ಚರ್ಮದ ಆರೈಕೆಗೆ ಆಯುರ್ವೇದದ ಪಾತ್ರ ಕುರಿತು ವೆಬಿನಾರ್
ಮಂಗಳೂರು, ಜ.14: ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಕಾಯಚಿಕಿತ್ಸಾ ಸ್ನಾತಕೊತ್ತರ ವಿಭಾಗದ ವತಿಯಿಂದ ಏರ್ಪಡಿಸಲಾದ ಚರ್ಮದ ಆರೈಕೆಯಲ್ಲಿ ಆಯುರ್ವೇದದ ಪಾತ್ರದ ಕುರಿತಾದ ‘ಸ್ಪರ್ಶ-2021 ವೆಬಿನಾರ್ ಸರಣಿಯು ಇತ್ತೀಚೆಗೆ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ.ಖಾಲಿದ್ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಜ್ಞಾನಾರ್ಜನೆಯ ಅಗತ್ಯವಿದೆ. ಪರಂಪರಾಗತ ಚಿಕಿತ್ಸಾ ಪದ್ಧತಿಗಳ ಬಗ್ಗೆ ಸಂಶೋಧನೆ ನಡೆದು ಆ ಜ್ಞಾನವನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸಬೇಕು. ಜ್ಞಾನ ನಿಂತ ನೀರಾಗಬಾರದು. ಹೊಸ ಹೊಸ ವಿಷಯಗಳ ಜ್ಞಾನಾರ್ಜನೆಗೆ ಇಂತಹ ವೆಬಿನಾರ್‌ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಉದಯ ಡಿ.ಕೆ. ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಕುಮಾರ್ ಜೆ. ಸ್ವಾಗತಿಸಿದರು. ಕಾಯಚಿಕಿತ್ಸಾ ಸ್ನಾತಕೊತ್ತರ ವಿಭಾಗದ ಮುಖ್ಯಸ್ಥ ಡಾ. ವಹೀದಾ ಬಾನು ಕಾರ್ಯಕ್ರಮ ನಿರೂಪಿಸಿದರು. ಕಾಯಚಿಕಿತ್ಸಾ ವಿಭಾಗದ ಪ್ರಾಚಾಯ ಡಾ. ಕೆ. ರವೀಂದ್ರ ಭಟ್ ವಂದಿಸಿದರು.