ಮಹಾರಾಷ್ಟ್ರ ಮೂಲದ ಯುವಕ ನಾಪತ್ತೆ

ಮಂಗಳೂರು, ಜ.11: ಮಂಗಳೂರಿನಲ್ಲಿ ವಾಸವಿದ್ದ ಮಹಾರಾಷ್ಟ್ರ ಮೂಲದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾರುಗಡ್ ನಿವಾಸಿ ಪ್ರಶಾಂತ್ ಗೋಶಾಲಿ (28) ನಾಪತ್ತೆಯಾದ ಯುವಕ. ಈತ ಮಂಗಳೂರಿನ ಎ.ಜೆ. ಆಸ್ವತ್ರೆಯ ಹಿಂಬದಿಯ ಮನೆಯೊಂದರಲ್ಲಿ ಸುಮಾರು 2 ತಿಂಗಳಿನಿಂದ ವಾಸವಿದ್ದ ಎಂದು ತಿಳಿದುಬಂದಿದೆ.
ನಾಪತ್ತೆಯಾದ ಪ್ರಶಾಂತ್ ಗೋಶಾಲಿ ಜ.8ರಂದು ಕಾಣೆಯಾಗಿದ್ದಾರೆ ಎಂದು ಪರಿಚಯಸ್ಥರು ದೂರು ದಾಖಲಿಸಿದ್ದಾರೆ.
ಚಹರೆ: ಸುಮಾರು 5 ಅಡಿ ಎತ್ತರವಿದ್ದು, ಎದುರು ಬೋಳು ತಲೆ, ಗೋಧಿ ಮೈಬಣ್ಣ, ಕೋಲು ಮುಖ, ಸಾಧರಣ ಮೈಕಟ್ಟು ಹೊಂದಿದ್ದಾರೆ. ಬಿಳಿ ಅಂಗಿಯಲ್ಲಿ ಹಸಿರು ಮತ್ತು ಕೆಂಪು ಚುಕ್ಕೆಗಳಿರುತ್ತದೆ. ನೀಲಿ ಪ್ಯಾಟ್ ಧರಿಸಿದ್ದಾರೆ. ಹಿಂದಿ ಮಾತನಾಡುತ್ತಾರೆ. ಮದ್ಯಪಾನವನ್ನು ಸೇವಿಸುವ ಅಭ್ಯಾಸವಿದೆ.
ಈ ಚಹರೆಯುಳ್ಳ ವ್ಯಕ್ತಿಯು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ (0824-2220520) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





