ಹೊಟೇಲ್‌ಗೆ ನುಗ್ಗಿ ನಗದು ಕಳವು
ಕುಂದಾಪುರ, ಜ.18: ಹಂಗಳೂರು ಗ್ರಾಮದ ನಗು ಪ್ಯಾಲೇಸ್ ಕಟ್ಟಡದ ತಳ ಅಂತಸ್ತಿನಲ್ಲಿರುವ ಹೊಟೇಲಿಗೆ ಜ.17ರಂದು ರಾತ್ರಿ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸ್ವಾದಿಸ್ಟ್ ಹೋಟೇಲಿನ ಶಟ್ಟರಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಡ್ರವರ್ ಒಡೆದು ಅದರಲ್ಲಿಟ್ಟಿದ್ದ 95,000ರೂ. ನಗದು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story