ಎಸ್ಸೆಸೆಫ್ ವತಿಯಿಂದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಅಭಿನಂದನಾ ಕಾರ್ಯಕ್ರಮ

ಸುಳ್ಯ : ಮೊಗರ್ಪಣೆ ಜಮಾಅತ್ ಕಮಿಟಿಯ ನೂತನ ಅಧ್ಯಕ್ಷರಾದ ಹಾಜಿ. ಜಿ ಇಬ್ರಾಹಿಂ ಸೀಫುಡ್ ಹಾಗೂ ಕಮಿಟಿಯ ಎಲ್ಲಾ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಅಗಲಿದ ನೇತಾರರ ಹೆಸರಿನಲ್ಲಿ ತಹಲೀಲ್ ಸಮರ್ಪಣೆ ಹಾಗೂ ದುಆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಜಯನಗರ ದುವಾ ನಿರ್ವಹಿಸಿದರು. ಎಸ್.ಯು ಜುನೈದ್ ಅಧ್ಯಕ್ಷತೆ ವಹಿಸಿದ್ದರು. ಮಿಸ್ಬಾಹ್ ಜಯನಗರ ಕಿರಾಅತ್ ಪಠಿಸಿದರು. ಲತೀಫ್ ಉಸ್ತಾದ್ ಮೊಗರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಬಾಹುದ್ದೀನ್ ಹಿಮಮಿ ಅನುಸ್ಮರಣೆ ಪ್ರಭಾಷಣವನ್ನು ಮಾಡಿದರು ಬಶೀರ್ ಸಖಾಫಿ ಜಯನಗರ ದ.ಕ ಜಿಲ್ಲಾ ಎಸ್ ವೈ ಎಸ್ ಸಮಿತಿ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಕಿರ್ ಸ್ವಾಗತಿಸಿ ವಂದಿಸಿದರು.
Next Story





