ನಾಟೆಕಲ್ : ಟಿಪ್ಪರ್ ಢಿಕ್ಕಿ; ಕಾರು ಸವಾರರಿಬ್ಬರಿಗೆ ಗಂಭೀರ ಗಾಯ
ಕೊಣಾಜೆ: ನಾಟೆಕಲ್ ಸಮೀಪದ ನಡುಕುಮೇರ್ ಬಳಿ ಮರಳು ತುಂಬಿದ್ದ ಟಿಪ್ಪರ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರು ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಕಾರು ಸವಾರರಾದ ಕೆ.ಸಿ ನಗರದ ಪೂಮಣ್ಣು ನಿವಾಸಿಗಳಾದ ಇಮ್ರಾನ್ (23) ಮತ್ತು ನೂರುದ್ದೀನ್ (22) ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಕೇರಳ ನೋಂದಣಿಯ ಟಿಪ್ಪರ್ ಮರಳನ್ನು ಹೊತ್ತುಕೊಂಡು ದೇರಳಕಟ್ಟೆಯ ಕಡೆಗೆ ಸಾಗುತ್ತಿದ್ದ ವೇಳೆ ನಾಟೆಕಲ್ ನಿಂದ ಕೆ.ಸಿ ರೋಡ್ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Next Story