Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಟಾಯ್ಲೆಟ್‌ನಲ್ಲಿಯೂ ಫೋನ್ ಬಳಸುವ...

ನಿಮಗೆ ಟಾಯ್ಲೆಟ್‌ನಲ್ಲಿಯೂ ಫೋನ್ ಬಳಸುವ ಅಭ್ಯಾಸವಿದ್ದರೆ ಅದನ್ನು ಈಗಲೇ ನಿಲ್ಲಿಸಿ

ವಾರ್ತಾಭಾರತಿವಾರ್ತಾಭಾರತಿ20 Jan 2021 7:06 PM IST
share
ನಿಮಗೆ ಟಾಯ್ಲೆಟ್‌ನಲ್ಲಿಯೂ ಫೋನ್ ಬಳಸುವ ಅಭ್ಯಾಸವಿದ್ದರೆ ಅದನ್ನು ಈಗಲೇ ನಿಲ್ಲಿಸಿ

ಹಲವರು ಸಮಯವನ್ನು ಕೊಲ್ಲಲು ಟಾಯ್ಲೆಟ್‌ನಲ್ಲಿಯೂ ಫೋನ್‌ಗಳನ್ನು ಬಳಸುತ್ತಾರೆ. ಆದರೆ ಇದು ಸರಿಯೇ? ಸಾಮಾಜಿಕ ಮಾಧ್ಯಮಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಯಲು ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಬಹಳಷ್ಟು ಜನರು ಟಾಯ್ಲೆಟ್‌ಗೆ ಫೋನ್‌ನ್ನೂ ಒಯ್ಯುತ್ತಾರೆ. ಇಂತಹವರಲ್ಲಿ ನೀವೂ ಸೇರಿದ್ದರೆ ಫೋನ್ ಇಲ್ಲದ ಸಂದರ್ಭಕ್ಕೆ ಹೋಲಿಸಿದರೆ ಫೋನ್ ಜೊತೆಯಲ್ಲಿದ್ದಾಗ ನಿಮ್ಮ ದೈನಂದಿನ ಕರ್ಮಗಳನ್ನು ಮುಗಿಸಲು ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ ಎನ್ನುವುದು ಎಂದಾದರೂ ನಿಮ್ಮ ಗಮನಕ್ಕೆ ಬಂದಿದೆಯೇ? ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುವ ಕೆಟ್ಟ ಅಭ್ಯಾಸವಾಗಿದ್ದು,ಇದನ್ನು ನೀವು ತಕ್ಷಣವೇ ನಿಲ್ಲಿಸುವ ಅಗತ್ಯವಿದೆ. ಇದು ನಿಮ್ಮನ್ನು ಆಗಾಗ್ಗೆ ಅನಾರೋಗ್ಯಕ್ಕೆ ಗುರಿ ಮಾಡುವ,ನೀವು ಗಮನಿಸಿಯೇ ಇಲ್ಲದ ಆರೋಗ್ಯಕ್ಕೆ ಸಂಬಂಧಿಸಿದ ತಪ್ಪು ಎನ್ನುವುದರಲ್ಲಿ ಯಾವುದೇ ಶಂಕೆ ಬೇಡ. ಟಾಯ್ಲೆಟ್ ಸೀಟ್‌ನಲ್ಲಿ ಕುಳಿತುಕೊಂಡು ಮೊಬೈಲ್ ಬಳಸುವುದರ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯಿಲ್ಲಿದೆ.......

►ಸೂಕ್ಷ್ಮಾಣುಜೀವಿಗಳ ವಾಹಕ

ನಿಮ್ಮ ಟಾಯ್ಲೆಟ್‌ನಲ್ಲಿ ಅಸಂಖ್ಯಾತ ರೋಗಕಾರಕ ಸೂಕ್ಷ್ಮಾಣುಜೀವಿಗಳಿರುತ್ತವೆ ಮತ್ತು ಅಲ್ಲಿ ಫೋನ್ ಬಳಸುವುದರಿಂದ ಅದು ಈ ರೋಗಕಾರಕಗಳ ವಾಹಕವಾಗುತ್ತದೆ ಎಂದು ನೀವೆಂದಾದರೂ ಆಲೋಚಿಸಿದ್ದೀರಾ? ನಂತರ ನೀವು ಫೋನ್‌ನ್ನು ಎಲ್ಲೆಲ್ಲಿ ಒಯ್ಯುತ್ತೀರೋ ಅಲ್ಲಿಗೆಲ್ಲ ಈ ರೋಗಕಾರಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಾಣುಜೀವಿಗಳೂ ನಿಮ್ಮಾಂದಿಗೇ ಸಾಗುತ್ತವೆ ಹಾಗೂ ನಿಮ್ಮೊಂದಿಗೆ ನೇರ ಸಂಪರ್ಕಕ್ಕೆ ಬರುವ ವಸ್ತುಗಳು ಮತ್ತು ಜನರಿಗೆ ರವಾನೆಯಾಗುತ್ತವೆ.

► ಮಲಬದ್ಧತೆ ಮತ್ತು ಮಲವಿಸರ್ಜನೆಯ ಕಷ್ಟ

ಮೊಬೈಲ್ ಬಳಕೆಯೊಂದಿಗೆ ಟಾಯ್ಲೆಟ್ ಸೀಟ್‌ನಲ್ಲಿ ತುಂಬ ಸಮಯ ಕಳೆಯುವುದನ್ನು ನಿಮ್ಮ ಶರೀರವು ರೂಢಿಸಿಕೊಳ್ಳುವುದರಿಂದ ಅದು ಮಲಬದ್ಧತೆಗೆ ಕಾರಣವಾಗಬಲ್ಲದು. ಇದರಿಂದಾಗಿ ಕಡಿಮೆ ಸಮಯದಲ್ಲಿ ಮಲವಿಸರ್ಜನೆಯ ಕಾರ್ಯವನ್ನು ಪೂರೈಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಇದು ನಿಮ್ಮ ಜೀರ್ಣಾಂಗವನ್ನು ವ್ಯತ್ಯಯಗೊಳಿಸುತ್ತದೆ. ಅಲ್ಲದೆ ನೀವು ಮಲವಿಸರ್ಜನೆಗಿಂತ ಮೊಬೈಲ್ ವೀಕ್ಷಣೆಗೇ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದು ಹೆಚ್ಚು ಕಳವಳಕಾರಿಯಾಗುತ್ತದೆ. ಈ ಅಭ್ಯಾಸವು ಮಲವಿಸರ್ಜನೆಯ ನೈಸರ್ಗಿಕ ವಿದ್ಯಮಾನಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಮಲವು ಗಟ್ಟಿಯಾಗಿ ಕರುಳಿನಲ್ಲಿ ಸಿಕ್ಕಿಕೊಂಡು ‘ಫೀಕಲ್ ಇಂಪ್ಯಾಕ್ಷನ್ ’ನಿಂದ ನೀವು ನರಳುವುದಕ್ಕೆ ಕಾರಣವಾಗುತ್ತದೆ. ಅಂದ ಹಾಗೆ ಈ ಕೊರೋನ ವೈರಸ್ ಯುಗದಲ್ಲಿ ಟಾಯ್ಲೆಟ್‌ನ್ನು ಫ್ಲಷ್ ಮಾಡುವ ಮುನ್ನ ಮುಚ್ಚಳವನ್ನು ಹಾಕಲು ಮರೆಯಬೇಡಿ.

►ಬೇಧಿ ಮತ್ತು ಮೂತ್ರನಾಳ ಸೋಂಕು

 ಹೌದು,ಈ ಕೆಟ್ಟ ಅಭ್ಯಾಸ ನಿಮ್ಮನ್ನು ಮೂತ್ರನಾಳ ಸೋಂಕುಗಳಿಗೂ ಗುರಿಯಾಗಿಸಬಲ್ಲದು. ಟಾಯ್ಲೆಟ್ ಸೀಟ್,ಟಾಯ್ಲೆಟ್ ಪೇಪರ್ ಇತ್ಯಾದಿಗಳನ್ನು ಸ್ಪರ್ಶಿಸುವ ಮೂಲಕ ಸೂಕ್ಷ್ಮಾಣುಜೀವಿಗಳನ್ನು ಹೊತ್ತಿರುವ ಅದೇ ಕೈಗಳಿಂದ ನೀವು ಪೋನ್‌ನ್ನು ಬಳಸುತ್ತೀರಿ ಮತ್ತು ಈ ರೋಗಕಾರಕಗಳು ನಿಮ್ಮ ಫೋನ್‌ಗೆ ವರ್ಗಾವಣೆಗೊಳ್ಳುತ್ತವೆ. ಫೋನ್‌ನ್ನು ಸ್ಪರ್ಶಿಸಿದ ಬಳಿಕ ನೀವು ಏನನ್ನಾದರೂ ತಿಂದಾಗ ಈ ರೋಗಕಾರಕಗಳು ನಿಮ್ಮ ಶರೀರವನ್ನು ಪ್ರವೇಶಿಸುತ್ತವೆ ಮತ್ತು ಬೇಧಿ,ಜೀರ್ಣ ಸಮಸ್ಯೆ,ಕರುಳಿನ ರೋಗ ಹಾಗೂ ಮೂತ್ರನಾಳ ಸೋಂಕುಗಳನ್ನುಂಟು ಮಾಡುತ್ತವೆ. ಸ್ವಲ್ಪ ಈ ಬಗ್ಗೆ ಯೋಚಿಸಿ.

►ಮೂಲವ್ಯಾಧಿಗೆ ಆಹ್ವಾನ

ಮೂಲವ್ಯಾಧಿ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಟಾಯ್ಲೆಟ್‌ನಲ್ಲಿ ಫೋನ್ ಬಳಕೆ ನಿಮ್ಮನ್ನು ಮೂಲವ್ಯಾಧಿಗೆ ಗುರಿ ಮಾಡುತ್ತದೆ ಎನ್ನುವ ಕಟುಸತ್ಯ ನಿಮಗೆ ಆಘಾತವನ್ನುಂಟು ಮಾಡಬಹುದು. ಮಲವಿಸರ್ಜನೆಗೆ ಸುದೀರ್ಘ ಸಮಯ ನಿಮ್ಮ ಶರೀರಕ್ಕೆ ಅಭ್ಯಾಸವಾಗಿರುತ್ತದೆ ಮತ್ತು ಇದು ಗುದದ್ವಾರದ ಅಭಿಧಮನಿಗಳ ಮತ್ತು ಗುದನಾಳದ ಸುತ್ತ ಉರಿಯೂತಕ್ಕೆ ಕಾರಣವಾಗುತ್ತದೆ. ಮೂಲವ್ಯಾಧಿಯು ಗುದನಾಳ ರಕ್ತಸ್ರಾವಕ್ಕೂ ಕಾರಣವಾಗುತ್ತದೆ.

►ಮಿದುಳಿಗೆ ಒತ್ತಡ

ಟಾಯ್ಲೆಟ್ ಸಮಯವನ್ನು ‘ನಿಮ್ಮದೇ ’ ಸಮಯವನ್ನಾಗಿ ಬಳಸಿಕೊಳ್ಳಿ. ಅದು ವಿಶ್ರಾಂತಿಯ ಅವಧಿ ಎಂದು ಪರಿಗಣಿಸಿ ಮತ್ತು ನಿಮ್ಮ ಮಿದುಳಿಗೆ ವಿರಾಮವನ್ನು ನೀಡಿ. ನೀವು ಟಾಯ್ಲೆಟ್‌ಗೆ ಫೋನ್ ಒಯ್ದಾಗ ನಿಮ್ಮ ಮಿದುಳು ಕೂಡ ಕೆಲಸ ಮಾಡುತ್ತಿರುತ್ತದೆ ಮತ್ತು ಇದು ಆರೋಗ್ಯಕರ ಲಕ್ಷಣವಲ್ಲ. ಇದು ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ ಮತ್ತು ನಿಮ್ಮ ಗಮನ ಹಾಗೂ ಏಕಾಗ್ರತೆಗೆ ವ್ಯತ್ಯಯವನ್ನುಂಟು ಮಾಡಬಹುದು.

ಟಾಯ್ಲೆಟ್‌ನಲ್ಲಿ ಫೋನ್ ಬಳಕೆಯಿಂದ ಈ ಆರೋಗ್ಯಾಪಾಯಗಳಲ್ಲದೆ ಇತರ ಹಲವಾರು ಅನಾನುಕೂಲಗಳೂ ಇವೆ. ಅದು ನೀವು ಟಾಯ್ಲೆಟ್‌ನಲ್ಲಿ ಅನಗತ್ಯವಾಗಿ ಸಮಯವನ್ನು ಕಳೆಯುವಂತೆ ಮಾಡುತ್ತದೆ. ಅದು ನಿಮ್ಮ ಮಿದುಳನ್ನು ಆವರಿಸಿಕೊಳ್ಳುತ್ತದೆ ಮತ್ತು ಮಾಹಿತಿಗಳ ಸಂಸ್ಕರಣೆಗೆ ವ್ಯತ್ಯಯಗಳನ್ನುಂಟು ಮಾಡುತ್ತದೆ. ಕೊನೆಯದಾಗಿ ನೀವು ಫೋನ್‌ನ್ನು ಕಮೋಡ್‌ನಲ್ಲಿ ಅಥವಾ ನೀರು ತುಂಬಿದ ಬಕೆಟ್‌ನಲ್ಲಿ ಬೀಳಿಸುವಂತೆ ಮಾಡಬಹುದು. ಹಲವಾರು ಜನರಿಗೆ ಇದರ ಅನುಭವವಾಗಿದೆ. ಹೀಗಾಗಿ ನಿಮ್ಮ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟಾಯ್ಲೆಟ್‌ನಲ್ಲಿ ಪೋನ್ ಬಳಕೆಯನ್ನು ನಿವಾರಿಸುವುದು ಬುದ್ಧಿವಂತಿಕೆಯಾಗುತ್ತದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X