Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಬ್ಬಲಿಯಾಗುತ್ತಿರುವ ಪ್ರಜಾಪ್ರಭುತ್ವ

ತಬ್ಬಲಿಯಾಗುತ್ತಿರುವ ಪ್ರಜಾಪ್ರಭುತ್ವ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ18 Jan 2021 12:10 AM IST
share
ತಬ್ಬಲಿಯಾಗುತ್ತಿರುವ ಪ್ರಜಾಪ್ರಭುತ್ವ

ಇದು ಜನರೇ ಮಾಡಿಕೊಂಡ ಆಯ್ಕೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ವಯಸ್ಸಿನಲ್ಲಿ ಇಂತಹ ಹೀನಾಯ ಸ್ಥಿತಿಯ ಅವಮಾನ ಅನುಭವಿಸುತ್ತ ಅಧಿಕಾರದಲ್ಲಿರುವುದಕ್ಕಿಂತ ಹೊರಗೆ ಬರುವುದು ಸೂಕ್ತ. ಪ್ರತಿಪಕ್ಷಗಳು ಕೂಡ ಯಡಿಯೂರಪ್ಪನವರನ್ನು ಇಷ್ಟು ತೇಜೋವಧೆ ಮಾಡಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಕಡೆಗಣಿಸಿ ಜಾತಿ, ಕೋಮು ಮತ್ತು ನೋಟು ಚುನಾವಣೆಯ ಗೆಲುವಿನ ನಿರ್ಣಾಯಕ ಅಂಶಗಳಾದಾಗ ಇಂತಹ ಸಿಡಿ ಬ್ಲಾಕ್‌ಮೇಲ್‌ಗಳು ಸಾಮಾನ್ಯ.



ಮಾನವ ಸಮಾಜದ ಚರಿತ್ರೆಯಲ್ಲಿ ಪ್ರಜಾಪ್ರಭುತ್ವ ಎಂಬುದು ಉತ್ತಮ ಆಡಳಿತ ವ್ಯವಸ್ಥೆ ಎಂದು ಹೆಸರಾಗಿದೆ. ಆದರೆ ಯಾವುದೇ ವ್ಯವಸ್ಥೆಯನ್ನು ನಿರ್ವಹಿಸುವವರು ಮನುಷ್ಯರೇ ಆಗಿರುವುದರಿಂದ ಈಗ ಈ ಜನತಂತ್ರ ವ್ಯವಸ್ಥೆಯೂ ಎಲ್ಲೆಡೆ ಬಿಕ್ಕಟ್ಟನ್ನು ಎದುರಿಸುತ್ತಿದೆ.ಮುಖ್ಯವಾಗಿ ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸೂತ್ರಧಾರರು.ಜನ ಪ್ರತಿನಿಧಿಗಳು ಮಾನ ಮರ್ಯಾದೆ ಇಟ್ಟುಕೊಂಡಿದ್ದರೆ ಪ್ರಜಾಪ್ರಭುತ್ವದ ಮಾನ ಮರ್ಯಾದೆಯೂ ಉಳಿಯುತ್ತದೆ. ಇಲ್ಲವಾದರೆ ಅದು ಬೀದಿಯಲ್ಲೇ ಹರಾಜಾಗುತ್ತದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬ್ರಿಟಿಷ್ ಮಾದರಿಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಸ್ವಾತಂತ್ರ್ಯ ಬಂದಾಗ ಡಾ.ಅಂಬೇಡ್ಕರ್, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ವಲ್ಲಭಬಾಯಿ ಪಟೇಲ್, ಅಬುಲ್ ಕಲಾಮ್ ಆಝಾದ್ ಹಾಗೂ ಪ್ರತಿಪಕ್ಷ ನಾಯಕರಾಗಿದ್ದ ರಾಮ ಮನೋಹರ ಲೋಹಿಯಾ, ಎಸ್. ಎ. ಡಾಂಗೆ, ಮಧುಲಿಮಯೆ, ಮೀನೂ ಮಸಾನಿ, ಎ. ಕೆ. ಗೋಪಾಲನ್, ಮುಂತಾದವರು ಆರಂಭದ ದಿನಗಳಲ್ಲಿ ಈ ದೇಶದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿದರು. ಎಪ್ಪತ್ತು ವರ್ಷಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದ ಭಾರತದ ಪ್ರಜಾಪ್ರಭುತ್ವ ಈಗ ಅಳಿವು, ಉಳಿವಿನ ಪ್ರಾಣ ಸಂಕಟವನ್ನು ಅನುಭವಿಸುತ್ತಿದೆ. ಮಹಾತ್ಮಾ ಗಾಂಧೀಜಿ ಕಂಡ ಸುಖಿ ರಾಜ್ಯದ ಕನಸು ನನಸಾಗಲಿಲ್ಲ. ಅಷ್ಟೇ ಅಲ್ಲ ದಿನದಂದ ದಿನಕ್ಕೆ ಪ್ರಜೆಗಳ ಬದುಕು ಚಿಂತಾಜನಕವಾಗುತ್ತಿದೆ.

ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಯಶಸ್ವಿಯಾಗಬೇಕಾದರೆ ಪ್ರಬಲ ಪ್ರತಿಪಕ್ಷವಿರಬೇಕು. ಆಡಳಿತದಲ್ಲಿ ಇರುವ ಪಕ್ಷ ಪ್ರಬಲ ಪ್ರತಿಪಕ್ಷವನ್ನು ಬಯಸಬೇಕು. ಆದರೆ 2014ರ ನಂತರ ಕೇಂದ್ರದ ಅಧಿಕಾರ ಸೂತ್ರ ಹಿಡಿದವರಿಗೆ ಪ್ರಬಲ ಪ್ರತಿಪಕ್ಷ ಮಾತ್ರವಲ್ಲ ಪ್ರತಿಪಕ್ಷವೇ ಇರಬಾರದು ಎಂಬ ಹುಚ್ಚು ತಲೆಗೆ ಹೊಕ್ಕಿದೆ. ಅದರಂತೆ ಪ್ರತಿಪಕ್ಷಗಳು ಕೂಡ ತ್ರಾಣ ಕಳೆದುಕೊಂಡಿವೆ. ಯಾವುದೇ ರಾಜ್ಯದಲ್ಲಿ ಪ್ರತಿಪಕ್ಷಗಳು ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬಂದರೆ ಅದನ್ನೂ ಸಹಿಸದ ದಿಲ್ಲಿಯ ಕೇಂದ್ರ ಸರಕಾರ ಚುನಾಯಿತ ಪ್ರತಿನಿಧಿಗಳನ್ನೇ ಸಾರಾ ಸಗಟಾಗಿ ಖರೀದಿ ಮಾಡಿ ಚುನಾವಣೆಯ ಫಲಿತಾಂಶವನ್ನೇ ಉಲ್ಟಾ ಪಲ್ಟಾ ಮಾಡುತ್ತದೆ. ಇನ್ನು ಸದನದ ಹೊರಗೆ ಹೋರಾಡುವ ಜನಪರ ಹೋರಾಟಗಾರರಂತೂ ಪ್ರಭುತ್ವದ ಪಾಲಿಗೆ ಶತ್ರುಗಳಾಗಿದ್ದಾರೆ. ಅಂತಹ ಅನೇಕ ಹೋರಾಟಗಾರರು ಈಗ ಜೈಲುಪಾಲಾಗಿದ್ದಾರೆ. ಈಗ ದಿಲ್ಲಿಯಲ್ಲಿ ನಡೆದಿರುವ ರೈತ ಹೋರಾಟ ಸರ್ವಾಧಿಕಾರಿ ಪ್ರಭುತ್ವಕ್ಕೆ ಬಿಸಿ ಮುಟ್ಟಿಸಿದ್ದರೂ ಮುಂದೇನು ಆಗುವುದೋ ಗೊತ್ತಿಲ್ಲ.

ಕರ್ನಾಟಕದ ಇಂದಿನ ರಾಜಕೀಯ ಪರಿಸ್ಥಿತಿ ಯನ್ನು ಅವಲೋಕಿಸಿದರೆ ಪ್ರಜಾಪ್ರಭುತ್ವ ತಲುಪಿದ ಅವನತಿಯ ಸ್ಥಿತಿ ಕಂಡು ಆತಂಕವಾಗುತ್ತದೆ. ಕಳೆದ ವಿಧಾನ ಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿತ್ತು. ಕರ್ನಾಟಕಕ್ಕೆ ಐದು ವರ್ಷಗಳ ಕಾಲ ಸ್ಥಿರವಾದ ಸರಕಾರ ನೀಡಿದ ಸಿದ್ದರಾಮಯ್ಯನವರು ಅನ್ನಭಾಗ್ಯದಂತಹ ಜನಪರ ಹಸಿದವರ ಪರ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರು. ಆ ಐದು ವರ್ಷಗಳ ಕಾಲ ರಾಜ್ಯದ ಬಡವರು, ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಉಸಿರಾಡಿದರು. ಸಿದ್ದರಾಮಯ್ಯ ಸರಕಾರದ ಮೇಲೆ ಯಾವುದೇ ಆರೋಪಗಳಿರಲಿಲ್ಲ, ಭಿನ್ನಮತೀಯರ ಕಾಟವಿರಲಿಲ್ಲ. ಸಿಡಿ ಬ್ಲಾಕ್ ಮೇಲ್ ಪ್ರಕರಣಗಳಿರಲಿಲ್ಲ. ಆದರೂ ನಮ್ಮ ಮತದಾರ ಪ್ರಭುಗಳಿಗೆ ಅದು ಇಷ್ಟವಾಗಲಿಲ್ಲ. ಜಾತಿ, ಮತ, ಕೋಮುಗಳ ವ್ಯಾಧಿ ಅಂಟಿಸಿಕೊಂಡಿರುವ ಸಮಾಜದಲ್ಲಿ ಸಿದ್ದರಾಮಯ್ಯನವರಂತಹ ಸಮಾಜವಾದಿ ಅಧಿಕಾರ ಉಳಿಸಿಕೊಂಡು ಮತ್ತೆ ಗೆದ್ದು ಬರುವುದು ಸುಲಭವಲ್ಲ. ಅದೂ ಕಾಂಗ್ರೆಸ್‌ನಂತಹ ಪಕ್ಷದಲ್ಲಿ ಇದ್ದು ಯಶಸ್ವಿಯಾಗುವುದು ಕಷ್ಟ.

ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಗದಾಗ ಏನಾಯಿತು?, ಯಾರ ಬೆಂಬಲದಿಂದ ಯಾರು ಸರಕಾರ ರಚಿಸಿದರು?, ಆಪರೇಷನ್ ಕಮಲ ಹೇಗೆ ನಡೆಯಿತು?, ಹಳ್ಳಿ ಹಕ್ಕಿ ಸೇರಿದಂತೆ ಕೆಲ ಲಪೂಟ ಹಕ್ಕಿಗಳು ಹೇಗೆ ಮುಂಬೈಗೆ ಹಾರಿದವು?, ಮತ್ತೆ ವಾಪಸು ಬಂದು ಹೇಗೆ ಮಂತ್ರಿಗಳಾದರು? ಇದೆಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಮತ್ತೆ ಅದರ ಚರ್ವಿತ ಚರ್ವಣದ ಅಗತ್ಯವಿಲ್ಲ.

ಕರ್ನಾಟಕದ ರಾಜಕೀಯ ಈಗಿನಷ್ಟು ಕೀಳು ಮಟ್ಟಕ್ಕೆ ಎಂದೂ ಹೋಗಿರಲಿಲ್ಲ. ಸಚಿವ ಸಂಪುಟ ವಿಸ್ತರಣೆ ನಂತರ ಎಲ್ಲ ಸರಿ ಹೋಗಬಹುದೆಂಬ ಲೆಕ್ಕಾಚಾರ ತಲೆ ಕೆಳಗಾಗಿದೆ. ಶಿಸ್ತಿನ ಪಕ್ಷವೆಂದುಕೊಳ್ಳುತ್ತಿದ್ದ ಬಿಜೆಪಿ ನಾಯಕರಿಂದಲೇ ಬರುತ್ತಿರುವ ಸಿಡಿ ಬ್ಲಾಕ್‌ಮೇಲ್ ಬಹಿರಂಗ ಆರೋಪಗಳು, ಬಿಜೆಪಿ ಹೈಕಮಾಂಡ್ ಅದರಲ್ಲೂ ಪ್ರಧಾನಿ ಮೋದಿ, ಅಮಿತ್‌ಶಾರ ಮೌನ, ಈ ವಯಸ್ಸಿನಲ್ಲಿ ಬೀದಿಯಲ್ಲಿ ಹರಾಜಾಗುತ್ತಿರುವ ಯಡಿಯೂರಪ್ಪನವರ ಮಾನ, ಮರ್ಯಾದೆ, ಒಡೆದು ಎರಡಾದ ಪಂಚಮಸಾಲಿ ಮಠ, ಹರಿಹರ ಮಠ ನಿರಾಣಿ ಪರ, ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿ ಯತ್ನಾಳ ಗೌಡರ ಪರ, ಎಲ್ಲವನ್ನೂ ಜಾಣ ಮೌನದಿಂದ ವೀಕ್ಷಿಸುತ್ತಿರುವ ಆರೆಸ್ಸೆಸ್ ಗುರುಗಳು, ಮಂತ್ರಿಯೊಬ್ಬನ ಸಿಡಿ ಹಿಡಿದುಕೊಂಡು ದಿಲ್ಲಿಗೆ ಹೋದ ರೇಣುಕಾಚಾರ್ಯ, ಇವೆಲ್ಲದರ ನಡುವೆ ಅನಾಥವಾದ ಆಡಳಿತ, ನಿಷ್ಕ್ರಿಯ ಸರಕಾರ. ಇದು ಜನರೇ ಮಾಡಿಕೊಂಡ ಆಯ್ಕೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ವಯಸ್ಸಿನಲ್ಲಿ ಇಂತಹ ಹೀನಾಯ ಸ್ಥಿತಿಯ ಅವಮಾನ ಅನುಭವಿಸುತ್ತ ಅಧಿಕಾರದಲ್ಲಿರುವುದಕ್ಕಿಂತ ಹೊರಗೆ ಬರುವುದು ಸೂಕ್ತ. ಪ್ರತಿಪಕ್ಷಗಳು ಕೂಡ ಯಡಿಯೂರಪ್ಪನವರನ್ನು ಇಷ್ಟು ತೇಜೋವಧೆ ಮಾಡಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಕಡೆಗಣಿಸಿ ಜಾತಿ, ಕೋಮು ಮತ್ತು ನೋಟು ಚುನಾವಣೆಯ ಗೆಲುವಿನ ನಿರ್ಣಾಯಕ ಅಂಶಗಳಾದಾಗ ಇಂತಹ ಸಿಡಿ ಬ್ಲಾಕ್‌ಮೇಲ್‌ಗಳು ಸಾಮಾನ್ಯ.

ಕಳೆದ ವಿಧಾನಸಭಾ ಚುನಾವಣೆ ನಡೆದು ಎರಡು ವರ್ಷಗಳು ದಾಟಿದವು. ಈ ಎರಡು ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥೆಯ ಗೊಂದಲದ ಗೂಡಾಗಿದೆ. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾದ ನಂತರ ನೆರೆ ಹಾವಳಿ, ಅದಾದ ತಕ್ಷಣ ಕೊರೋನ ಇವೆಲ್ಲ ಬಂದವು. ಇವುಗಳನ್ನು ನಿಭಾಯಿಸಬಹುದು. ಆದರೆ ಮಂತ್ರಿ ಮಂಡಲ ವಿಸ್ತರಣೆ, ಪುನಾರಚನೆ, ಅತೃಪ್ತ ಆತ್ಮಗಳ ಅಲೆದಾಟ, ಹಳ್ಳಿ ಹಕ್ಕಿಯ ಆರ್ತನಾದ ಇವೆಲ್ಲವುಗಳಿಂದ ಆಡಳಿತಕ್ಕೆ ಲಕ್ವ ಹೊಡೆದಂತಾಗಿದೆ. ಯಡಿಯೂರಪ್ಪನವರಿಗೆ ಪ್ರತಿ ಪಕ್ಷಗಳಿಂದ ಯಾವ ತೊಂದರೆಯಿಲ್ಲ. ಆದರೆ ಅವರದೇ ಪಕ್ಷದ ಶಾಸಕರ ಸಿಡಿ ಬ್ಲಾಕ್‌ಮೇಲ್ ಕತೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಮಂತ್ರಿ ಮಂಡಲ ವಿಸ್ತರಣೆಯಾದಾಗ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಬಿಜಾಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲರು (ಯತ್ನಾಳ) ‘‘ಸಿಡಿ ಬಯಲು ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ಕೆಲವರು ಮಂತ್ರಿಗಳಾದರು’’ ಎಂದು ನೇರವಾಗಿ ದಾಳಿ ಮಾಡಿದರು. ಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದ ವಿಶ್ವನಾಥ್, ತಿಪ್ಪಾರೆಡ್ಡಿ, ಸತೀಶ್ ರೆಡ್ಡಿ, ರೇಣುಕಾಚಾರ್ಯ, ಮಹೇಶ್ ಕುಮಟಳ್ಳಿ ಹೀಗೆ ಬಿಜೆಪಿ ಶಾಸಕರು ಯಡಿಯೂರಪ್ಪನವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕೊರೋನ ಕಾರಣದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿವೆ. ಕೊರೋನ ಇಳಿಮುಖವಾಗುತ್ತಿದ್ದರೂ ಅಪಾಯವಿನ್ನೂ ತಪ್ಪಿಲ್ಲ. ಲಸಿಕೆ ಬಂದಿರುವುದರಿಂದ ಅದರ ಅಪಾಯ ಕಡಿಮೆಯಾಗಬಹುದು. ಆದರೆ ಕೊರೋನ ನೆಪ ಮಾಡಿಕೊಂಡು ಹಾಸಿಗೆ ಹಾಕಿಕೊಂಡು ಮಲಗಿದಂತಿದ್ದ ಸರಕಾರಿ ಕಚೇರಿಗಳು ಇನ್ನೂ ನಿದ್ರೆಯ ಮಂಪರಿನಿಂದ ಹೊರಗೆ ಬಂದಿಲ್ಲ. ಕೊರೋನ ಕಾರಣದಿಂದ ಜನರ ಬಳಿ ಬರಲು ನಿರಾಕರಿಸುತ್ತಿದ್ದ ಜನ ಪ್ರತಿನಿಧಿಗಳು ಮಂತ್ರಿಗಳಾಗಲು ಏನೇನು ಆಟ ಆಡಿದರು ಎಲ್ಲರಿಗೂ ಗೊತ್ತಿದೆ.

ಕರ್ನಾಟಕದ ಮುಖ್ಯಮಂತ್ರಿ ತನ್ನದೇ ಪಕ್ಷದ ಶಾಸಕರಿಂದ ಬ್ಲಾಕ್‌ಮೇಲ್‌ಗೊಳಗಾಗುತ್ತಿರುವುದು ಇದೇ ಮೊದಲೆಂದು ಅನಿಸುತ್ತಿದೆ. ಇದು ಅವರೇ ಮಾಡಿದ ಪಾಪ. ಆಪರೇಷನ್ ಕಮಲ ಮಾಡಿ ಮುಖ್ಯ ಮಂತ್ರಿಯಾಗಲು ಮಾಡಿದ ಅವಸರ, ನಂತರ ಮಠ, ಪೀಠಗಳಿಗೆ ನೀಡುತ್ತಿರುವ ಕೋಟಿ, ಕೋಟಿ ರೂ. ಅನುದಾನ, ಇದರಿಂದ ಇತರ ಮಠಗಳೂ ಡಿಮಾಂಡ್ ಮಾಡುತ್ತಿರುವುದು... ಇವೆಲ್ಲ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಸಂಗತಿಗಳಲ್ಲ.

ನಮ್ಮ ಪ್ರಜಾಪ್ರಭುತ್ವದ ಈ ದುರಂತಕ್ಕೆ ಮತದಾರರೂ ಕಾರಣವೆಂದರೆ ತಪ್ಪಲ್ಲ. ಮಂತ್ರಿಯಾಗಲು ಲಕ್ಷಾಂತರ ಪಡೆದು ಪಕ್ಷಾಂತರ ಮಾಡಿದ ಶಾಸಕರನ್ನು ಉಪಚುನಾವಣೆಯಲ್ಲಿ ಜನತೆ ತಿರಸ್ಕರಿಸಬೇಕಾಗಿತ್ತು.

ಈ ಮಧ್ಯೆ ದಕ್ಷಿಣ ಭಾರತವನ್ನು ಸ್ವಾಧೀನ ಪಡಿಸಿಕೊಳ್ಳುವ ಸಂಘ ಪರಿವಾರದ ಷಡ್ಯಂತ್ರ ವ್ಯಾಪಕವಾಗಿದೆ. ತಮಿಳುನಾಡಿನ ಚುನಾವಣೆಯಲ್ಲಿ ಅದು ಅಣ್ಣಾ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸೂಚನೆಗಳಿವೆ. ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳಿಗೆ ದೊಡ್ಡ ಸವಾಲಾದವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಉಳಿದ ಕಾಂಗ್ರೆಸ್ ನಾಯಕರಿಗಿಂತ ಭಿನ್ನವಾಗಿ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಳ್ಳುವ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಮೂಲೆ ಗುಂಪು ಮಾಡಬೇಕಾಗಿದೆ. ಇದಕ್ಕೆ ಅದು ಬಳಸಿದ ಅಸ್ತ್ರ ಕುರುಬರಿಗೆ ಎಸ್‌ಟಿ ಮೀಸಲಾತಿ ಪಾದಯಾತ್ರೆ. ಸಿದ್ದರಾಮಯ್ಯ ಅವರ ಹಿಂದೆ ಅಚಲವಾಗಿ ನಿಂತಿರುವ ಹಿಂದುಳಿದ ಅದರಲ್ಲೂ ಹಾಲುಮತ ಸಮುದಾಯವನ್ನು ಅವರಿಂದ ಪ್ರತ್ಯೇಕಿಸಿ ಅವರನ್ನು ಕೋಮು ದಂಗೆಯ ಕಾಲಾಳುಗಳಾಗಿ ಬಳಸಿಕೊಳ್ಳಲು ನಾಗಪುರ ನಿರ್ದೇಶಿತ ಯೋಜನೆ ರೂಪುಗೊಂಡಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ್ನು ಇದೇ ಉದ್ದೇಶದಿಂದ ಕಟ್ಟಲಾಗಿತ್ತು.ಇದರಲ್ಲಿ ತಾನು ಕುರುಬ ಅಲ್ಲ ಹಿಂದೂ ಎಂದು ಹೇಳುವ ಸ್ವಯಂ ಸೇವಕ ಸಂಘ ಪ್ರಮುಖ ಪಾತ್ರ ವಹಿಸಿದೆ. ಮಾದಿಗ ಮೀಸಲು ಹೋರಾಟದ ಟಾರ್ಗೆಟ್ ಸಿದ್ದರಾಮಯ್ಯ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಇದಕ್ಕಾಗಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಚಳವಳಿ ಹೂಡುವ ಅಗತ್ಯವಿರಲಿಲ್ಲ. ಕೇಂದ್ರದ ಮೋದಿ ಸರಕಾರ ಒಂದು ಆದೇಶ ಹೊರಡಿಸಿ ಕ್ಷಣಾರ್ಧದಲ್ಲಿ ಮೀಸಲಾತಿ ನೀಡಬಹುದು. ಆದರೆ ಅವರ ಉದ್ದೇಶ ಮೀಸಲಾತಿ ಅಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ನೆಲೆಯನ್ನು ಹೈಜಾಕ್ ಮಾಡುವುದಾಗಿದೆ ಎಂದರೆ ತಪ್ಪಿಲ್ಲ.

ಈ ಎಲ್ಲ ವಿದ್ಯಮಾನಗಳಿಂದಾಗಿ ಭಾರತದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ. ಜನರೇ ಎಚ್ಚೆತ್ತು ತಮ್ಮನ್ನು ಪೊರೆಯುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಈಗ ದಿಲ್ಲಿಯಲ್ಲಿ ನಡೆದಿರುವ ರೈತ ಹೋರಾಟ ಮೇಲ್ನೋಟಕ್ಕೆ ಅವರ ಬೇಡಿಕೆಗಾಗಿ ನಡೆದ ಹೋರಾಟವೆಂದು ಅನಿಸುತ್ತಿದ್ದರೂ ಅದು ಭಾರತದ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಹೋರಾಟವೂ ಆಗಿದೆ ಎಂಬುದು ವಾಸ್ತವ ಸತ್ಯ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X