್ತಿ ಇರುವುದು ದಲಿತ ದಮನಿತ ಸಮುದಾಯಗಳಿಗೆ ಮಾತ್ರ. ಸಂವಿಧಾನದಿಂದ ಸಿಗಬೇಕಾದದ್ದು ಸಿಗದಿರುವುದು ಬ್ರಾಹ್ಮಣಶಾಹಿಗಳಿಂದ. ದೇಶದ ಪ್ರಧಾನಿ ಅಂಬಾನಿ, ಅದಾನಿ ಜೊತೆ ಸೇರಿಕೊಂಡು ಆಳ್ವಿಕೆ ಮಾಡುತ್ತಿದ್ದಾರೆ. ಇವೆರಡರ ವಿರುದ್ಧ ನಾವು ನಿರಂತರ ಸ್ವಾಭಿಮಾನ ಪೂರಕ ಮತ್ತೊಂದು ಯುದ್ಧ ಮಾಡಬೇಕಿದೆ. ಸಂವಿಧಾದನ ಉಳಿವಿಗೆ ಮತ್ತು ಬೆಳವಿಗೆ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಹಲವಾರು ಇಕ್ಕಟ್ಟಿನ ನಡುವೆ ನಮ್ಮ ಜನ ಬದುಕಬೇಕು ಎಂದು ಸಂವಿಧಾನದಲ್ಲಿ ಹಲವಾರು ರಕ್ಷಣೆಗಳನ್ನು ಕೊಟ್ಟಿದ್ದರು. ಆದರೆ ಅವೆಲ್ಲವನ್ನು ಕಿತ್ತುಹಾಕುತ್ತಿದ್ದಾರೆ. ಪಾರ್ಲಿಮೆಂಟ್ ತಪ್ಪು ಮಾಡಿದರೆ ಸುಪ್ರೀಂಕೋರ್ಟ್ ಎಂಬುದಿತ್ತು. ಆದರೆ ಅದೇ ಸುಪ್ರೀಂಕೋರ್ಟ್‍ಗಳು ಪ್ರಧಾನಿ ಮೋದಿ ಹೇಳಿದ್ದೆಲ್ಲಾ ಸರಿ ಎನ್ನುತ್ತಿವೆ ಎಂದು ಹರಿಹಾಯ್ದರು.

ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು ಎಂದು ಆನಂದ್ ತೇಲ್ತುಂಬ್ಡೆ, ವರಹರರಾವ್ ಸೇರಿದಂತೆ ಸ್ಟ್ಯಾನ್ ಸ್ವಾಮಿ ಅವರನ್ನು  ಬಂಧಿಸಲಾಗಿದೆ. ಸಾವಿರಾರು ಜನರ ಕೊಲೆಗೆ ಕಾರಣರಾದವರು ದೇಶದ ಗೃಹ ಮಂತ್ರಿ. ಕೊಲೆಗಳಾಗುತ್ತಿದ್ದರೂ ಕಣ್ಣುಮುಚ್ಚಿಕೊಂಡಿದ್ದವರು ದೇಶದ  ಪ್ರಧಾನಿ. ಅನ್ಯಾಯದ ವಿರುದ್ಧ ಮಾತನಾಡಿದವರು ದೇಶದ್ರೋಹಿಗಳು ! ಇದೆಂತ ವಿಪರ್ಯಾಸ ಎಂದು ಪ್ರಶ್ನಿಸಿದರು.

ದಿಲ್ಲಿಯಲ್ಲಿ ಕಳೆದ 46 ದಿನಗಳಿಂದ ದೇಶಕಂಡರಿಯದ ರೀತಿ 6 ಲಕ್ಷ ರೈತರು ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ಚಳಿ ಮಳೆಗೆ ಸಿಲುಕಿ 65 ಮಂದಿ ರೈತರು ಸತ್ತು ಹೋಗಿದ್ದಾರೆ. ಅವರ ಕಷ್ಟವನ್ನು ಕೇಳಲು ಸಮಯವಿಲ್ಲದ ಪ್ರಧಾನಿಗೆ ಸೌರವ್ ಗಂಗೂಲಿ ಆರೋಗ್ಯ ವಿಚಾರಿಸಲು ಸಮಯವಿದೆ ಎಂದು ವಾಗ್ದಾಳಿ ನಡೆಸಿದರು.

ದನಗಳನ್ನು ಕೊಂದರೆ ಜೈಲಿಗೆ ಹಾಕುತ್ತೀವಿ ಎನ್ನುತ್ತಾರೆ. ಜನಗಳನ್ನು ಕೊಂದವರು ದೇಶ ಆಳುತ್ತಿದ್ದಾರೆ. ಇದು ಜನಗಳ ಭಾರತವೊ ಜನಗಳ ಭಾರತವೊ. ದನ ಕೊಂದವರಿಗೆ ಕಠಿಣ ಶಿಕ್ಷೆ, ಜನ ಕೊಂದವರಿಗೆ ಪದವಿಗಳು
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X