Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಕೇಂದ್ರದ ವರಿಷ್ಠರ ಸಿಡಿಗಳೇನಾದರೂ ಇದೆಯಾ...

ಕೇಂದ್ರದ ವರಿಷ್ಠರ ಸಿಡಿಗಳೇನಾದರೂ ಇದೆಯಾ ಸಾರ್?

*ಚೇಳಯ್ಯ, chelayya@gmail.com*ಚೇಳಯ್ಯ, chelayya@gmail.com17 Jan 2021 12:10 AM IST
share
ಕೇಂದ್ರದ ವರಿಷ್ಠರ ಸಿಡಿಗಳೇನಾದರೂ ಇದೆಯಾ ಸಾರ್?

ಸಿಡಿಯೂರಪ್ಪನವರು ಸಿಡಿಮಿಡಿಗೊಳ್ಳುತ್ತಾ ಕುಳಿತಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು. ‘‘ಸಾರ್...ಸಿಡಿ...’’ ಎಂದದ್ದೇ ತಡ ಸಿಡಿಯೂರಪ್ಪನವರು ಸಿಡಿದರು ‘‘ನೋಡ್ರೀ...ಸಿಡಿ ಆಚರಣೆ ವೌಢ್ಯ ವಿರೋಧಿ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ...ಸಿಡಿ ಆಚರಿಸಿದವರನ್ನು ಜೈಲಿಗೆ ತಳ್ಳಲಾಗುತ್ತದೆ....’’
‘‘ಆ ಸಿಡಿ ಅಲ್ಲ ಸಾರ್...ಇದು ಯತ್ನಾಳ್ ಅವರ ಸಿಡಿ....’’ ಕಾಸಿ ತಿದ್ದುವುದಕ್ಕೆ ಪ್ರಯತ್ನಿಸಿದ.

‘‘ನೋಡಿ ಕಾಸಿಯವರೇ......ಇನ್ನೊಮ್ಮೆ ಆ ಯತ್ನಾಳ್ ಹೆಸರು ಹೇಳಿದರೆ ನಿಮ್ಮನ್ನು ಸಿಡಿ ಕಂಬಕ್ಕೆ ಏರಿಸಿ ನಾನು ಇನ್ನೊಮ್ಮೆ ಜೈಲಿಗೆ ಹೋಗುತ್ತೇನೆ...’’ ಸಿಡಿಯೂರಪ್ಪ ಎಚ್ಚರಿಸಿದರು. ‘‘ಆದರೂ ನೋಡಲಾಗದ ಸಿಡಿ ಅವರ ಬಳಿ ಇದೆಯಂತೆ....’’ ಕಾಸಿ ರಾಗ ಎಳೆದ.
 ‘‘ನೋಡಲಾಗದ ಸಿಡಿ ಆಗಿದ್ದ ಮೇಲೆ ಅವರು ನೋಡಿದ್ದು ಹೇಗೆ? ಅದರಲ್ಲೇ ಗೊತ್ತಾಗುತ್ತದೆ ಅವರ ಆರೋಪ ಸುಳ್ಳು ಎನ್ನುವುದು....’’ ಸಿಡಿಯೂರಪ್ಪರು ಮೀಸೆ ನೀವಿ ಹೇಳಿದರು.
‘‘ನೋಡಲಾಗದ ದೃಶ್ಯಗಳಿವೆಯಂತೆ....’’ ಕಾಸಿ ಮೆಲ್ಲಗೆ ಹೇಳಿದ.
‘‘ನೋಡಲಾಗದ ದೃಶ್ಯಗಳೆಂದರೆ ಸಚಿವರ ಪ್ರಮಾಣ ವಚನ ಸಿಡಿ ಇರಬೇಕು. ಸಚಿವ ಸ್ಥಾನ ಸಿಗದೇ ಇದ್ದವರಿಗೆ ಉಳಿದವರು ಪ್ರಮಾಣವಚನ ಮಾಡುವುದನ್ನು ನೋಡುವುದು ಕಷ್ಟ...’’
‘‘ಅದಲ್ಲ ಸಾರ್....ದೇವರ ದೃಶ್ಯಗಳು....’’ ಕಾಸಿ ಮತ್ತೆ ವಿವರಿಸಲು ಯತ್ನಿಸಿದ.
‘‘ಯಾರು ಹೇಳಿದರೂ ನಾನು ದೇವಸ್ಥಾನಕ್ಕೆ ಹೋಗಿಯೇ ಹೋಗುತ್ತೇನೆ. ಸಿದ್ದರಾಮಯ್ಯರ ತರ ಮಾಂಸ ತಿಂದುಕೊಂಡು ದೇವರ ಕೋಣೆಗೆ ಹೋಗಿಲ್ಲ....ನನ್ನತ್ರ ಸಿದ್ದರಾಮಯ್ಯ ಗೋಮಾಂಸ ತಿನ್ನುವ ಸಿಡಿಗಳು ಇವೆ....ಅದನ್ನು ಬಿಡುಗಡೆ ಮಾಡುತ್ತೇನೆ....’’
‘‘ಆ ದೇವರ ಚಿತ್ರಗಳಲ್ಲ ಸಾರ್...ಇದು....ಮಕ್ಕಳು ನೋಡಬಾರದ ದೇವರ ಚಿತ್ರಗಳು ಸಾರ್....’’ ಕಾಸಿ ಮತ್ತೆ ವಿವರಿಸಿದ.
‘‘ನನ್ನ ಮಕ್ಕಳು ನೋಡಬಾರದ ಚಿತ್ರಗಳ ಸಿಡಿಗಳೋ? ಗೊತ್ತಾಯಿತು ಬಿಡಿ....ಅವರೇನು ನೋಡಲ್ಲ ಅದನ್ನು....’’ ಸಿಡಿಯೂರಪ್ಪ ಸಮಾಧಾನದಿಂದ ಹೇಳಿದರು.
‘‘ಆದರೆ ನಾಡಿನ ಜನರಿಗೆಲ್ಲ ತೋರಿಸ್ತಾರಂತೆ...’’ ಕಾಸಿ ಆತಂಕದಿಂದ ಹೇಳಿದ.
‘‘ನೋಡ್ರಿ....ಈಗ ಸಿಡಿ ಪ್ಲೇಯರ್‌ಗಳೇ ಇಲ್ಲ. ಮತ್ತೆ ಸಿಡಿಯನ್ನು ಹೇಗೆ ತೋರಿಸ್ತಾರಂತೆ...?’’ ಸಿಡಿಯೂರಪ್ಪ ಸವಾಲು ಹಾಕಿದರು.
‘‘ಪೆನ್‌ಡ್ರೈವ್‌ನಲ್ಲಿ ಹಾಕಿ ತೋರಿಸಬಹುದು ಸಾರ್...’’ ಕಾಸಿ ಅನುಮಾನ ಮುಂದಿಟ್ಟ.
‘‘ನೋಡ್ರೀ...ಅವರು ಹೇಳಿರುವುದು ಸಿಡಿ. ಇದೀಗ ಪೆನ್‌ಡ್ರೈವ್ ಎಂದು ಮಾತು ಬದಲಿಸಿದರೆ ಹೇಗೆ....ಅದೇನೇ ಇರಲಿ, ಅವರು ಸಿಡಿ ತೋರಿಸಿದರೆ ನನ್ನಲ್ಲೂ ನೋಡ ಬಾರದ ಸಿಡಿಗಳಿವೆ....ಎಲ್ಲ ಚಿತ್ರಮಂದಿರಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇನೆ ಅಷ್ಟೇ....ಯಾವುದು ಶತದಿನೋತ್ಸವ ಓಡತ್ತೋ ನೋಡಿಯೇ ಬಿಡೋಣ....’’ ಸಿಡಿಯೂರಪ್ಪ ಸವಾಲು ಹಾಕಿದರು.
‘‘ನಿಮ್ಮ ಕೈಯಲ್ಲಿರುವ ಸಿಡಿಯಲ್ಲಿ ಏನೇನಿದೆ ....’’ ಕಾಸಿ ಕುತೂಹಲದಿಂದ ಕೇಳಿದ.
‘‘ಏನಿರತ್ತೆ? ನೋಡಬಾರದ್ದೇ ಇರತ್ತೆ....’’ ಸಿಡಿಯೂರಪ್ಪ ಸಿಡಿದು ಉತ್ತರಿಸಿದರು.


‘‘ನಿಮ್ಮಲ್ಲಿರುವ ಸಿಡಿಗಳನ್ನು ಪತ್ರಕರ್ತರಿಗಾಗಿ ವಿಶೇಷ ಪ್ರದರ್ಶನ ಇಡಬಹುದಾ?’’ ಕಾಸಿ ಆಸೆಯಿಂದ ಕೇಳಿದ. ‘‘ಅಲ್ರೀ... ಪತ್ರಕರ್ತರೆಲ್ಲ ಬಟ್ಟೆಯಿಲ್ಲದೆ ಬಹಿರಂಗವಾಗಿ ಓಡಾಡ್ತ ಇದ್ದಾರೆ....ಇವರಿಗೆ ರಾಜಕಾರಣಿಗಳ ನೋಡಬಾರದ ಸಿಡಿ ನೋಡುವ ಆಸೆ....ಮೊದಲು ನೀವು ಬಟ್ಟೆ ಹಾಕಿಕೊಂಡು ಓಡಾಡಿ. ಬಳಿಕ ರಾಜಕಾರಣಿಗಳ ಸಿಡಿ ಬಗ್ಗೆ ಮಾತನಾಡಿ’’ ಸಿಡಿಯೂರಪ್ಪ ಕಾಸಿಗೆ ಕುಟುಕಿದರು. ‘‘ಸಾರ್... ಒಂದು ಸಿಡಿ ಕೊಡಿ. ಮನೆಯಲ್ಲಿ ಗುಟ್ಟಾಗಿ ನೋಡಿ ವಾಪಾಸ್ ಕೊಡ್ತೀನಿ....’’ ಕಾಸಿ ಮತ್ತೆ ಜೊಲ್ಲು ಸುರಿಸುತ್ತಾ ಕೇಳಿದ.
‘‘ನೋಡ್ರಿ....ಕುಮಾರಸ್ವಾಮಿಯವರು ನನ್ನ ಜೊತೆಗೆ ಸೇರಿ ಸರಕಾರ ಮಾಡಿರೋದು ಅಶ್ಲೀಲವಲ್ಲವೇನ್ರೀ? ಇದನ್ನೇ ಜನರು ಒಪ್ಪಿಕೊಂಡಿದ್ದಾರೆ. ಇನ್ನು ಬೇರೆ ನೋಡಬಾರದ್ದು ಏನಿರತ್ತೆ ಸಿಡಿಯಲ್ಲಿ?’’ ಸಿಡಿಯೂರಪ್ಪ ನಗುತ್ತಾ ಕೇಳಿದರು.
‘‘ನಿಮ್ಮ ಬಳಿ ಯಾವ್ಯಾವ ಸಿಡಿ ಇದೆ ಸಾರ್?’’ ಕಾಸಿ ಸಿಡಿಯನ್ನು ಬಿಡಲಿಲ್ಲ.
‘‘ನೋಡ್ರಿ....ಮೊನ್ನೆ ಬಂದು ನನ್ನ ಕೈಯಿಂದ ಪತ್ರಕರ್ತರೆಲ್ಲ ಗಿಫ್ಟ್ ತೆಗೊಂಡು ಹೋದ್ರಲ್ಲ...ಅದರ ಸಿಡಿ ಮಾಡಿಟ್ಟಿದ್ದೇನೆ....ನಿಮ್ಮ ಸಂಪಾದಕರಿಗೆ ಕಳುಹಿಸ್ಲಾ?’’ ಸಿಡಿಯೂರಪ್ಪ ಬಾಂಬ್ ಹಾಕಿದರು.
‘‘ಸಾರ್...ಬೇಡ ಸಾರ್ ಕೆಲಸ ಹೋಗತ್ತೆ....’’ ಕಾಸಿ ಅಂಗಲಾಚತೊಡಗಿದ.
‘‘ಹೇ...ಏನು ಹೋಗಲ್ಲರೀ....ನಿಮ್ಮ ಸಂಪಾದಕರ ಸಿಡಿ ನನ್ನ ಬಳಿ ಬೇರೆಯೇ ಇದೆ....’’ ಸಿಡಿಯೂರಪ್ಪರು ಸಮಾಧಾನಿಸಿದರು.
‘‘ಸಾರ್ ಈ ಬಾರಿ ಸಚಿವರ ಆಯ್ಕೆಗೆ ಯಾವ ಮಾನದಂಡ ಅನುಸರಿಸಿದ್ರಿ....’’ ಕಾಸಿ ಪ್ರಶ್ನೆ ಬದಲಾಯಿಸಿದ.
‘‘ಅದೇರಿ....ಎಲ್ಲ ಶಾಸಕರ ಸಾಧನೆಗಳನ್ನು ತರಿಸಿಕೊಂಡೆವು. ತರಿಸಿಕೊಂಡ ಸಿಡಿಯಲ್ಲಿ ಯಾವ ಯಾವ ಸಿಡಿಗಳು ಹೆಚ್ಚು ಹೆಚ್ಚು ನೋಡಬಾರದ್ದೋ ಅದಕ್ಕೆ ತಕ್ಕ ಹಾಗೆ ಸ್ಥಾನಗಳನ್ನು ಹಂಚಿದ್ದೇವೆ....’’ ಯಡಿಯೂರಪ್ಪ ಮುಕ್ತವಾಗಿ ಹಂಚಿಕೊಂಡರು.
‘‘ಅತೃಪ್ತರ ಬಳಿಯೂ ಸಿಡಿಗಳು ಇವೆೆಯಂತಲ್ಲ ಸಾರ್...’’ ಕಾಸಿ ಕೇಳಿದ.
‘‘ಅದೆಲ್ಲ ಎಪ್ಪತ್ತರ ದಶಕದ ಸಿಡಿಗಳು. ಅದಕ್ಕೆಲ್ಲ ನಾವು ಸಚಿವ ಸ್ಥಾನ ಕೊಡಕ್ಕಾಗಲ್ಲ. ಏನಿದ್ದರೂ ನಿಗಮಗಳನ್ನು ಕೊಡಬಹುದು. ಇನ್ನಷ್ಟು ಅನುಭವಗಳನ್ನು ಪಡೆದು ಹೊಸ ಹೊಸ ಸಿಡಿಗಳನ್ನು ಸಂಪಾದಿಸಿಕೊಂಡು ಬರುವುದಕ್ಕೆ ಆದೇಶಿಸಿದ್ದೇವೆ....ಭವಿಷ್ಯದಲ್ಲಿ ಅವರು ತರುವ ಸಿಡಿಗಳನ್ನು ನೋಡಿ ಅದಕ್ಕೆ ತಕ್ಕ ಸ್ಥಾನಮಾನವನ್ನು ನೀಡಲಿದ್ದೇವೆ...’’ ಸಿಡಿಯೂರಪ್ಪರು ವಿವರಿಸಿದರು.
‘‘ಸರ್...ನೀವು ಇನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದೀರಲ್ಲ....ನಿಮ್ಮ ಬಳಿ ಕೇಂದ್ರದ ವರಿಷ್ಠರ ಸಿಡಿಗಳೇನಾದರೂ ಇದೆಯಾ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
ಸಿಡಿಯೂರಪ್ಪ ಮೀಸೆಯ ಮರೆಯಲ್ಲೇ ನಕ್ಕರು.
‘‘ಸರ್ ಎಚ್. ವಿಶ್ವನಾಥ್ ಅವರ ಸಿಡಿಯೇನಾದರೂ ನಿಮ್ಮ ಬಳಿಯಿದೆಯೇ?’’
 ‘‘ಆ ವಯ್ಯ ಎಲ್ಲ ಬಟ್ಟೆ ಕಳಚಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರದು ತೋರಿಸುವುದಕ್ಕೆ ಏನೂ ಬಾಕಿ ಇಲ್ಲ....ಬಿಟ್ಬಿಡಿ ಅವರನ್ನು....ಸುಪ್ರೀಂಕೋರ್ಟ್‌ನಲ್ಲಿ ಅವರ ಸಿಡಿ ಬಹಿರಂಗವಾಗಿ ಪ್ರದರ್ಶನ ಮಾಡಿದ್ದೇವೆ’’ ಸಿಡಿಯೂರಪ್ಪ ಹೇಳಿ ನಕ್ಕರು.
‘‘ಸಾರ್...ಬೊಕ್ಕಸದಲ್ಲಿ ಹಣದ ಕೊರತೆಯಿದೆಯಂತೆ... ಹೇಗೆ ತುಂಬುತ್ತೀರಿ?’’
‘‘ನಮ್ಮಲ್ಲಿರುವ ಎಲ್ಲ ಸಿಡಿಗಳನ್ನು ಯಾವುದಾದರೂ ಪೋರ್ನ್ ಸೈಟ್‌ಗೆ ಮಾರಿ ಬೊಕ್ಕಸ ತುಂಬಬೇಕಾಗುತ್ತದೆ....ಆನ್‌ಲೈನ್‌ನಲ್ಲಿ ಸಿಡಿ ಹರಾಜಿಗಿಟ್ಟಿದ್ದೇವೆ....’’
ಬೊಕ್ಕಸ ಶೀಘ್ರದಲ್ಲೇ ತುಂಬಲಿದೆ ಎನ್ನುವುದು ಕೇಳಿ ಕಾಸಿಗೆ ಸಮಾಧಾನವಾಯಿತು.

share
*ಚೇಳಯ್ಯ, chelayya@gmail.com
*ಚೇಳಯ್ಯ, chelayya@gmail.com
Next Story
X