ಬಾರಕೂರು ಸೀತಾನದಿಯಲ್ಲಿ ಮುಳುಗಿ ಯುವಕ ಮೃತ್ಯು
ಬಾರಕೂರು : ಸೀತಾನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ಮಧ್ಯಾಹ್ನದ ಸುಮಾರಿಗೆ ನಡೆದಿದೆ.
ಐದು ಮಂದಿಯ ತಂಡವೊಂದು ಮೀನು ಹಿಡಿಯಲು ಸೀತಾನದಿಗೆ ಇಳಿದಿದ್ದು, ಓರ್ವ ನದಿಯಲ್ಲಿ ಮುಳುಗಿ ಮೃತಟ್ಟಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ನಿವಾಸಿ ಭಾಸ್ಕರ ಶೆಟ್ಟಿ ಎಂಬವರು ನಾಲ್ವರನ್ನು ರಕ್ಷಣೆ ಮಾಡಿರುವುದಾಗಿ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಹನೆಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಅರುಂಧತಿ ಏಸುಮನೆ, ಕಾರ್ಯದರ್ಶಿ ಉಮೇಶ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ರಮಾನಂದ ಶೆಟ್ಡಿ, ಲಕ್ಷ್ಮಣ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story