ಬಿಎಂಸಿ ಪ್ರಕರಣ: ಸೋನು ಸೂದ್‌ಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್

ಮುಂಬೈ: ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನಟ ಸೋನು ಸೂದ್ ಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ನೋಟಿಸ್ ನೀಡಿರುವ ಪ್ರಕರಣದ ವಿಚಾರಣೆಯನ್ನು ಮುಂದೂಡಿರುವ ಬಾಂಬೆ ಹೈಕೋರ್ಟ್ ಜನವರಿ 13ರ ತನಕ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರಲು ಸೂದ್‌ಗೆ ಮಧ್ಯಂತರ ರಕ್ಷಣೆಯನ್ನು ನೀಡಿದೆ.
ಮುಂಬೈನಲ್ಲಿ ಸೂದ್ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ಧ್ವಂಸ ಮಾಡುವುದಾಗಿ ಬಿಎಂಸಿ ನೀಡಿರುವ ನೋಟಿಸ್ ನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸಿವಿಲ್ ನ್ಯಾಯಾಲಯವು ಡಿಸೆಂಬರ್ ನಲ್ಲಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸೋನು ಸೂದ್ ಜನವರಿ 10ರಂದು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಸಿದ್ದರು.
ಸೋನು ಸೂದ್ ಅವರು ಅಧಿಕಾರಿಗಳ ಅನುಮತಿಯಿಲ್ಲದೆ ಮುಂಬೈನ ಜುಹುವಿನಲ್ಲಿರುವ ಆರು ಮಹಡಿಯ ವಸತಿ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿರುವ ಆರೋಪದಲ್ಲಿ ಬಿಎಂಸಿ ಮುಂಬೈ ಪೊಲೀಸರಿಗೆ ದೂರು ನೀಡಿತ್ತು. ಎಂಆರ್‌ಟಿಪಿ ಕಾಯ್ದೆ ಅಡಿ ಸೂದ್ ವಿರುದ್ದ ಕ್ರಮಕೈಗೊಳ್ಳುವಂತೆ ಬಿಎಂಸಿ, ಜುಹು ಪೊಲೀಸರಿಗೆ ಮನವಿ ಮಾಡಿತ್ತು.
Next Story





