ಚೀನಾ, ಇರಾನ್, ಕ್ಯೂಬಾ ವಿರುದ್ಧ ಹೊಸ ಆರ್ಥಿಕ ದಿಗ್ಬಂಧನ ವಿಧಿಸಿದ ಅಮೆರಿಕ

ವಾಶಿಂಗ್ಟನ್, ಜ. 16: ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಚೀನಾ, ಇರಾನ್ ಮತ್ತು ಕ್ಯೂಬಾ ದೇಶಗಳ ಮೇಲೆ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ್ದಾರೆ.
ಹಾಂಕಾಂಗ್‌ನಲ್ಲಿ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಸಂಬಂಧಿಸಿ ಚೀನಾವನ್ನು ಶಿಕ್ಷಿಸುವುದಾಗಿ ಅಧಿಕಾರ ತೊರೆಯುವ ಐದು ದಿನಗಳ ಮೊದಲು ಪಾಂಪಿಯೊ ಪಣತೊಟ್ಟಿದ್ದಾರೆ.
ಹಾಂಕಾಂಗ್ ವಿಷಯದಲ್ಲಿ ಚೀನಾವನ್ನು ತರಾಟೆಗೆ ತೆಗೆದುಕೊಳ್ಳುವ ಅಮೆರಿಕದ ನಿಲುವಿಗೆ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಸಹಮತವಿದೆ. ಆದರೆ, ಇರಾನ್ ಮತ್ತು ಕ್ಯೂಬಾಗಳೊಂದಿಗಿನ ಸಂಬಂಧವನ್ನು ಉತ್ತಮಪಡಿಸಲು ಬೈಡನ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಹೊಸ ದಿಗ್ಬಂಧನಗಳು ಅವರಿಗೆ ಹಿನ್ನಡೆಯಾಗಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ.
Next Story