Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ25 Jan 2021 12:10 AM IST
share
ಓ ಮೆಣಸೇ...

ಭಾರತದ ಕೊರೋನ ಲಸಿಕೆಯ ಬಗ್ಗೆ ಜಗತ್ತಿನಾದ್ಯಂತ ಭಾರೀ ವಿಶ್ವಾಸ ವ್ಯಕ್ತವಾಗಿದೆ - ನರೇಂದ್ರ ಮೋದಿ, ಪ್ರಧಾನಿ
ಆದರೆ ಜನರಿಗೆ ನಿಮ್ಮ ಮಾತಿನಲ್ಲಿ ವಿಶ್ವಾಸ ಇಲ್ಲವಾಗಿದೆ.


ರಾಜ್ಯ ಬಿಜೆಪಿ ಸರಕಾರ ಅನೈತಿಕವಲ್ಲ - ಶ್ರೀರಾಮುಲು, ಸಚಿವ
ಸಿಡಿಯೊಳಗೆ ಇದ್ದದ್ದು ಮಾತ್ರ ಅನೈತಿಕವೇ?


ಸತ್ಯವನ್ನು ಹೇಳುವ ಧೈರ್ಯ ಮಾಡುವ ಏಕೈಕ ರಾಜಕಾರಣಿ ರಾಹುಲ್‌ಗಾಂಧಿಯನ್ನು ಇತಿಹಾಸ ನೆನಪಿಸಿಕೊಳ್ಳಲಿದೆ-ಮೆಹಬೂಬಾ ಮುಫ್ತ್ತಿ, ಪಿಡಿಪಿ ಅಧ್ಯಕ್ಷೆ
ವರ್ತಮಾನದಲ್ಲಿ ಅವರಿಗೆ ಸ್ಥಾನವಿಲ್ಲ ಎಂದರ್ಥವೇ?


 ಬಿಜೆಪಿ ಒಂದೇ ಇರುವುದು. ಮೂಲ ಬಿಜೆಪಿ, ಸ್ವಾಭಿಮಾನಿ ಬಿಜೆಪಿ ಎಂದು ಒಡೆಯಬೇಡಿ - ಎಸ್.ಅಂಗಾರ, ಸಚಿವ
ಸಿಡಿ ಬಿಜೆಪಿ ಎಂದು ಒಟ್ಟಾಗಿ ಕರೆಯಲು ಕರೆ.


ಕೋವಿಡ್ ಲಸಿಕೆ ಪಡೆಯಲು ನಾನು ಸಿದ್ಧ - ಯಡಿಯೂರಪ್ಪ, ಮುಖ್ಯಮಂತ್ರಿ
ಮತ್ತೇಕೆ, ತಡ ಪಡೆದುಕೊಳ್ಳಿ ಎಂದು ಆರೆಸ್ಸೆಸ್ ಒತ್ತಾಯಿಸುತ್ತಿದೆಯಂತೆ.


ಕೊರೋನಕ್ಕಿಂತ ಅಪಾಯಕಾರಿಯಾದುದು ಯಾವುದು ಗೊತ್ತೇ, ಅದು ಬಿಜೆಪಿ - ನುಸ್ರತ್ ಜಹಾನ್, ನಟಿ ಮತ್ತು ಸಂಸದೆ
ಸಂಘಪರಿವಾರ ಹರಡುತ್ತಿರುವ ಕೋಮು ವೈರಸ್‌ಗೆ ಲಸಿಕೆ ಇನ್ನೂ ಕಂಡು ಹಿಡಿದಿಲ್ಲ.


ತನ್ನ ಆಂತರಿಕ ವಿಷಯಗಳಲ್ಲಿ ಅನ್ಯರ ಹಸ್ತಕ್ಷೇಪವನ್ನು ನೇಪಾಳವು ಎಂದಿಗೂ ಸಹಿಸುವುದಿಲ್ಲ - ಪ್ರದೀಪ್ ಕುಮಾರ್ ಜ್ಞವಾಲಿ, ನೇಪಾಳ ವಿದೇಶಾಂಗ ಸಚಿವ
ಆ ಹಕ್ಕಿರುವುದು ಚೀನಾಕ್ಕೆ ಮಾತ್ರ ಇರಬೇಕು.


ಸ್ವಾತಂತ್ರ ಪೂರ್ವದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಹುಟ್ಟುತ್ತಿರಲಿಲ್ಲ- ಸಿ.ಟಿ.ರವಿ, ಮಾಜಿ ಸಚಿವ
ಭಾರತಕ್ಕೆ ಸ್ವಾತಂತ್ರ ಸಿಗುವುದಕ್ಕೆ ಇವರಿಬ್ಬರು ಬಿಡುತ್ತಿರಲಿಲ್ಲ.


ರಾಜಕೀಯದಲ್ಲಿ ಅತ್ಯಂತ ವಿವಾದಕ್ಕೀಡಾಗುತ್ತಿರುವ ವ್ಯಕ್ತಿ ನಾನೊಬ್ಬನೇ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆದರೆ ಅತಿ ಹೆಚ್ಚು ಬೈಗುಳ ತಿಂದವರು ಮೋದಿಯಂತೆ, ಸಚಿವ ಸಿ.ಟಿ. ರವಿಯವರ ಪ್ರಕಾರ.


ನಾನು ಮನಃಪೂರ್ವಕವಾಗಿ ಬಿಜೆಪಿಗೆ ಸೇರಿದ್ದಲ್ಲ - ಎ.ಮಂಜು, ಮಾಜಿ ಸಚಿವ
ಹಣಃಪೂರ್ವಕವಾಗಿ ಸೇರಿರಬೇಕು.


ಬಿಜೆಪಿ ನನಗೆ ತಾಯಿ ಇದ್ದಂತೆ. ಯಡಿಯೂರಪ್ಪ ತಂದೆ ಇದ್ದಂತೆ - ರೇಣುಕಾಚಾರ್ಯ, ಮಾಜಿ ಸಚಿವ
ಹಾಗಾದರೆ ಗೋಮಾತೆ ನಿಮ್ಮ ಅಜ್ಜಿ ಇರಬಹುದೇ?


ಯಡಿಯೂರಪ್ಪ ಹಿರಿಯರು, ಹೋರಾಟಗಾರರು. ಪಕ್ಷದ ಹಿರಿಯ ನಾಯಕರು ಸಿಡಿ ವಿಚಾರದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು - ಎಂ.ಪಿ.ಕುಮಾರಸ್ವಾಮಿ, ಶಾಸಕ
ಮಾತನಾಡುವುದನ್ನು ನಿಲ್ಲಿಸಿ ಸಿಡಿಯನ್ನು ವೌನವಾಗಿ ವೀಕ್ಷಿಸಿ ಎಂದೇ?


ಕಾಂಗ್ರೆಸ್ ಸರಕಾರಕ್ಕೆ ನಿಯತ್ತು ಇರಲಿಲ್ಲವಾದ್ದರಿಂದ ರೈತಪರ ನೀತಿ ಜಾರಿಗೊಳಿಸಲೇ ಇಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಆಗ ಅಂಬಾನಿ, ಅದಾನಿಗಳು ಕೃಷಿ ಕೆಲಸ ಮಾಡುತ್ತಿರಲಿಲ್ಲ.


ನಾನು ಸುಮ್ಮನೆ ಇದ್ದಿದ್ದರೆ ಇಷ್ಟು ಹೊತ್ತಿಗೆ ಮುಖ್ಯಮಂತ್ರಿಯಾಗುತ್ತಿದ್ದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕಾಗಿ ಮಾತನಾಡುತ್ತಿದ್ದೀರಿ ಎಂದು ಕಾಣುತ್ತದೆ.


ಭೋಗಿಗಳು, ಲೋಬಿಗಳು ಪಕ್ಷ ತೊರೆಯುತ್ತಾರೆ. ತ್ಯಾಗಿಗಳು ಪಕ್ಷದಲ್ಲೇ ಉಳಿಯುತ್ತಾರೆ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ನೀವು ಕಾಂಗ್ರೆಸ್ ತೊರೆದದ್ದು ಏನನ್ನು ಹೇಳುತ್ತದೆ?


ರಜನೀ ಮಕ್ಕಳ್ ಮನ್ರಮ್ ಕಾರ್ಯಕರ್ತರು ಯಾವುದೇ ಪಕ್ಷ ಸೇರಲು ಸ್ವತಂತ್ರರು - ರಜನಿಕಾಂತ್, ನಟ
ನಿಮ್ಮ ಮಕ್ಕಳು ಸದ್ಯಕ್ಕೆ ಯಾವ ಪಕ್ಷದಲ್ಲಿದ್ದಾರೆ?


ಕೊರೋನ ಲಸಿಕೆಯಂತೆ ಭ್ರಷ್ಟಚಾರ ತಡೆಗೂ ಲಸಿಕೆ ಕಂಡುಹಿಡಿಯ ಬೇಕಾಗುತ್ತದೆ -ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಲೋಕಾಯುಕ್ತವನ್ನು ಆರೋಗ್ಯಪೂರ್ಣಗೊಳಿಸಲು ಲಸಿಕೆ ತಯಾರಿಸಿದರೆ ಭ್ರಷ್ಟಾಚಾರ ವೈರಸ್ ಇಲ್ಲವಾಗುತ್ತದೆ.


ರಾಮರಾಜ್ಯದ ಕನಸು ಕಂಡ ಮಹಾತ್ಮಾಗಾಂಧಿ ಮತ್ತು ಪೇಜಾವರ ಮಠ ವಿಶ್ವೇಶತೀರ್ಥ ಸ್ವಾಮೀಜಿಯ ಕನಸು ನನಸಾಗುತ್ತಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ರಾಮರಾಜ್ಯದ ಕನಸು ಕಂಡದ್ದಕ್ಕೆ ಗಾಂಧಿಯನ್ನು ಗುಂಡಿಟ್ಟು ಕೊಲ್ಲಲಾಯಿತೇ?


ಸಚಿವನಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಂತ ಹಾದಿ-ಬೀದಿಯಲ್ಲಿ ಮಾತನಾಡಬಾರದು - ಬೈರತಿ ಬಸವರಾಜ್, ಸಚಿವ
ಹಾದಿ ಬೀದಿಯಲ್ಲೆಲ್ಲ ಸಿಡಿಯನ್ನು ಮಾರಬಾರದು ಎಂದು ಹೇಳುತ್ತಿದ್ದಾರೆ.


ಬಿಜೆಪಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಲ್ಲ - ಸುವೇಂದು ಅಧಿಕಾರಿ, ಪ.ಬಂ. ಬಿಜೆಪಿ ನಾಯಕ
ಅದೀಗ ರಿಲಯನ್ಸ್ ಕಂಪೆನಿಯ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.


2019ರ ಬಾಲಾಕೋಟ್ ಮೇಲಿನ ದಾಳಿಯನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಬಳಸಿತ್ತು- ಇಮ್ರಾನ್‌ಖಾನ್, ಪಾಕ್ ಪ್ರಧಾನಿ
ಅದನ್ನು ನೀವು ಯಾವುದಕ್ಕೆ ಬಳಸಿಕೊಂಡಿರಿ?


ಜನರ ಭಾವನೆಗಳಿಗೆ ಧಕ್ಕೆಯಾಗಬಹುದಾದಂತಹ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುವುದಿಲ್ಲ -ಸುರೇಶ್‌ಕುಮಾರ್, ಸಚಿವ
ಇನ್ನು ಗ್ರಂಥಾಲಯ ಭಜನೆ, ವಾಸ್ತು, ಭವಿಷ್ಯ ಪುಸ್ತಕಗಳಿಗಷ್ಟೇ ಸೀಮಿತವಂತೆ.


ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಒಬ್ಬ ಹಾಸ್ಯಗಾರನಂತೆ ಮಾತನಾಡುತ್ತಿದ್ದಾರೆ - ಹರೀಶ್‌ಕುಮಾರ್, ವಿ.ಪ.ಸದಸ್ಯ
ಬಿಜೆಪಿಯನ್ನು ನಗಿಸುವುದಕ್ಕಾಗಿಯೇ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಯಡಿಯೂರಪ್ಪರ ಮುಖದಲ್ಲಿ ನಗು ತರಿಸಲು ಅವರು ವಿಫಲರಾಗಿದ್ದಾರಂತೆ.


ನಾನು ಮಂತ್ರಿಯಾಗುವ ಏಕೈಕ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸುವುದಕ್ಕಾಗಿ ಸೇರಿರಬಹುದೇ?


ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರೈತರ ಪ್ರತಿಭಟನೆ ಎಂದು ಕರೆಯುವುದು ಸೂಕ್ತವಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ದೇಶದ ಎರಡನೇ ಸ್ವಾತಂತ್ರ ಹೋರಾಟ ಎಂದು ಕರೆಯೋಣವೇ?

share
ಪಿ.ಎ.ರೈ
ಪಿ.ಎ.ರೈ
Next Story
X