ಒಂದೇ ಮನೆಯ ನಾಲ್ವರಲ್ಲಿಯೂ ವಿಚಿತ್ರ ವ್ಯಾದಿ: ಹಾಸಿಗೆಯಲ್ಲಿಯೇ ದಿನ ಕಳೆಯುತ್ತಿರುವ ತಾಯಿ ಮಕ್ಕಳು

ಕಾರ್ಕಳ, ಜ.13: ಕಾರ್ಕಳದ ಅತ್ತೂರು ಗ್ರಾಮದ ಒಂದೇ ಮನೆಯಲ್ಲಿರುವ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು ವರ್ಷಗಳಿಂದ ಹಾಸಿಗೆಯಲ್ಲಿ ದಿನಗಳ ಕಳೆಯುತ್ತಿದ್ದಾರೆ.
ಪದ್ಮಶಾಲಿ ಸಮಾಜದ ಪದವು ತೋಟದಮನೆಯ ನಿವಾಸಿಗಳಾಗಿರುವ ಗುಲಾಬಿ ಶೆಟ್ಟಿಗಾರ್ತಿ(73), ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್(37), ಬಾಲಕೃಷ್ಣ ಶೆಟ್ಟಿಗಾರ್(39), ಗೀತಾ ಶೆಟ್ಟಿಗಾರ್(32) ವಿಚಿತ್ರ ಕಾಯಿಲೆ ಯಿಂದ ಬಳಲುತ್ತಿದ್ದವರು.
ನಾಲ್ವರೂ ಸೊಂಟ, ಕಾಲಿನ ಸ್ವಾದಿನ ಇಲ್ಲದೆ ನಡೆಯಲಾಗದ ಚಿಂತಾಜನಕ ಪರಿಸ್ಥಿತಿಯಲ್ಲಿ ದಿನಗಳ ಕಳೆಯತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದರೆಂದು ತಿಳಿದುಬಂದಿದೆ. ಹಲವು ಆಸ್ಪತ್ರೆಗಳಲ್ಲಿ ಅಲೆದಾಡಿದರೂ ಇವರಿಗೆ ಬಾಧಿಸಿರುವ ವ್ಯಾಧಿಯು ಗುಣಕಾಣದೆ ಕಂಗ ಲಾಗಿದ್ದಾರೆ.
ಸರಕಾರದಿಂದ ಬರುವ ಪಿಂಚಣಿ 1500ರೂ., ಅನ್ನಭಾಗ್ಯದ ಪಡಿತರ ಹಾಗೂ ಊರ ಜನರ ನೆರವಿನಿಂದ ಇವರು ದಿನಕಳೆಯುತ್ತಿ ದ್ದಾರೆ. ದುಡಿಯು ವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ ಔಷೋಧೋಪಚಾರ ನಡೆಸಲು ಇವರಲ್ಲಿ ಅಸಾಧ್ಯವಾಗಿದೆ. ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿರುವು ದೆಂದು ವ್ಯೆದ್ಯರಿಂದ ತಿಳಿಸಿದ್ದಾರೆ.
ವಿಷಯ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್ ರೋಗಿಗಳ ಮನೆಗೆ ಭೇಟಿ ನೀಡಿದ್ದಾರೆ. ಈ ನಾಲ್ವರ ಚಿಕಿತ್ಸೆಗೆ ದೊಡ್ಡ ಮಟ್ಟದ ಆರ್ಥಿಕ ನೆರವಿನ ಅಗತ್ಯ ವಿದೆ. ಸಹೃದಯಿ ದಾನಿಗಳು, ಸಮಾಜದ ಸಂಘ ಸಂಸ್ಥೆಗಳು ಬಡಕುಟುಂಬದ ನೆರವಿಗೆ ಬರಬೇಕೆಂದು ಕಾರ್ಯಕರ್ತರು ವಿನಂತಿಸಿಕೊಂಡಿದ್ದಾರೆ.
ನೆರವು ನೀಡಲು ಇಚ್ಛಿಸುವವರು ಬಾಲಕೃಷ್ಣ ಶೆಟ್ಟಿಗಾರ್ ಅವರ ಯೂನಿ ಯನ್ ಬ್ಯಾಂಕ್ ದೂಪದಕಟ್ಟೆ ಶಾಖೆಯ ಖಾತೆ ಸಂಖ್ಯೆ 52019103 2164420, ಐಎಫ್‌ಎಸ್‌ಸಿ ಕೋ - ಯುಬಿಐಎನ್0902454ಗೆ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9611495379 ಸಂಪರ್ಕಿಸುವಂತೆ ಕೋರಲಾಗಿದೆ.







