ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಜ.16: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನು ಗಾರರೊಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಸುಧಾಕರ ವೆಂಕಣ್ಣ ಹೊಸಕಟ್ಟಿ(39) ಎಂದು ಗುರುತಿಸಲಾಗಿದೆ. ಮಲ್ಪೆಯ ಸೋಮಶೇಖರ ಬಂಗೇರ ಎಂಬವರ ಶ್ರೀತ್ರಿಜಲ್ 370 ಬೋಟಿ ನಲ್ಲಿ ಮೀನುಗಾರರು ಜ.10ರಂದು ಮಲ್ಪೆಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದು, ಜ.13ರಂದು ಬೆಳಗಿನ ಜಾವ 13 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟಿನೊಳಗೆ ಬಲೆಯನ್ನು ಎಳೆಯುತ್ತಿದ್ದ ಸುಧಾಕರ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದರೆನ್ನಲಾಗಿದೆ.
ನಾಪತ್ತೆಯಾಗಿದ್ದ ಸುಧಾಕರ ಮೃತದೇಹವು ಜ.15ರಂದು ಮಧ್ಯಾಹ್ನ ಮಲ್ಪೆ ಬಂದರಿನ ನೇರ 10 ಮಾರು ಆಳ ಸಮುದ್ರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story