ಇಂಡೋನೇಶ್ಯ ವಿಮಾನದ ಕಪ್ಪು ಪೆಟ್ಟಿಗೆ ಇರುವ ಸ್ಥಳ ಪತ್ತೆ

ಸಾಂದರ್ಭಿಕ ಚಿತ್ರ
ಜಕಾರ್ತ (ಇಂಡೋನೇಶ್ಯ), ಜ. 11: ಇಂಡೋನೇಶ್ಯದ ಜಾವಾ ಸಮುದ್ರದಲ್ಲಿ ಪತನಗೊಂಡಿರುವ ದೇಶದ ಶ್ರೀವಿಜಯ ಏರ್ ವಿಮಾನದ ಅವಶೇಷಗಳು, ಪ್ರಯಾಣಿಕರ ದೇಹಗಳ ಭಾಗಗಳು ಮತ್ತು ಬಟ್ಟೆಗಳು ರವಿವಾರ ಪತ್ತೆಯಾಗಿವೆ.
ಶನಿವಾರ ಅಪರಾಹ್ನ ರಾಜಧಾನಿ ಜಕಾರ್ತ ವಿಮಾನ ನಿಲ್ದಾಣದಿಂದ ದೇಶದ ಪೊಂಟಿಯನಕ್ ನಗರಕ್ಕೆ 62 ಪ್ರಯಾಣಿಕರೊಂದಿಗೆ ಹೊರಟ ವಿಮಾನವು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಮುದ್ರಕ್ಕೆ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲ 62 ಮಂದಿ ಮೃತಪಟ್ಟಿದ್ದಾರೆ.
ವಿಮಾನದ ಕಾಕ್ಪಿಟ್ ಧ್ವನಿ ಮತ್ತು ಹಾರಾಟ ಮಾಹಿತಿ ದಾಖಲೆಗಳನ್ನು ಹೊಂದಿರುವ ಮಹತ್ವದ ಕಪ್ಪು ಪೆಟ್ಟಿಗೆ ಇರುವ ಸ್ಥಳವನ್ನು ಗುರುತಿಸಲಾಗಿದೆ ಹಾಗೂ ಅದನ್ನು ಪಡೆಯಲು ಮುಳುಗುಗಾರರನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮುದ್ರದಲ್ಲಿ 23 ಮೀಟರ್ ಆಳದಿಂದ ಮಾನವ ದೇಹಗಳ ಭಾಗಗಳು ಮತ್ತು ವಿಮಾನದ ಅವಶೇಷಗಳನ್ನು ಹೊರದೆಗೆಯಲಾಗಿದೆ ಎಂದು ಇಂಡೋನೇಶ್ಯದ ಸಾರ3ಇಗೆ ಸುರಕ್ಷಾ ಸಂಸ್ಥೆಯ ಮುಖ್ಯಸ್ಥ ಸೋರ್ಜಂಟೊ ಹೇಳಿದರು.
Next Story





