Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಹಾಯ ಹಸ್ತ ಚಾಚಿದ ಸೋಶಿಯಲ್...

ಸಹಾಯ ಹಸ್ತ ಚಾಚಿದ ಸೋಶಿಯಲ್ ಫೋರಮ್-ಒಮಾನ್; ವಿದೇಶದಲ್ಲಿ ಸಂಕಷ್ಟದಲ್ಲಿದ್ದ ಮೂವರ ರಕ್ಷಣೆ

ವಾರ್ತಾಭಾರತಿವಾರ್ತಾಭಾರತಿ12 Jan 2021 11:04 PM IST
share

ಮಂಗಳೂರು, ಜ.12: ಸೋಶಿಯಲ್ ಫೋರಮ್ ಒಮಾನ್‌ನ ಸದಸ್ಯರ ನಿರಂತರ ಪರಿಶ್ರಮದ ಫಲವಾಗಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಸಂಕಷ್ಟಕ್ಕೆ ಈಡಾಗಿದ್ದ ಇಬ್ಬರು ಮಹಿಳೆಯರು ಸಹಿತ ಮೂವರನ್ನು ರಕ್ಷಿಸಿ, ಊರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ.

ಮಸ್ಕತ್‌ನ ಕಾಫಿ ಶಾಪ್‌ನಲ್ಲಿ ದುಡಿಯುತ್ತಿದ್ದ ಮಂಗಳೂರು ಮೂಲದ ಮುಹಮ್ಮದ್ ಎಂಬ ಯುವಕನಿಗೆ ಕೋವಿಡ್ ಲಾಕ್‌ಡೌನ್‌ನ ಮೊದಲಿನಿಂದಲೇ ವೇತನ ನೀಡದೇ ಮಾಲಕನು ದುಡಿಸಿಕೊಳ್ಳುತ್ತಿದ್ದ ಎನ್ನುವ ಆರೋಪ ಕೇಳಿಬಂದಿತ್ತು. ನಂತರ ಕೋವಿಡ್ ಸಮಸ್ಯೆ ಪ್ರಾರಂಭವಾಗಿ ಕೆಲ ತಿಂಗಳು ಉದ್ಯೋಗವಿಲ್ಲದೇ ಈ ಯುವಕ ರೂಮ್‌ನಲ್ಲಿಯೇ ಉಳಿಯಬೇಕಾದ ಸಂದರ್ಭ ಏರ್ಪಟ್ಟಿತ್ತು. ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಮುಹಮ್ಮದ್‌ಗೆ ವೇತನ ಸಿಗದೇ ಮನೆಯ ಪರಿಸ್ಥಿತಿ ನೆನೆದು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದ ಸೋಶಿಯಲ್ ಫೋರಮ್-ಒಮಾನ್ ಸಂಘಟನೆಯು ಯುವಕನ ಸಹಾಯಕ್ಕೆ ಮುಂದಾಗಿತ್ತು. ಈತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಯುವಕನಿಗೆ ಬರಬೇಕಿದ್ದ ಬಾಕಿ ವೇತನವನ್ನು ಕಾಫಿ ಶಾಪ್ ಮಾಲಕರಿಂದ ಕೊಡಿಸಲಾಯಿತು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕರೆತಂದು ಮಂಗಳೂರಿಗೆ ಕಳುಹಿಸುವವರೆಗೆ ಸೋಶಿಯಲ್ ಫೋರಮ್-ಒಮಾನ್ ಪರಿಶ್ರಮ ಪಟ್ಟಿತು.

ಎರಡನೇ ಪ್ರಕರಣದಲ್ಲಿ ಸನಾ ಎನ್ನುವ ಕರ್ನಾಟಕ ಮೂಲದ ಮಹಿಳೆ ಒಮಾನ್‌ನಲ್ಲಿ ಹಲವು ವರ್ಷಗಳಿಂದ ಹೌಸ್ ಮೇಡ್ ಆಗಿ ಕೆಲಸ ಮಾಡುತ್ತಿದ್ದರು. 10 ವರ್ಷಗಳಿಂದಲೂ ವೀಸಾ ನವೀಕರಿಸಿರಲಿಲ್ಲ. ತಾನು ಹೇಗಾದರೂ ಮಾಡಿ ಊರಿಗೆ ತೆರಳಬೇಕೆಂಬ ಮಹಿಳೆಯ ಮಹದಾಸೆಗೆ ಸೋಶಿಯಲ್ ಫೋರಮ್-ಒಮಾನ್ ಸಹಾಯ ಹಸ್ತ ಚಾಚಿತು.

ಕೆಲ ದಿನಗಳವರೆಗೆ ಮಹಿಳೆಗೆ ಆಶ್ರಯ ನೀಡಿ, ಭಾರತೀಯ ರಾಯಭಾರಿ ಕಚೇರಿಯಲ್ಲಿ ನಿರಂತರ ಸಂಪರ್ಕದ ಮೂಲಕ ಊರಿಗೆ ತೆರಳಲು ಬೇಕಾದ ಎಲ್ಲ ದಾಖಲೆ ಪತ್ರಗಳನ್ನು ತಯಾರಿಸಲಾಯಿತು.

ಈ ಮಹಿಳೆಯನ್ನು ವಿಮಾನ ನಿಲ್ದಾಣದವರೆಗೂ ಬಿಟ್ಟುಬರಲಾಗಿತ್ತು. ಬೋರ್ಡಿಂಗ್ ಪಾಸ್ ಕಳೆದರೂ ಮಹಿಳೆಗೆ ವಿಮಾನ ಹೊರ ಡುವ ವಿಚಾರ ಗೊತ್ತಾಗದೇ ಅಲ್ಲೇ ಉಳಿದಿದ್ದರು. ನಿರಾಶೆಗೊಳಗಾಗದ ಸೋಶಿಯಲ್ ಫೋರಂ ಸದಸ್ಯರು ಕೆಲ ದಿನಗಳ ಅಂತರ ದಲ್ಲಿ ಬೇರೆ ಟಿಕೆಟ್ ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಸಿ, ವಿಮಾನದಲ್ಲಿ ಕುಳ್ಳಿರಿಸುವವರೆಗೂ ಸೋಶಿಯಲ್ ಫೋರಮ್-ಒಮಾನ್ ಸದಸ್ಯರೊಬ್ಬರನ್ನು ಪ್ರತ್ಯೇಕವಾಗಿ ಏರ್ಪೋರ್ಟ್‌ನ ಒಳಗೆ ನೇಮಿಸಲಾಯಿತು. ಯಾವುದೇ ಕೊರತೆ ಬಾರದ ರೀತಿ ಯಲ್ಲಿ ತವರಿಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರನೇ ಪ್ರಕರಣದಲ್ಲಿ ಆಮಿನಾ ಎಂಬ ಬೆಂಗಳೂರು ಮೂಲದ ಮಹಿಳೆಯೊಬ್ಬಳು ಲಕ್ಷ ರೂ. ವೇತನವಿದೆಯೆಂದು ಲ್ಯಾಬ್ ಟೆಕ್ನಿಷಿಯನ್ ಕೆಲಸಕ್ಕೆ ಏಜೆಂಟ್ ಒಬ್ಬರ ಮೂಲಕ ಒಮಾನ್‌ನ ಸೋಹಾರ್ ಎಂಬಲ್ಲಿಗೆ ತೆರಳಿದ್ದರು. ಏಜೆಂಟ್‌ನ ಮೋಸ ಅರಿ ಯದೇ ಹೌಸ್ ಮೇಡ್ ಆಗಿ ದುಡಿಯಬೇಕಾಯಿತು. ತಮಗಾದ ಖರ್ಚನ್ನು ಪಾವತಿಸದೇ ಮನೆ ಮಾಲಕರು ಅವಳನ್ನು ಬಿಡಲು ಹಿಂದೇಟು ಹಾಕಿದರು. ಸೋಶಿಯಲ್ ಫೋರಮ್ ಮನೆ ಮಾಲಕರಿಗೆ ಖರ್ಚಾದ ಎಲ್ಲ ಹಣ ಭರಿಸಿ ಆಮೀನಾಳನ್ನು ಮಸ್ಕತ್‌ಗೆ ಕರೆಸಿ ಪ್ರತ್ಯೇಕ ರೂಮ್ ಕೊಡಿಸಿ ಆಶ್ರಯ ನೀಡಿತು.

ಜೂನ್ ತಿಂಗಳ ಅದೇ ಸಂದರ್ಭದಲ್ಲಿ ಕೋವಿಡ್ ಲಾಕ್‌ಡೌನ್ ಹೇರಿಕೆಯಾಯಿತು. ಆಕೆ ಲಾಕ್ ಡೌನ್ ಮುಗಿಯುವವರೆಗೂ ಸೋಶಿಯಲ್ ಫೋರಮ್‌ನ ಆಶ್ರದಲ್ಲೇ ಉಳಿಯಬೇಕಾಗುತ್ತದೆ. ಡಿಸೆಂಬರ್‌ನಲ್ಲಿ ವಿಮಾನಯಾನ ಪುನರಾರಂಭಗೊಂಡಾಗ ಟಿಕೆಟ್ ಮಾಡಿಸಿ 6 ತಿಂಗಳ ದೀರ್ಘಕಾಲದ ಆಶ್ರಯದ ನಂತರ ಊರಿಗೆ ಕಳುಹಿಸಿ ಕೊಡಲಾಯಿತು ಎಂದು ಸೋಶಿಯಲ್ ಫೋರಮ್-ಒಮಾನ್ ಸದಸ್ಯರ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X