Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮಲಬದ್ಧತೆ ಮತ್ತು ಬೇಧಿ ಒಟ್ಟಿಗೇ...

ಮಲಬದ್ಧತೆ ಮತ್ತು ಬೇಧಿ ಒಟ್ಟಿಗೇ ಉಂಟಾಗಬಹುದು!

ಈ ಅಚ್ಚರಿಯ ವಿಷಯ ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ13 Jan 2021 9:14 PM IST
share
ಮಲಬದ್ಧತೆ ಮತ್ತು ಬೇಧಿ ಒಟ್ಟಿಗೇ ಉಂಟಾಗಬಹುದು!

ಬೇಧಿ ಮತ್ತು ಮಲಬದ್ಧತೆ ಇವೆರಡೂ ಹೊಟ್ಟೆಯ ವಿಭಿನ್ನ ಸಮಸ್ಯೆಗಳಾಗಿವೆ. ಸಾಮಾನ್ಯವಾಗಿ ಇವೆರಡೂ ಸಮಸ್ಯೆಗಳು ಪ್ರತ್ಯೇಕವಾಗಿ ಉಂಟಾಗುತ್ತವೆ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗಿ ಬೇರೂರಿದೆ. ಆದರೆ ಬೇಧಿ ಮತ್ತು ಮಲಬದ್ಧತೆ ಇವೆರಡೂ ಏಕಕಾಲದಲ್ಲಿ ಉಂಟಾಗುವ ಅಪಾಯವಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು,ಇವೆರಡೂ ಸಮಸ್ಯೆಗಳು ಏಕಕಾಲದಲ್ಲಿ ಉದ್ಭವಿಸಲು ಸಾಧ್ಯವಿದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಪ್ಯಾರಾಡಾಕ್ಸಿಕಲ್ ಡಯರಿಯಾ (ಪಿಡಿ) ’ಎಂದು ಕರೆಯಲಾಗುತ್ತದೆ. ಇವೆರಡೂ ಸಮಸ್ಯೆಗಳು ಪರಸ್ಪರ ವಿರುದ್ಧವಾಗಿರುವುದರಿಂದ ನಾವಿದನ್ನು ‘ವಿರೋಧಾಭಾಸದ ಬೇಧಿ ’ಎಂದು ಕನ್ನಡೀಕರಿಸಬಹುದು.

ಪಿಡಿ ಅಪರೂಪವಾಗಿ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಯಾಗಿದ್ದು,ಕೆಲವೇ ಜನರು ಇದನ್ನು ಅನುಭವಿಸುತ್ತಾರೆ. ಆದರೆ ಇದು ನೀಡುವ ತೀವ್ರ ನೋವು ಮತ್ತು ತೊಂದರೆ ಅನುಭವಿಸಿದವರಿಗೇ ಗೊತ್ತು.

ಹೆಚ್ಚಿನ ಜನರು ಮಲಬದ್ಧತೆ ಮತ್ತು ಬೇಧಿಯ ಬಗ್ಗೆ ಗೊಂದಲವನ್ನುಂಟು ಮಾಡಿಕೊಳ್ಳುತ್ತಾರೆ. ಹೀಗಾಗಿ ಇವೆರಡರ ನಡುವಿನ ಸಾಮಾನ್ಯ ವ್ಯತ್ಯಾಸಗಳು ಗೊತ್ತಿರುವುದು ಒಳ್ಳೆಯದು.

ಬೇಧಿ: ಇದು ಜೀರ್ಣಾಂಗಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು, ನೀರಿನಂತಹ ಮಲವನ್ನು ಉಂಟು ಮಾಡುತ್ತದೆ ಮತ್ತು ಎಲ್ಲ ವಯೋಮಾನದ ಜನರಲ್ಲಿ ಸಾಮಾನ್ಯವಾಗಿದೆ. ಕೆಲವೊಮ್ಮೆ ಒಂದೇ ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಬಹುದು ಮತ್ತು ಕೆಲವೊಮ್ಮೆ ಚೇತರಿಸಿಕೊಳ್ಳಲು ಕೆಲವು ದಿನಗಳೇ ಬೇಕಾಗಬಹುದು. ಮೂರು ದಿನಗಳಿಗಿಂತ ಹೆಚ್ಚಿನ ಸಮಯದಿಂದ ನೀರಿನಂತಹ ಮಲವು ಹೋಗುತ್ತಿದ್ದರೆ ಅಂತಹ ವ್ಯಕ್ತಿಯು ಬೇಧಿಯಿಂದ ನರಳುತ್ತಿದ್ದಾನೆ ಎಂದು ಹೇಳಬಹುದು.

ಹೆಚ್ಚಿನ ಪ್ರಕರಣಗಳಲ್ಲಿ ಬ್ಯಾಕ್ಟೀರಿಯಾ,ವೈರಸ್ ಅಥವಾ ಪರಾವಲಂಬಿ ಜೀವಿಗಳ ಸೋಂಕು ಬೇಧಿಗೆ ಕಾರಣವಾಗುತ್ತದೆ. ಕರುಳಿನ ಉರಿಯೂತದ ಕಾಯಿಲೆ (ಐಬಿಡಿ), ಕೆರಳಿಸುವ ಕರುಳಿನ ಸಹಲಕ್ಷಣಗಳು (ಐಬಿಎಸ್),ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಡೇರಿ ಉತ್ಪನ್ನಗಳಿಗೆ ಅಲರ್ಜಿ,ಉದರದ ಕಾಯಿಲೆ ಇತ್ಯಾದಿಗಳೂ ಬೇಧಿಯನ್ನುಂಟು ಮಾಡುವ ಕಾರಣಗಳಲ್ಲಿ ಸೇರಿದ್ದು,ಇಂತಹ ಪ್ರಕರಣಗಳಲ್ಲಿ ಸಮಸ್ಯೆ ಒಂದು ವಾರದವರೆಗೂ ಮುಂದುವರಿಯಬ ಹುದು. ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳು ಅಥವಾ ಆ್ಯಂಟಿಬಯಾಟಿಕ್‌ಗಳ ಸೇವನೆಯೂ ಬೇಧಿಗೆ ಕಾರಣವಾಗಬ ಹುದು.

ಮಲಬದ್ಧತೆ: ಬೇಧಿಗೆ ವಿರುದ್ಧವಾಗಿ ಮಲಬದ್ಧತೆಯು ಮಲವನ್ನು ಗಟ್ಟಿಯಾಗಿಸುವ ಸ್ಥಿತಿಯಾಗಿದೆ. ವ್ಯಕ್ತಿಗೆ ಸುಗಮವಾಗಿ ಮಲ ವಿಸರ್ಜನೆ ಸಾಧ್ಯವಾಗದಿದ್ದಾಗ ಇಂತಹ ಸ್ಥಿತಿ ಉಂಟಾಗುತ್ತದೆ. ಮಲಬದ್ಧತೆಯೂ ಎಲ್ಲ ವಯೋಮಾನದವರನ್ನು ಕಾಡುತ್ತದೆ. ಸಾಮಾನ್ಯವಾಗಿ ಮಲಬದ್ಧತೆ ಒಂದೆರಡು ದಿನಗಳ ಕಾಲ ಇರುತ್ತದೆ. ದೀರ್ಘಕಾಲಿಕ ಮಲಬದ್ಧತೆಯಾಗಿದ್ದರೆ ಹಲವಾರು ದಿನಗಳ ಕಾಲ ಕಾಡಬಹುದು. ಹಲವರಿಗೆ ಇದು ಜೀವಿತಾವಧಿಯ ಸಮಸ್ಯೆಯಾ ಗಿದ್ದು ಹಲವಾರು ದಿನಗಳ ಕಾಲ ಮಲವಿಸರ್ಜನೆಯಾಗುವುದಿಲ್ಲ ಅಥವಾ ವಾರಕ್ಕೆ 2-3 ಸಲ ಮಾತ್ರ ಮಲವಿಸರ್ಜನೆಯಾಗುತ್ತದೆ. ಮಲವು ಗಟ್ಟಿಯಾಗಿದ್ದು ಅದನ್ನು ವಿಸರ್ಜಿಸುವುದು ಕಷ್ಟವಾಗುತ್ತದೆ ಮತ್ತು ನೋವನ್ನೂ ಉಂಟು ಮಾಡುತ್ತದೆ. ಮಲಬದ್ಧತೆಯಿಂದ ನರಳುತ್ತಿರುವವರು ಮಲವಿಸರ್ಜನೆಗೆ ಹೆಚ್ಚಿನ ಒತ್ತಡವನ್ನು ಹಾಕಬೇಕಾಗುತ್ತದೆ.

 ಆಹಾರದಲ್ಲಿ ಸಾಕಷ್ಟು ನಾರನ್ನು ಸೇವಿಸದಿರುವುದು,ನೀರು ಕುಡಿಯಲು ಜಿಪುಣತನ ಮಾಡುವುದು,ದೈಹಿಕ ಚಟುವಟಿಕೆಗಳ ಕೊರತೆ,ಒತ್ತಡ ಅಥವಾ ಪ್ರವಾಸದಲ್ಲಿದ್ದಾಗ ರೂಢಿಗತ ಅಭ್ಯಾಸಗಳು ತಪ್ಪುವುದು,ಆ್ಯಂಟಾಸಿಡ್ ಮತ್ತು ಆ್ಯಂಟಿಹಿಸ್ಟಮೈನ್ ಸೇರಿದಂತೆ ಕೆಲವು ಔಷಧಿಗಳು,ಐಬಿಎಸ್,ಥೈರಾಯ್ಡುಮಲ್ಟಿಪಲ್ ಸ್ಲೆರೊಸಿಸ್, ಪಾರ್ಕಿನ್ಸ್‌ನ್ಸ್ ಕಾಯಿಲೆಯಂತಹ ಆರೋಗ್ಯ ಸಮಸ್ಯೆ ಇತ್ಯಾದಿಗಳು ಮಲಬದ್ಧತೆಯನ್ನುಂಟು ಮಾಡುವ ಪ್ರಮುಖ ಕಾರಣಗಳಾಗಿವೆ.

ಪ್ಯಾರಾಡಾಕ್ಸಿಕಲ್ ಡಯರಿಯಾ ಸ್ಥಿತಿ ಮತ್ತು ಕಾರಣಗಳು

ಬೇಧಿಯುಂಟಾದಾಗ ಆಹಾರದಲ್ಲಿ ಏನೋ ವ್ಯತ್ಯಾಸವಾಗಿರಬ ಹುದು ಅಥವಾ ಬ್ಯಾಕ್ಟೀರಿಯಾ,ವೈರಸ್‌ಗಳಂತಹ ರೋಗಕಾರಕಗಳು ಕಾರಣವಾಗಿರಬಹುದು ಎಂದು ಹೆಚ್ಚುಕಡಿಮೆ ಪ್ರತಿಯೊಬ್ಬರೂ ಭಾವಿಸುತ್ತಾರೆ. ಸರಿ ತಾನೇ? ಆದರೆ ಮಲಬದ್ಧತೆಯು ಬೇಧಿಗೆ ಕಾರಣವಾಗಿರಬಹುದು ಎಂದು ಯಾರೂ ಊಹಿಸುವುದಿಲ್ಲ. ಮಲಬದ್ಧತೆಯು ಬೇಧಿಯನ್ನು ಉಂಟು ಮಾಡುವುದು ಅಪರೂಪದ ಪ್ರಕರಣವಾಗಿರುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಮಲಬದ್ಧತೆಯು ಅಸ್ಥಿರ ಸ್ಥಿತಿಯಾಗಿದ್ದು,ಒಂದೆರಡು ದಿನಗಳಲ್ಲಿ ರೋಗಿಯು ಚೇತರಿಸಿಕೊಳ್ಳುತ್ತಾನೆ. ಹೆಚ್ಚು ದಿನಗಳ ಕಾಲ ಕಾಡಿಸುವ ಮಲಬದ್ಧತೆಯಲ್ಲಿ ಮಲದ ಸಂಗ್ರಹಣೆ ಉಂಟಾಗುತ್ತದೆ. ಎಷ್ಟೋ ಜನರು ಕಾರಣಾಂತರಗಳಿಂದ ಮಲವಿಸರ್ಜನೆಯನ್ನು ಸರಿಯಾದ ಸಮಯಕ್ಕೆ ಮಾಡದೆ ತಡೆದುಕೊಳ್ಳುತ್ತಾರೆ ಮತ್ತು ಇದರಿಂದಾಗಿ ಜೀರ್ಣಾಂಗದಲ್ಲಿ ಮಲವು ಸಂಗ್ರಹಗೊಳ್ಳತೊಡಗುತ್ತದೆ. ಗಟ್ಟಿಯಾದ ಮಲವು ಕರುಳಿನಲ್ಲಿ ಸಂಗ್ರಹಗೊಂಡಾಗ ಅಂತಹ ಸ್ಥಿತಿಯನ್ನು ‘ಫೀಕಲ್ ಇಂಪ್ಯಾಕ್ಟನ್’ ಎಂದು ಕರೆಯಲಾಗುತ್ತದೆ. ಮಲವು ಎಷ್ಟೊಂದು ಗಟ್ಟಿಯಾಗಿರುತ್ತದೆ ಎಂದರೆ ಅದು ವಿಸರ್ಜನೆಗೊ ಳ್ಳುವುದಿಲ್ಲ ಮತ್ತು ಅಲ್ಲಿಂದ ಕದಲುವುದೂ ಇಲ್ಲ. ಇಂತಹ ಸ್ಥಿತಿಯಲ್ಲಿ ನೀರಿನಂತಹ ಮಲವು ಹೋಗುತ್ತದೆ,ಆದರೆ ಜೀರ್ಣಾಂಗದಲ್ಲಿ ಏನೋ ಸಿಕ್ಕಿಕೊಂಡಿದೆ ಎನ್ನುವುದು ವ್ಯಕ್ತಿಗೆ ಅನುಭವವಾಗುತ್ತದೆ. ಅವರು ಮಲವನ್ನು ವಿಸರ್ಜಿಸದಿರಬಹುದು,ಆದರೆ ಪದೇ ಪದೇ ಟಾಯ್ಲೆಟ್‌ಗೆ ಹೋಗುವಂತಾಗಿರುತ್ತದೆ. ಕರುಳಿನಲ್ಲಿಯ ಗಟ್ಟಿಯಾದ ಸಂಗ್ರಹದ ಹಿಂದಿರುವ ನೀರಿನಂತಹ ಮಲ ಸೋರಿಕೆಯಾಗುತ್ತಿರು ವುದು ಇದಕ್ಕೆ ಕಾರಣ. ಜನರು ಇದನ್ನು ಬೇಧಿ ಎಂದು ಭಾವಿಸುತ್ತಾರೆ,ಆದರೆ ಅದು ವಾಸ್ತವದಲ್ಲಿ ಮಲಬದ್ಧತೆಯಿಂದ ಸಿಕ್ಕಿಕೊಂಡಿದ್ದ ಮಲವೇ ಆಗಿರುತ್ತದೆ.

ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಗುದನಾಳದಲ್ಲಿ ಸಂಗ್ರಹವಾಗುವ ಮಲವನ್ನು ಹಿಡಿದುಕೊಳ್ಳಲು ಅದು ದೊಡ್ಡದಾಗುತ್ತದೆ ಮತ್ತು ಗುದದ್ವಾರವು ತೆರೆದುಕೊಂಡು ತೆಳ್ಳಗಿನ ಮಲವು ಸೋರಿಕೆಯಾಗಲು ಅವಕಾಶ ಕಲ್ಪಿಸುತ್ತದೆ. ಕರುಳು ಹೆಚ್ಚು ದ್ರವವನ್ನು ಉತ್ಪಾದಿಸುತ್ತದೆ ಮತ್ತು ಇದು ನೀರಿನಂತಹ ಮಲವು ಇನ್ನಷ್ಟು ವಿಸರ್ಜನೆಗೊಳ್ಳುವಂತೆ ಮಾಡುತ್ತದೆ.

ಮಲವಿಸರ್ಜನೆ ಸುಗಮವಾಗಿ ಆಗುವಂತೆ ವಿರೇಚಕಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುವವರು ಏಕಾಏಕಿ ಅದನ್ನು ನಿಲ್ಲಿಸಿದರೆ,ಪದೇ ಪದೇ ನೋವು ನಿವಾರಕಗಳನ್ನು ಸೇವಿಸುತ್ತಿದ್ದರೆ ಇತ್ಯಾದಿ ಕಾರಣಗಳು ಫೀಕಲ್ ಇಂಪ್ಯಾಕ್ಷನ್ ಅನ್ನು ಉಂಟು ಮಾಡುತ್ತವೆ.

ಪ್ಯಾರಾಡಾಕ್ಸಿಕಲ್ ಡಯರಿಯಾ ಉಂಟಾದಾಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತವಾಗುತ್ತದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X