ಮ್ಯೂಸಿಯಂ ಉದ್ಘಾಟನೆಗೆ ಫೆ.6ಕ್ಕೆ ಮಡಿಕೇರಿಗೆ ಆಗಮಿಸಲಿರುವ ರಾಷ್ಟ್ರಪತಿ ಕೋವಿಂದ್
ಬೆಂಗಳೂರು, ಜ. 16: ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನೆಗೆ ಫೆಬ್ರವರಿ 6ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಡಿಕೇರಿಗೆ ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ.
ತಿಮ್ಮಯ್ಯ ಹುಟ್ಟಿದ ಮನೆ ಸನ್ನಿ ಸೈಡ್ನಲ್ಲಿ ಗಮನ ಸೆಳೆಯಲಿದೆ. ಅಪೂರ್ವ ಮ್ಯೂಸಿಯಂ ನಿರ್ಮಿಸಲಾಗುತ್ತಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಮ್ ಅಧ್ಯಕ್ಷ ಕೆ.ಸಿ.ಸುಬ್ಬಯ್ಯ ಆಹ್ವಾನದ ಮೇರೆಗೆ ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ಕೋವಿಂದ್ ಅವರು, ಫೆ.6ರ ಮಧ್ಯಾಹ್ನ 3:15ರಿಂದ ಸಂಜೆ 4ಗಂಟೆ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
Next Story