‘ಶಬ್ಧ ಸಂವೇದನೆಯ ತಾಂತ್ರಿಕ ಆಯಾಮಗಳು’ ಕುರಿತು ಕಾರ್ಯಾಗಾರ

ಮಂಗಳೂರು, ಜ.23: ಮಂಗಳೂರು ವಿವಿಯ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗದ ಕಮ್ಯೂನಿಕೇಶನ್ ಕ್ಲಬ್ ವತಿಯಿಂದ ದೃಕ್-ಶ್ರವ್ಯ ಮಾಧ್ಯಮದಲ್ಲಿ ಧ್ವನಿ ಗ್ರಹಣ ತಾಂತ್ರಿಕತೆಗಳ ಬಗ್ಗೆ ಕಾರ್ಯಗಾರವು ಇತ್ತೀಚೆಗೆ ನಡೆಯಿತು.
ಕನ್ನಡ ಚಿತ್ರರಂಗದ ಧ್ವನಿ ಗ್ರಹಣ ತಜ್ಞ ಪಳನಿ ಡಿ. ಸೇನಾಪತಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಗಾರದಲ್ಲಿ ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಉಮೇಶ್ ಚಂದ್ರ, ಉಪನ್ಯಾಸಕರಾದ ಶಶಿಧರ್, ನಿತಿಶ್ ಪಿ., ಅನುಷಾ ಎನ್. ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಂಜಿತ್ ಸ್ವಾಗತಿಸಿದರು. ಕುಮಾರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
Next Story