Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಗೊತ್ತಿರಲಿ,ರಕ್ತದಲ್ಲಿ ಸಕ್ಕರೆ...

ನಿಮಗೆ ಗೊತ್ತಿರಲಿ,ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತವು ಸಾವಿಗೂ ಆಹ್ವಾನ ನೀಡಬಹುದು

ವಾರ್ತಾಭಾರತಿವಾರ್ತಾಭಾರತಿ26 Jan 2021 12:55 AM IST
share
ನಿಮಗೆ ಗೊತ್ತಿರಲಿ,ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತವು ಸಾವಿಗೂ ಆಹ್ವಾನ ನೀಡಬಹುದು

ಮಧುಮೇಹಿಗಳು ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವು ಹೆಚ್ಚದಂತೆ ಎಚ್ಚರಿಕೆ ವಹಿಸುತ್ತಾರೆ ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ.ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿದರೂ ತೊಂದರೆಯಿಲ್ಲ,ಆದರೆ ಅದು ಕುಸಿಯಬಾರದು. ಏಕೆಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತವು ಅಪಾಯಕಾರಿಯಾಗಿದೆ. ಅದು ವ್ಯಕ್ತಿಯನ್ನು ಕೋಮಾಕ್ಕೆ ತಳ್ಳಬಹುದು ಮತ್ತು ಅಂತಿಮವಾಗಿ ಸಾವಿನ ದವಡೆಗೂ ನೂಕಬಹುದು.

 ರಕ್ತದಲ್ಲಿ ಸಕ್ಕರೆ ಮಟ್ಟ 70 ಎಂಜಿ/ಡಿಎಲ್‌ಗಿಂತ ಕೆಳಗಿದ್ದರೆ ಅದನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಇಷ್ಟಿದ್ದರೆ ಅಥವಾ ಇದಕ್ಕೂ ಕಡಿಮೆಯಿದ್ದರೆ ಅದು ಅಪಾಯಕಾರಿಯಾಗುತ್ತದೆ. ರಕ್ತದಲ್ಲಿ ಸಕ್ಕರೆ ಕೊರತೆಯ ಸ್ಥಿತಿಯನ್ನು ವೈದ್ಯಕೀಯವಾಗಿ ಹೈಪೊಗ್ಲೈಸಿಮಿಯಾ ಎಂದು ಕರೆಯಲಾಗುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿಯಲು ಕಾರಣಗಳು

ನಮ್ಮ ಶರೀರದಲ್ಲಿ ಇನ್ಸುಲಿನ್ ಹಾರ್ಮೋನ್ ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಗ್ಲುಕೋಸ್ ಜೀವಕೋಶಗಳಲ್ಲಿ ದಾಸ್ತಾನಾಗಿರುತ್ತದೆ ಮತ್ತು ಶಕ್ತಿಗಾಗಿ ಶರೀರವು ಅದನ್ನು ಬಳಸಿಕೊಳ್ಳುತ್ತದೆ. ಇನ್ಸುಲಿನ್ ಗ್ಲುಕೋಸ್‌ನ್ನು ಜೀವಕೋಶಗಳಿಗೆ ಸಾಗಿಸುವ ಕೆಲಸವನ್ನು ಮಾಡುತ್ತದೆ. ಇನ್ಸುಲಿನ್ ಪ್ರಮಾಣದಲ್ಲಿ ಕೊರತೆಯಾದರೆ ಗ್ಲುಕೋಸ್ ಜೀವಕೋಶಗಳಿಗೆ ಸಾಗುವ ಬದಲು ರಕ್ತದಲ್ಲಿಯೇ ಸಂಗ್ರಹಗೊಳ್ಳುತ್ತದೆ. ಇದು ಮಧುಮೇಹದ ಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಕೆಳಗಿನ ಯಾವುದೇ ಕಾರಣದಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವು ಕುಸಿಯಬಹುದು.

-ಶರೀರವು ಸಕ್ಕರೆ (ಗ್ಲುಕೋಸ್)ಯನ್ನು ತ್ವರಿತವಾಗಿ ಬಳಸಿಕೊಳ್ಳುತ್ತಿದ್ದರೆ

-ಶರೀರದಲ್ಲಿ ಗ್ಲುಕೋಸ್ ಉತ್ಪಾದನೆ ತೀರ ಕಡಿಮೆಯಿದ್ದರೆ ಅಥವಾ ಅದು ರಕ್ತಪ್ರವಾಹದಲ್ಲಿ ತೀರ ನಿಧಾನವಾಗಿ ಬಿಡುಗಡೆಗೊಳ್ಳುತ್ತಿದ್ದರೆ

-ರಕ್ತಪ್ರವಾಹದಲ್ಲಿ ಇನ್ಸುಲಿನ್ ಅತಿಯಾದ ಪ್ರಮಾಣದಲ್ಲಿದ್ದರೆ

ತಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಅಥವಾ ಕೆಲವು ನಿರ್ದಿಷ್ಟ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಮಧುಮೇಹಿಗಳಲ್ಲಿ ಸಕ್ಕರೆ ಮಟ್ಟ ಕುಸಿಯುವುದು ಸಾಮಾನ್ಯವಾಗಿದೆ. ಆದರೆ ಇತರ ಹಲವಾರು ಮಧುಮೇಹ ಔಷಧಿಗಳು ಸಕ್ಕರೆ ಮಟ್ಟ ಕುಸಿತಕ್ಕೆ ಕಾರಣವಾಗುವುದಿಲ್ಲ.

ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರು ವ್ಯಾಯಾಮ ಮಾಡಿದಾಗ ರಕ್ತದಲ್ಲಿಯ ಸಕ್ಕರೆ ಮಟ್ಟ ಕುಸಿಯಬಹುದು.

ಮಧುಮೇಹವನ್ನು ಹೊಂದಿರುವ ಮಹಿಳೆಯರಿಗೆ ಜನಿಸಿದ ಶಿಶುಗಳಲ್ಲಿ ಆರಂಭದಲ್ಲಿಯೇ ರಕ್ತದಲ್ಲಿ ಸಕ್ಕರೆ ಮಟ್ಟವು ತೀವ್ರವಾಗಿ ಕುಸಿಯಬಹುದು.

ಮಧುಮೇಹ ಪೀಡಿತರಲ್ಲದ ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದರೆ,ಮೇದೋಜ್ಜೀರಕ ಗ್ರಂಥಿಯಲ್ಲಿ ಅತಿಯಾಗಿ ಇನ್ಸುಲಿನ್ ಉತ್ಪತ್ತಿಗೆ ಕಾರಣವಾಗುವ ಇನ್ಸುಲಿನೋಮಾ ಎಂಬ ಅಪರೂಪದ ಗಡ್ಡೆಯು ಬೆಳೆದಿದ್ದರೆ,ಕಾರ್ಟಿಸಾಲ್,ಬೆಳವಣಿಗೆ ಹಾರ್ಮೋನ್ ಅಥವಾ ಥೈರಾಯ್ಡೆ ಹಾರ್ಮೋನ್‌ನಂತಹ ಅಂತಃಸ್ರಾವಕಗಳ ಕೊರತೆಯಿದ್ದರೆ,ತೀವ್ರವಾದ ಹೃದಯ ಮತ್ತು ಮೂತ್ರಪಿಂಡ ಸಮಸ್ಯೆ ಅಥವಾ ಯಕೃತ್ತು ವೈಫಲ್ಯವಿದ್ದರೆ,ಇಡೀ ಶರೀರವನ್ನು ಬಾಧಿಸುವ ಸೆಪ್ಸಿಸ್ ಅಥವಾ ನೆತ್ತರುನಂಜು ಸೋಂಕಿಗೆ ತುತ್ತಾಗಿದ್ದರೆ,ಕೆಲವು ವಿಧಗಳ ತೂಕ ಇಳಿಕೆ ಶಸ್ತ್ರಚಿಕಿತ್ಸೆಗಳು (ಇಂತಹ ಶಸ್ತ್ರಚಿಕಿತ್ಸೆಯ ಐದು ಅಥವಾ ಅದಕ್ಕೂ ಹೆಚ್ಚು ವರ್ಷಗಳ ಬಳಿಕ) ಹಾಗೂ ಮಧುಮೇಹದ ಚಿಕಿತ್ಸೆಗಾಗಿ ಅಲ್ಲದ ಔಷಧಿಗಳ ಬಳಕೆ (ಕೆಲವು ಆ್ಯಂಟಿ ಬಯಾಟಿಕ್‌ಗಳು ಅಥವಾ ಹೃದ್ರೋಗ ಔಷಧಿಗಳು) ಇವು ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿಯಲು ಕಾರಣವಾಗಬಹುದು.

ಲಕ್ಷಣಗಳು

ಒಂದೇ ವಸ್ತು ಎರಡಾಗಿ ಗೋಚರಿಸುವುದು ಅಥವಾ ಮಸುಕಾದ ದೃಷ್ಟಿ,ತೀವ್ರಗೊಂಡ ಅಥವಾ ಢವಗುಡುವ ಹೃದಯಬಡಿತ,ಸಿಡುಕು ಅಥವಾ ಆಕ್ರಮಣಕಾರಿ ವರ್ತನೆ,ಅಳುಕಿನ ಭಾವನೆ,ತಲೆನೋವು,ಹಸಿವು,ಸೆಳವುಗಳು,ನಡುಗುವಿಕೆ,ಬೆವರುವಿಕೆ,ಚರ್ಮದಲ್ಲಿ ಜುಮುಗುಡುವಿಕೆ ಅಥವಾ ಮರಗಟ್ಟುವಿಕೆ,ಬಳಲಿಕೆ ಅಥವಾ ನಿಶ್ಶಕ್ತಿ,ನಿದ್ರೆ ಮಾಡಲು ಕಷ್ಟ,ಅಸ್ಪಷ್ಟ ಚಿಂತನೆ ಇವು ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದಾಗ ಕಂಡು ಬರಬಹುದಾದ ಲಕ್ಷಣಗಳಾಗಿವೆ.

ಹೆಚ್ಚಿನ ಮಧುಮೇಹಿಗಳಲ್ಲಿ ಪ್ರತಿಬಾರಿಯೂ ರಕ್ತದಲ್ಲಿ ಸಕ್ಕರೆ ಮಟ್ಟ ಒಂದೇ ಬಗೆಯ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಆದರೆ ಇದು ಎಲ್ಲರಿಗೂ ಅನ್ವಯವಲ್ಲ.

 ಹಸಿವು ಮತ್ತು ಬೆವರುವಿಕೆಯಂತಹ ಕೆಲವು ಲಕ್ಷಣಗಳು ರಕ್ತದಲ್ಲಿಯ ಸಕ್ಕರೆ ಮಟ್ಟ ಸ್ವಲ್ಪ ಮಟ್ಟಿಗೆ ಕುಸಿದಾಗ ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿಯ ಸಕ್ಕರೆ ಮಟ್ಟ ತೀರ ಕಡಿಮೆಯಾದಾಗ ಅಂದರೆ 40 ಎಂಜಿ/ಡಿಎಲ್‌ಗಿಂತ ಕೆಳಗೆ ಕುಸಿದಾಗ ಅಸ್ಪಷ್ಟ ಚಿಂತನೆ ಅಥವಾ ಸೆಳವುಗಳಂತಹ ತೀವ್ರ ಲಕ್ಷಣಗಳು ಕಂಡುಬರುತ್ತವೆ.

  ವ್ಯಕ್ತಿಯಲ್ಲಿ ಇಂತಹ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ ರಕ್ತದಲ್ಲಿಯ ಸಕ್ಕರೆ ಮಟ್ಟ ಕಡಿಮೆಯಿರಬಹುದು ಮತ್ತು ಇದನ್ನು ‘ಹೈಪೊಗ್ಲೈಸಿಮಿಕ್ ಅನ್‌ಅವೇರ್‌ನೆಸ್ ’ ಎಂದು ಕರೆಯಲಾಗುತ್ತದೆ. ಅಂತಹವರು ಬವಳಿ ಬಂದು ಬಿದ್ದಾಗ,ಸೆಳವುಗಳು ಉಂಟಾದಾಗ ಅಥವಾ ಕೋಮಾಸ್ಥಿತಿಗೆ ಜಾರಿದ ಬಳಿಕವಷ್ಟೇ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದಿದೆ ಎನ್ನುವುದು ಗೊತ್ತಾಗುತ್ತದೆ.

ನೀವು ಮಧುಮೇಹಿಯಾಗಿದ್ದರೆ ನಿರಂತರವಾಗಿ ಗ್ಲುಕೋಸ್ ಮಟ್ಟದ ಮೇಲೆ ನಿಗಾಯಿರಿಸುವ ಮಾನಿಟರ್ ಅನ್ನು ಧರಿಸಬಹುದೇ ಎಂದು ವೈದ್ಯರನ್ನು ಕೇಳಿ ತಿಳಿದುಕೊಳ್ಳಬಹುದು. ಪ್ರತಿ ಐದು ನಿಮಿಷಕ್ಕೊಮ್ಮೆ ಸಕ್ಕರೆ ಮಟ್ಟವನ್ನು ಅಳೆಯುವ ಇಂತಹ ಮಾನಿಟರ್‌ಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿಯುತ್ತಿರುವುದನ್ನು ಪತ್ತೆ ಹಚ್ಚುತ್ತವೆ ಮತ್ತು ತುರ್ತು ವೈದ್ಯಕೀಯ ಸ್ಥಿತಿಯುಂಟಾಗುವುದನ್ನು ತಡೆಯಲು ನೆರವಾಗುತ್ತವೆ. ಇಂತಹ ಕೆಲವು ಮಾನಿಟರ್‌ಗಳು ರಕ್ತದಲ್ಲಿಯ ಸಕ್ಕರೆ ಮಟ್ಟವು ನಿಗದಿತ ಮಟ್ಟಕ್ಕಿಂತ ಕೆಳಗಿಳಿದರೆ ನಿಮಗೆ ಎಚ್ಚರಿಕೆಯನ್ನು ನೀಡುತ್ತವೆ.

ಮಧುಮೇಹಿಗಳು ತಮ್ಮ ರಕ್ತದಲ್ಲಿಯ ಸಕ್ಕರೆಯ ಮಟ್ಟದ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿರುವುದು ಸಕ್ಕರೆಯ ಮಟ್ಟ ಕುಸಿಯುವುದನ್ನು ತಡೆಯಲು ನೆರವಾಗುತ್ತದೆ. ಸಕ್ಕರೆ ಮಟ್ಟ ಕುಸಿತದ ಕಾರಣಗಳು ಮತ್ತು ಲಕ್ಷಣಗಳ ಬಗ್ಗೆ ಖಚಿತವಾಗಿ ಗೊತ್ತಿಲ್ಲದಿದ್ದರೆ ವೈದ್ಯರಿಂದ ತಿಳಿದುಕೊಳ್ಳುವುದು ಒಳ್ಳೆಯದು.

ತೊಂದರೆಗಳು

ರಕ್ತದಲ್ಲಿ ಸಕ್ಕರೆ ಮಟ್ಟವು ತೀವ್ರವಾಗಿ ಕುಸಿದಾಗ ತುರ್ತು ವೈದ್ಯಕೀಯ ನೆರವು ಅಗತ್ಯವಾಗುತ್ತದೆ. ಅದು ಸೆಳವುಗಳು ಮತ್ತು ಮಿದುಳಿನ ಹಾನಿಯನ್ನುಂಟು ಮಾಡುತ್ತದೆ. ತೀವ್ರ ಸಕ್ಕರೆ ಮಟ್ಟ ಕುಸಿತದಿಂದ ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಂಡರೆ ಅಂತಹ ಸ್ಥಿತಿಯನ್ನು ಹೈಪೊಗ್ಲೈಸಿಮಿಕ್ ಅಥವಾ ಇನ್ಸುಲಿನ್ ಶಾಕ್ ಎಂದು ಕರೆಯಲಾಗುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದ ಸಂದರ್ಭದಲ್ಲಿ ರಸಗಳು ಮತ್ತು ಆಹಾರ ಸೇವನೆ,ಗ್ಲುಕೋಸ್ ಮಾತ್ರೆಗಳನ್ನು ವೈದ್ಯರು ಸೂಚಿಸುತ್ತಾರೆ. ಒಂದು ಚಮಚ ಸಕ್ಕರೆಯನ್ನು ತಿಂದರೂ ಸ್ಥಿತಿಯು ನಿಯಂತ್ರಣಕ್ಕೆ ಬರುತ್ತದೆ. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಗ್ಲುಕಾಗನ್ ಅನ್ನೂ ವೈದ್ಯರು ಶಿಫಾರಸು ಮಾಡಬಹುದು. ಇನಸುಲಿನೋಮಾದಿಂದ ಸಕ್ಕರೆ ಮಟ್ಟ ಕುಸಿದಿದ್ದರೆ ಮೇದೋಜ್ಜೀರಕ ಗ್ರಂಥಿಯಲ್ಲಿ ಬೆಳೆದಿರುವ ಗಡ್ಡೆಯನ್ನು ನಿವಾರಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.

ಒಂದು ಚಮಚ ಸಕ್ಕರೆಯನ್ನು ತಿಂದರೂ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿದ್ದರೆ ತಕ್ಷಣ ಆಸ್ಪತ್ರೆಗೆ ಧಾವಿಸಬೇಕಾಗುತ್ತದೆ. ಸ್ವಂತ ವಾಹನದಲ್ಲಿ ತೆರಳುತ್ತಿದ್ದರೆ ರೋಗಿಯೇ ಅದನ್ನು ಚಲಾಯಿಸಬಾರದು.

ಮಧುಮೇಹ ಅಥವಾ ರಕ್ತದಲ್ಲಿ ಸಕ್ಕರೆಯ ಕೊರತೆಯುಳ್ಳ ವ್ಯಕ್ತಿಯಲ್ಲಿ ಜಾಗ್ರತ ಸ್ಥಿತಿ ಕಡಿಮೆಯಿದ್ದು,ಎಬ್ಬಿಸಲು ಸಾಧ್ಯವಾಗದಿದ್ದರೆ ತಕ್ಷಣ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X