ಇಂದು ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ

ಮಂಗಳೂರು, ಜ.20: ದ.ಕ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಕಂಕನಾಡಿ ಘಟಕದ ವತಿಯಿಂದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸಿಹಿತಿಂಡಿ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕಂಕನಾಡಿ ಘಟಕದ ಅಧ್ಯಕ್ಷ ಗೊಪಾಲ್ ಕುಲಾಲ್, ಕಾರ್ಯದರ್ಶಿ ಗಜಾನನ, ಮಾಜಿ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಸದಸ್ಯರಾದ ತಾರನಾಥ್, ರಾಘವ್, ಕೃಷ್ಣಪ್ಪ ಪೂಜಾರಿ, ಪ್ರಕಾಶ್, ಅಶ್ರಫ್, ಪ್ರವೀಣ್ ಕುಮಾರ್, ರಾಘು, ಮೋನಪ್ಪ, ಅನಿಲ್, ವಿನ್ಸಿ, ಪ್ರವೀಣ್, ಬೀ ಕಾಂಚಿಜನ್, ರತ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.