ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಪರ್ಕಳದಲ್ಲಿ ಪ್ರತಿಭಟನೆ

ಉಡುಪಿ, ಜ.26: ಪರ್ಕಳ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ 71ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೃಷಿ ಕಾಯಿದೆ ರದ್ದುಗೊಳಿ ಸುವಂತೆ ಆಗ್ರಹಿಸಿ ಉಳಿಮೆ ಮಾಡುವ ಟ್ರ್ಯಾಕ್ಟರ್ ಬಳಸಿ ಇಂದು ಪರ್ಕಳ ಬಾಬುರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಕೃಷಿಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ಪ್ರತಿಭಟನೆಗೆ ಚಾಲನೆ ನೀಡಿದರು. ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಮೋಹನದಾಸ್ ನಾಯಕ್ ಪರ್ಕಳ, ಉಪೇಂದ್ರ ನಾಯ್ಕ್, ತುಳಜಾ ಪರ್ಕಳ, ಮಂಜಪ್ಪ ಸನಿಲ್ ಕೀಳಂಜೆ, ಅಶೋಕ್ ಪೂಜಾರಿ ಕೀಳಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ, ಎ.ಪಿ.ರಾವ್ ಅಚ್ಚುತನಗರ ಪರ್ಕಳ, ಎಚ್.ರಾಜು ಪೂಜಾರಿ, ಪ್ರಕಾಶ್ ಬಿ. ನಾಯ್ಕ್, ಅಬ್ದುಲ್ ರಹೀಂ ಪರ್ಕಳ, ರಾಜೇಶ್ ಶೆಟ್ಟಿ, ಸುಧೀರ್ ಶೆಟ್ಟಿ ಹಿರಿಯಡ್ಕ, ದೇವಿಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು. ಗಣೇಶ್ ರಾಜ್ ಸರಳಬೆಟ್ಟು ಕಾರ್ಯಕ್ರಮ ಸಂಘಟಿಸಿದರು.







