Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಗೌಟ್‌ಗೆ ನೈಸರ್ಗಿಕ ಚಿಕಿತ್ಸೆ ಇಲ್ಲಿದೆ

ಗೌಟ್‌ಗೆ ನೈಸರ್ಗಿಕ ಚಿಕಿತ್ಸೆ ಇಲ್ಲಿದೆ

ವಾರ್ತಾಭಾರತಿವಾರ್ತಾಭಾರತಿ13 Jan 2021 10:46 PM IST
share
ಗೌಟ್‌ಗೆ ನೈಸರ್ಗಿಕ ಚಿಕಿತ್ಸೆ ಇಲ್ಲಿದೆ

ಗೌಟ್ ಒಂದು ವಿಧವಾದ ಸಂಧಿವಾತ ರೋಗವಾಗಿದ್ದು, ಮುಖ್ಯವಾಗಿ ಕಿವಿಗಳು, ಮಣಿಗಂಟುಗಳು, ಮಂಡಿಗಳು, ಕಣಕಾಲುಗಳು ಮತ್ತು ಕೈಗಳು ಸೇರಿದಂತೆ ಶರೀರದ ವಿವಿಧ ಭಾಗಗಳ ಕೀಲುಗಳಲ್ಲಿ ನೋವು ಮತ್ತು ಊತವನ್ನುಂಟು ಮಾಡುತ್ತದೆ. ನೋವು ಮತ್ತು ಉರಿಯೂತ ಹೆಚ್ಚು ಸಾಮಾನ್ಯವಾಗಿ ಕಣಕಾಲುಗಳಲ್ಲಿ ಕಂಡು ಬರುತ್ತದೆ. ಶರೀರದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುವುದು ಗೌಟ್‌ಗೆ ಪ್ರಮುಖ ಕಾರಣವಾಗಿದೆ.

 ಗೌಟ್ ಅನ್ನು ಕಡೆಗಣಿಸಬಾರದು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಗೌಟ್ ಹೆಚ್ಚಾಗಿ ಪುರುಷರಲ್ಲಿ ಕಂಡು ಬರುತ್ತದೆ,ಆದರೆ ಋತುಬಂಧದ ನಂತರ ಹಲವಾರು ಮಹಿಳೆಯರೂ ಗೌಟ್‌ನಿಂದ ಪೀಡಿತರಾಗುತ್ತಾರೆ. ಗೌಟ್‌ನಿಂದ ನರಳುತ್ತಿರುವವರು ಬೇಳೆಕಾಳುಗಳು,ಅಧಿಕ ಪ್ರೋಟಿನ್ ಒಳಗೊಂಡಿರುವ ಆಹಾರಗಳು ಮತ್ತು ಮೊಸರನ್ನು ಸೇವಿಸಬಾರದು. ಗೌಟ್ ಒಂದು ಸಲಕ್ಕೆ ಒಂದು ಕೀಲನ್ನು ಮಾತ್ರ ಬಾಧಿಸುತ್ತದೆ ಮತ್ತು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕ್ರಮೇಣ ಇತರ ಕೀಲುಗಳಲ್ಲಿಯೂ ನೋವು ಆರಂಭವಾಗುತ್ತದೆ. ಗೌಟ್ ನೋವನ್ನು ನೈಸರ್ಗಿಕವಾಗಿ ಶಮನಿಸಲು ಕೆಲವು ಮನೆಮದ್ದುಗಳು ನೆರವಾಗುತ್ತವೆ. ಅಂತಹ ಕೆಲವು ಮನೆಮದ್ದುಗಳ ಕುರಿತು ಮಾಹಿತಿಗಳಿಲ್ಲಿವೆ.

* ಸಾಕಷ್ಟು ನೀರಿನ ಸೇವನೆ

ಶರೀರದ ನಿರ್ಜಲೀಕರಣಕ್ಕೆ ಅವಕಾಶ ನೀಡದಿರುವುದು ಹೆಚ್ಚುಕಡಿಮೆ ಎಲ್ಲ ರೋಗಗಳಿಗೂ ನೈಸರ್ಗಿಕ ಚಿಕಿತ್ಸೆಯಾಗಿದೆ. ದಿನದಲ್ಲಿ ಸಾಕಷ್ಟು ನೀರು ಸೇವಿಸುವುದರಿಂದ ಯಾವುದೇ ಕೆಡುಕು ಉಂಟಾಗುವುದಿಲ್ಲ. ಗೌಟ್ ಇದ್ದಾಗ ಅತಿಯಾದ ಊತ ಮತ್ತು ನೋವು ಕಾಣಿಸಿಕೊಳ್ಳುತ್ತವೆ. ಯಥೇಚ್ಛ ನೀರಿನ ಸೇವನೆ ಈ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ. ನೀರು,ಮೂಲಿಕೆಗಳ ಕಷಾಯ ಅಥವಾ ಹಣ್ಣಿನ ರಸಗಳು,ಹೀಗೆ ಯಾವುದೇ ದ್ರವದ ಸೇವನೆಯನ್ನು ಪ್ರತಿದಿನ ಹೆಚ್ಚಿಸುತ್ತಿದ್ದರೆ ಮೂತ್ರಪಿಂಡಗಳು ಹೆಚ್ಚುವರಿ ದ್ರವವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತವೆ ಮತ್ತು ಇದು ಗೌಟ್‌ನ ಊತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಆದರೆ ದ್ರವದ ಹೆಸರಿನಲ್ಲಿ ಸೋಡಾ, ಮೃದುಪಾನೀಯಗಳು ಮತ್ತು ಮದ್ಯವನ್ನು ಸೇವಿಸಕೂಡದು. ಹೃದಯ ಮತ್ತು ಮೂತ್ರಪಿಂಡ ಸಮಸ್ಯೆಗಳನ್ನು ಹೊಂದಿರುವವರು ದ್ರವಗಳ ಸೇವನೆಯನ್ನು ಹೆಚ್ಚಿಸುವ ಮುನ್ನ ತಮ್ಮ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು.

* ಕಾಫಿ

 ಗೌಟ್ ತೀವ್ರತೆಯನ್ನು ಶಮನಿಸಲು ಕಾಫಿ ಸೇವನೆಯು ಸುಲಭದ ಮನೆಮದ್ದಾಗಿದೆ. ಕಾಫಿಯನ್ನು ಸೇವಿಸುವವರು ಗೌಟ್‌ಗೆ ತುತ್ತಾಗುವ ಅಪಾಯ ಕಡಿಮೆ ಎಂದು ಅಧ್ಯಯನಗಳೂ ತೋರಿಸಿವೆ. ಕಾಫಿಯಲ್ಲಿ ಯೂರಿಕ್ ಆಮ್ಲ ಕಡಿಮೆ ಪ್ರಮಾಣ ದಲ್ಲಿರುವುದು ಇದಕ್ಕೆ ಕಾರಣವಾಗಿರಬಹುದು. ಮೂತ್ರ ವಿಸರ್ಜನೆಯ ಮೂಲಕ ಶರೀರದಲ್ಲಿಯ ಹೆಚ್ಚಿನ ಯೂರಿಕ್ ಆಮ್ಲವನ್ನು ಹೊರಹಾಕಲೂ ಕಾಫಿಯು ನೆರವಾಗಬಹುದು.

* ಮೆಂತ್ಯ ಬೀಜಗಳು

 ಮೆಂತ್ಯ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದನ್ನು ನೀವು ಕೇಳಿರಬಹುದು. ಅದು ಗೌಟ್‌ಗೆ ಚಿಕಿತ್ಸೆ ನೀಡಲೂ ನೆರವಾಗುತ್ತದೆ. ಒಂದು ಚಮಚ ಮೆಂತ್ಯ ಬೀಜಗಳನ್ನು ಅರ್ಧ ಕಪ್ ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸಿ ಬೀಜಗಳನ್ನು ಅಗಿದು ತಿನ್ನುವುದರ ಮೂಲಕ ಗೌಟ್‌ನ ನೋವು ಮತ್ತು ಊತವನ್ನು ಶಮನಿಸಬಹುದು.

* ಕ್ಯಾಸ್ಟರ್ ಆಯಿಲ್

ಯಾವುದೇ ಕೀಲು ನೋವು ಮತ್ತು ಊತವನ್ನು ಶಮನಿಸಲು ವೈದ್ಯರು ಮಸಾಜ್ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಗೌಟ್‌ಗೆ ಕ್ಯಾಸ್ಟರ್ ಆಯಿಲ್‌ನಿಂದ ಮಸಾಜ್ ಮಾಡುವುದು ನೋವು ಮತ್ತು ಊತಗಳ ತೀವ್ರತೆಯನ್ನು ತಗ್ಗಿಸುತ್ತದೆ. ಮಸಾಜ್‌ಗೆ ಲಿಂಬೆಹುಲ್ಲಿನ ತೈಲದಂತಹ ಇತರ ಸಾರಭೂತ ತೈಲಗಳನ್ನೂ ಬಳಸಬಹುದು.

* ಚೆರ್ರಿ ಹಣ್ಣುಗಳು

ಚೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಗೌಟ್‌ಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತವೆ. ಗೌಟನ್ ಉರಿಯೂತವನ್ನು ಈ ಹಣ್ಣುಗಳು ಕಡಿಮೆ ಮಾಡುತ್ತವೆ.

* ಅರಿಷಿಣ

ಅರಿಷಿಣದಲ್ಲಿರುವ ಕರ್ಕುಮಿನ್ ಎಂಬ ಸಂಯುಕ್ತವು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಉರಿಯೂತ ಮತ್ತು ನೋವಿನಂತಹ ಗೌಟ್ ಲಕ್ಷಣಗಳನ್ನು ಶಮನಿಸಲು ನೆರವಾಗುತ್ತವೆ. ಪೀಡಿತ ಭಾಗದಲ್ಲಿ ಅರಿಷಿಣದ ಹುಡಿಯನ್ನು ಲೇಪಿಸಿಕೊಳ್ಳಬಹುದು,ಆಹಾರದ ಮೂಲಕ ಅರಿಷಿಣ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ಅರಿಷಿಣ ಮಿಶ್ರಿತ ಹಾಲನ್ನೂ ಸೇವಿಸಬಹುದು.

* ಐಸ್ ಪ್ಯಾಕ್

ಬಟ್ಟೆಯಲ್ಲಿ ಮಂಜುಗಡ್ಡೆಯನ್ನು ಕಟ್ಟಿ ಪೀಡಿತ ಭಾಗದಲ್ಲಿ 15-20 ನಿಮಿಷಗಳ ಕಾಲ ಮೃದುವಾಗಿ ಒತ್ತಡವನ್ನು ಹಾಕುವುದರಿಂದ ಗೌಟ್ ನೋವು ಮತ್ತು ಊತ ಕಡಿಮೆಯಾಗುತ್ತವೆ.

* ಲಿಂಬೆರಸ

ಲಿಂಬೆ ಹಣ್ಣು ಶರೀರದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ತಗ್ಗಿಸುವ ಶಕ್ತಿಯನ್ನು ಹೊಂದಿದೆ. ಒಂದು ಗ್ಲಾಸ್ ನೀರಿನಲ್ಲಿ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ ಅದಕ್ಕೆ ಅರ್ಧ ಚಮಚ ಅಡಿಗೆ ಸೋಡಾ ಬೆರೆಸಿಕೊಂಡು ಸೇವಿಸುವ ಮೂಲಕ ನಿರೀಕ್ಷಿತ ಪರಿಣಾಮವನ್ನು ಪಡೆಯಬಹುದು. ಇದರ ಜೊತೆಗೆ ದಿನಕ್ಕೆ ಮೂರು ಬಾರಿ ಒಂದು ಗ್ಲಾಸ್‌ಗೆ ಲಿಂಬೆರಸ ಸೇರಿಸಿಕೊಂಡು ಕುಡಿಯಬಹುದು. ಇದರಿಂದ ರಕ್ತದಲ್ಲಿಯ ಯೂರಿಕ್ ಆಮ್ಲದ ಮಟ್ಟವು ಖಂಡಿತ ಕಡಿಮೆಯಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X