ಜ.18ರಿಂದ ಮೂಡುಬಿದಿರೆಯಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್
![ಜ.18ರಿಂದ ಮೂಡುಬಿದಿರೆಯಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಜ.18ರಿಂದ ಮೂಡುಬಿದಿರೆಯಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್](https://www.varthabharati.in/sites/default/files/images/articles/2021/01/15/275140-1610692421.jpg)
ಮೂಡುಬಿದಿರೆ : ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಸಂಯುಕ್ತ ಆಶ್ರಯದಲ್ಲಿ ಜ.18 ರಿಂದ 20ರವರೆಗೆ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.
ಬಾಲಕ ಹಾಗೂ ಬಾಲಕಿಯರ 14, 16, 18 ಹಾಗೂ 20 ವರ್ಷ ವಯೋಮಿತಿಯ ಅಥ್ಲೆಟಿಕ್ಸ್ ಸ್ವರ್ಧೆಗಳು ಈ ಸಂದರ್ಭ ನಡೆಯಲ್ಲಿವೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಸುಮಾರು 28 ಜಿಲ್ಲೆಗಳಿಂದ ಕ್ಲಬ್ ಹಾಗೂ ಕ್ರೀಡಾ ಹಾಸ್ಟೆಲ್ಗಳ ಮೂಲಕ ಸುಮಾರು 1500 ಮಂದಿ ಕ್ರೀಡಾಪಟುಗಳ ಭಾಗವಹಿಸುವ ನಿರೀಕ್ಷೆ ಇದೆ.
ಸ್ವರ್ಧೆಗಳು ಜ.18ರಂದು ಮುಂಜಾನೆ 7 ಗಂಟೆಗೆ ಆರಂಭವಾಗಲಿದ್ದು 20ರಂದು ಮಧ್ಯಾಹ್ನ 12ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ಚಾಂಪಿಯನ್ಶಿಪ್ನ ನಿರ್ವಹಣೆಯ ಆಧಾರದ ಮೇಲೆ ಭೋಪಾಲ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಫೆಡರೇಷನ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಕರ್ನಾಟಕ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.